Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಆರ್.ಬಿ.ವೈ.ಎಂ. ಕಾಲೇಜ್ ನಲ್ಲಿ  ಕಾರ್ಮಿಕ ಕ್ಷೇತ್ರದ ಘನತೆ ವಿದ್ಯಾರ್ಥಿ ವೇತನ ಕುರಿತ ಕಾರ್ಯಕ್ರಮ







ಬಳ್ಳಾರಿ, ಮಾ.16..: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿಂದು ಕಾರ್ಮಿಕ ಕ್ಷೇತ್ರದ ಘನತೆ ವಿದ್ಯಾರ್ಥಿ ವೇತನ 2025-26  ಎಂಬುವ ಶೀರ್ಷಿಕೆಯಡಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ವೀ.ವಿ.ಸಂಘದ ಕಾರ್ಯದರ್ಶಿ ಡಾ.ಅರವಿಂದ್ ಪಟೇಲ್, ಮಾತನಾಡುತ್ತಾ “ ಇದು ಕೇವಲ ಆರ್ಥಿಕ ಸಹಾಯವಲ್ಲ, ಬದಲಾಗಿ ಸಂಸ್ಥೆಯ ಅಭಿವೃದ್ಧಿ ಮತ್ತು ಬೆಳವಣಿಗೆಗೆ ಅವರ ಕಠಿಣ ಪರಿಶ್ರಮ ಮತ್ತು ಕೊಡುಗೆಯನ್ನು ಗುರುತಿಸುವುದು. ಆದ್ದರಿಂದ ನಾವು ಅವರನ್ನು ಬೆಂಬಲಿಸಬೇಕು, ವಿದ್ಯಾರ್ಥಿವೇತನ ಪಡೆದ ವಿದ್ಯಾರ್ಥಿಗಳು, ನೆನಪಿಡಿ,ನಿಮ್ಮ ಪೋಷಕರು ಈ ಸಂಸ್ಥೆಯಲ್ಲಿ ಕಠಿಣ ಪರಿಶ್ರಮ ಮಾಡುತ್ತಿದ್ದಾರೆ, ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ ಮತ್ತು ಅವರ ಜೀವನಶೈಲಿಯನ್ನು ಉನ್ನತೀಕರಿಸುತ್ತಾರೆ ಮತ್ತು ಭವಿಷ್ಯದಲ್ಲಿ ಅವರಿಗೆ ಜೀವಮಾನದ ಸಂತೋಷವನ್ನು ನೀಡುತ್ತಾರೆ.ಇದು ತುಂಬಾ ಒಳ್ಳೆಯ ಹೆಜ್ಜೆ ಮತ್ತು ಆರ್. ವೈ. ಎಂ. ಇ. ಸಿ ತೆಗೆದುಕೊಂಡ ಮೊದಲ ಹೆಜ್ಜೆ. ಹಳೆಯ ವಿದ್ಯಾರ್ಥಿಗಳ ಸಂಘ, ಈ ಒಂದು ಅವಕಾಶವನ್ನು ನೀವು ಸದ್ಬಳಕೆ ಮಾಡಿಕೊಳ್ಳಿ, ನೀವು ಆಚರಿಸುವ ಕಾರ್ಯಕ್ರಮವನ್ನು ಮಾಡುತ್ತಾ ನಮ್ಮ ಪರಿಸರವನ್ನು ನಮ್ಮ ವಿದ್ಯಾಲಯದ ಪರಿಸರಗಳು ಸ್ವಚ್ಚ ವಾಗಿ ಇಡುತ್ತಾ ಬಂದಿದ್ದೀರಿ ನಿಮ್ಮ ಮಕ್ಕಳಿಗೆ ಓದಲು ಹಣಕಾಸಿನ ಸಹಾಯ ಮಾಡುವುದು ನಮ್ಮ ಉದ್ದೇಶ ಹಾಗೂ ನಿಮ್ಮ ಮಕ್ಕಳಿಗೆ ಒಳ್ಳೆಯದು ಆಗುತ್ತದೆ , ಒಬ್ಬ ಮನುಷ್ಯನಿಗೆ ಬದುಕುವುದಕ್ಕೆ ಆಹಾರ ಎಷ್ಟು ಮುಖ್ಯವೋ ಹಾಗೆ ವಿದ್ಯೆ ಕೂಡ ಮುಖ್ಯ , ಇಲ್ಲಿ ಸಂಸ್ಥೆಯಲ್ಲಿ ಓದಿದೆ ಹಳೆ ವಿದ್ಯಾರ್ಥಿಗಳು ಬಡವಿದ್ಯಾರ್ಥಿಗಳು ಆಗಿದ್ದು ಹಿಂದೆ ಕಷ್ಟಪಟ್ಟು ಓದಿ ಬಹುದೊಡ್ಡ ಸಂಸ್ಥೆಗಳಲ್ಲಿ ಉನ್ನತ ಉದ್ಯೋಗಗಳು ಮಾಡುತ್ತ ಅವರ ಕುಟುಂಬದ ಸದಸ್ಯರನ್ನು ಅಭಿವೃದ್ಧಿಗೆ ತಂದಿರುತ್ತಾರೆ ಅನ್ನೋದು ನೆನಪಿರಲಿ , ಮಕ್ಕಳು ಚೆನ್ನಾಗಿ ಓದಿದರೆ ಮುಂದಿನ ಭವಿಷ್ಯ ಚೆನ್ನಾಗಿದ್ದರೆ ಈ ದಿಗ್ನಿಟಿ ಆಫ್ ಲೇಬರ್ - ಅಂದರೆ ಪ್ರತಿಯೊಂದು ಕೆಲಸಕ್ಕೆ ಆದರೆ ಆದ ಮಹತ್ವ ಇದೆ , ಎಲ್ಲಾ ಉದ್ಯೋಗಗಳು ಎಲ್ಲಾ ಕೆಲಸಗಳಿಗೆ ಸಮಾನತೆ ಇದೆ ನಾವು ಕೆಳಗೆ ಇದ್ದೇವೆ ಎಂಬ ಭಾವನೆ ಬೇಡ ಅದಕ್ಕೆ ಡಿಗ್ನಿಟಿ ಆಫ್ ಲೇಬರ್ ಅನ್ನೋದಕ್ಕೆ ಎನ್ನುವ ಮಹತ್ವವಿದೆ , ಹಿಂದೆ ಒಬ್ಬ ಮನುಷ್ಯನ ಮಾರಾಟ ಮಾಡುವ ದಿನಗಳಿಂದ ಹೊರಬಂದಿದೆ, ನಾಗರಿಕ ಸಮುದಾಯಕ್ಕೆ ಒಳಿತಲ್ಲ ಬದಲಿಗೆ ನಮ್ಮ ಶರಣ ಸಂಸ್ಕೃತಿಯಲ್ಲಿ ಎಲ್ಲಾ ಕೆಲಸಗಳು ಸಮಾನತೆ ಇರುವುದು,ವಿದ್ಯಾಭ್ಯಾಸಕ್ಕೆ ಒಳಿತಾಗಲಿ ಕುಟುಂಬಕ್ಕೆ ಒಳ್ಳೇದು ಆಗಲಿ ಎಂದು ನಾನು ಶುಭ ಹಾರೈಸುತ್ತೇನೆ “ಎಂದು ಮಾತನಾಡಿದರು,

ಈ ಸಂದರ್ಭದಲ್ಲಿ ಪ್ರಾಂಶುಪಾಲರು ಡಾ. ರಾಜಶೇಖರನ್ ಷಣ್ಮುಗಂ, ಮಾತನಾಡುತ್ತ “ಇದು ಬಹಳ ಮುಖ್ಯವಾದ ಕಾರ್ಯಕ್ರಮವಾಗಿದೆ, ನಮ್ಮ ಸಂಸ್ಥೆಯ ಕಾರ್ಮಿಕರು ನಮ್ಮ ಸಂಸ್ಥೆಯ ಬಹಳ ಮುಖ್ಯವಾದ ಭಾಗ. ನಾವು ಅವರ ಜೀವನವನ್ನು, ವಿಶೇಷವಾಗಿ ಅವರ ಮಕ್ಕಳನ್ನು ಉನ್ನತೀಕರಿಸಬೇಕು, ಭಾರತದ ಸಂವಿಧಾನವು ಅವರು ನಿರ್ವಹಿಸುವ ಕಾರ್ಮಿಕ ಕೆಲಸದ ಪ್ರಕಾರವನ್ನು ಲೆಕ್ಕಿಸದೆ ಎಲ್ಲರಿಗೂ ಶಿಕ್ಷಣದ ಹಕ್ಕನ್ನು ನೀಡಿದೆ, ನಮ್ಮ ಸಂಸ್ಥೆಯ ಕಾರ್ಮಿಕರು ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ನಮ್ಮ ಭಾಗವಾಗಿದೆ, ನಾವು ಅವರಿಗೆ ಆರ್ಥಿಕ ಬೆಂಬಲವನ್ನು ಒದಗಿಸಬೇಕು” ಎಂದು ನುಡಿದರು, ಡೀನ್ ಶೈಕ್ಷಣಿಕ ಡಾ.ಹೊಸಳ್ಳಿ ಗಿರೀಶ್, ಡೀನ್ ಪರೀಕ್ಷೆ ಡಾ ಶ್ರೀಪತಿ.ಬಿ, "ನಮ್ಮ ಶರಣ ಸಂಸ್ಕೃತಿಯಲ್ಲಿ ಕಾಯಕವೇ ಕೈಲಾಸ , ಯಾವುದೇ ಕೆಲಸವಿರಲಿ ಎಲ್ಲಾ ಸಮಾನತೆ ಇರುವುದು, ಹಣಕ್ಕಿಂತ ಮಕ್ಕಳ ವಿದ್ಯಾಭ್ಯಾಸಕ್ಕೆ ಆದ್ಯತೆ ಕೊಡಿ, ಮಕ್ಕಳಿಗೆ ಪ್ರಾಮುಖ್ಯತೆ ಇರಲಿ ನಿಮಗೆ ಮುಂದೆ ಹಣ ಬಂದೇ ಬರುತ್ತದೆ ನೀವು ವಿದ್ಯೆಯ ಹಿಂದೆ ಹೋಗಿರಿ ಹಣದ ಹಿಂದೆ ಹೋಗಬೇಡಿ, ಮಕ್ಕಳ ಶಿಕ್ಷಣವು ಭವಿಷ್ಯದಲ್ಲಿ ನಿಮಗೆ ಬಹಳಷ್ಟು ಹಣವನ್ನು ತರುತ್ತದೆ ಎಂದು ನೆನಪಿರಲಿ”  ಎಂದು ನುಡಿದರು , ಇದೇ ಸಂದರ್ಭದಲ್ಲಿ ಡಾಕ್ಟರ್ ಸಾಯಿ ಮಹಾದೇವಿ ಡಾಕ್ಟರ್ ಕೊಟ್ರೇಶ್ ಇನ್ನಿತರರು ತಮ್ಮ ಅನುಭವಗಳನ್ನು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು  ಶ್ರೀಮತಿ ಸೌಮ್ಯ ಆಲ್ದಲ್ಲಿ ನಿರೂಪಿಸಿದರು,







Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ