Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕುವೆಂಪುರವರ ಸಾಧನೆಗಳು ಮಾತನಾಡುತ್ತವೆ - ಟಿ ಹೆಚ್ ಎಂ  ಬಸವರಾಜ

ಬಳ್ಳಾರಿ05..: ಕುವೆಂಪುರವರು ಮರೆಯಲಾಗದ ಮಹಾನುಭಾವರಲ್ಲಿ ಒಬ್ಬರು. ಅವರ ಸಾಧನೆಗಳನ್ನು ಪುಸ್ತಕಗಳು ಮಾತನಾಡುತ್ತವೆ ಎಂದು ಇತಿಹಾಸ ಸಂಶೋಧಕರಾದ ಟಿ.ಎಚ್.ಎಂ.ಬಸವರಾಜ ಅವರು ಅಭಿಪ್ರಾಯಪಟ್ಟರು.

ಇತ್ತೀಚೆಗೆ ನಗರದ ಡಾ.ರಾಜಕುಮಾರ್ ರಸ್ತೆಯಲ್ಲಿರುವ ಹೊಂಗಿರಣ ಸಭಾಂಗಣದಲ್ಲಿ ಶ್ರೀ ಮಾರುತಿ ತೊಗಲಗೊಂಬೆ ಕಲಾ ಟ್ರಸ್ಟ್ ಹಮ್ಮಿಕೊಂಡ ವಿಶ್ವಮಾನವ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿಯಲ್ಲಿರುವ ಅವರ ಮನೆ ವಸ್ತು ಸಂಗ್ರಹಾಲಯವಾಗಿದೆ. ಕವಿ ಶೈಲ ನಿಸರ್ಗಧಾಮದಲ್ಲಿ ಅವರ ಸಮಾಧಿ ಇದೆ. ಕನ್ನಡವೇ ಅವರ ಉಸಿರಾಗಿತ್ತು ಎರಡನೇ ರಾಷ್ಟ್ರಕವಿಯಾಗಿ ಎಲ್ಲರ ಮನಗಳಲ್ಲಿ ಮನೆ ಮಾಡಿದ್ದರು ಎಂದರು.

ಗೋವಿಂದ ಪೈ ಅವರು ಮೊಟ್ಟ ಮೊದಲ ರಾಷ್ಟ್ರಕವಿ ಮಂಗಳೂರು ಜಿಲ್ಲೆಯ ಮಂಜೇಶ್ವರದವರು ಇಂದಿಗೂ ಅವರ ಮನೆಯನ್ನು ಗಿಳಿ ವಿಂಡೋ ಕನ್ನಡ ಸಂಶೋಧನಾ ಕೇಂದ್ರವಾಗಿ ಅಲ್ಲಿಯ ಸರ್ಕಾರದವರು ಮಾಡಿದ್ದಾರೆ ಈಗ ಮಂಜೇಶ್ವರ ಕಾಸರಗೋಡು ಜಿಲ್ಲೆಯಲ್ಲಿದೆ. ಅವರ ಕೃತಿಗಳನ್ನು ನಾವು ಓದಬೇಕು ಆಚರಿಸಬೇಕು. ಅವರ ಪುಸ್ತಕಗಳಲ್ಲಿನ ಸಾಹಿತ್ಯವನ್ನು ಮಸ್ತಕದಲ್ಲಿ ಇಟ್ಟುಕೊಳ್ಳಬೇಕೆಂದು ತಿಳಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎನ್ ವೀರಭದ್ರಗೌಡ ಮಾತನಾಡಿ, ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಈ ನಿಟ್ಟಿನಲ್ಲಿ  ಕುವೆಂಪುರವರನ್ನು ಸ್ಮರಿಸುವುದು ಅತ್ಯಂತ ಅರ್ಥಪೂರ್ಣವಾಗಿದೆ ಎಂದು ತಿಳಿಸಿದರು. ಮೊದಲ ರಾಷ್ಟ್ರಕವಿ ಗೋವಿಂದಪ್ಪ ಅವರನ್ನು ಸಹಿತ ಮರೆಯಬಾರದೆಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿದ್ದರಾಮ ಕಲ್ಮಠರವರು ಕುವೆಂಪುರವರ ಕೃತಿಗಳ ಬಗ್ಗೆ ವಿವರವಾಗಿ ತಿಳಿಸಿದರು. ಕಲಾವಿದೆ ವೀಣಾ ಕುಮಾರಿ ನಿವೃತ್ತ ಶಿಕ್ಷಕ ಕೆಎಂ ಸಿದ್ದಲಿಂಗಯ್ಯ ಸ್ವಾಮಿ ಜೋಳದ ರಾಶಿ ಬಸವರಾಜ್ ಉಪಸ್ಥಿತರಿದ್ದರು.  ಎಲ್ಲಂ ಗೌಡ ಶಂಕರ ಬಂಡೆಯವರಿAದ ಕುವೆಂಪು ರಚಿತ ಗೀತ ಗಾಯನ ನಡೆಯಿತು. ವೀಣಾ ಕುಮಾರಿಯವರಿಂದ ರಂಗ ಗೀತೆಗಳು ಹಾರ್ಮೋನಿಯಂ ಮುದುಕನೂರ್ ತಿಪ್ಪೇಸ್ವಾಮಿ ತಬಲಾ ವಿರೂಪಾಕ್ಷಪ್ಪ ದೇವಲಾಪುರ ತಾಂಡವ ನೃತ್ಯ ಕಲಾ ಟ್ರಸ್ಟ್ ಇವರಿಂದ ಸಮೂಹ ನೃತ್ಯಗಳು ನಡೆದವು.

ವೀಣಾ ಕುಮಾರಿ ಪ್ರಾರ್ಥಿಸಿದರು. ವೀರೇಶ್ ದಳವಾಯಿ ಸ್ವಾಗತಿಸಿ, ನಿರೂಪಿಸಿ ವಂದಿಸಿದರು. ಟ್ರಸ್ಟ್ ಅಧ್ಯಕ್ಷ ಸುಬ್ಬಣ್ಣ ಮತ್ತು ತುಳಸಿಯವರು ಎಲ್ಲಾ ಗಣ್ಯರನ್ನು ಸನ್ಮಾನಿಸಿ ಗೌರವಿಸಿದರು. ರಮಣಪ್ಪ ಭಜಂತಿ,್ರ ಪಂಪಾಪತಿ ಶ್ರೀಧರ ಗಡ್ಡೆ ಕುಮಾರ್ ಮುಂತಾದದವರು ಇದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ