Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕೆಎಲ್‌ಇ ಪಿಯು ಕಾಲೇಜ ವಿದ್ಯಾರ್ಥಿಗಳ ಸಾಧನೆಗೆ ಅಮಿತ ಕೋರೆ ಮೆಚ್ಚುಗೆ

ಬೆಳಗಾವಿ ಏ., 22- ಕೆ.ಎಲ್.ಇ. ಸಂಸ್ಥೆಯ ವಿದ್ಯಾರ್ಥಿಗಳು ದ್ವಿತೀಯ ಪಿಯ ಉತ್ತಮ ಸಾಧನೆ ಮಾಡಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ ಎಂದು ಸಂಸ್ಥೆಯ ಕಾರ್ಯಾಧ್ಯಕ್ಷರಾದ ಅಮಿತ ಕೋರೆ ಸಂತೋಷ ವ್ಯಕ್ತಪಡಿಸಿದರು.

ಅವರು ನಗರದಲ್ಲಿಂದು ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಸಪ್ತರ್ಷಿಗಳ ಆಶಯದಂತೆ ಸಂಸ್ಥೆ ನಡೆದುಕೊಂಡು ಬಂದಿದ್ದು, ಮುಂದೆಯು ಅವರ ಆಶಯಗಳಂತಯೆ ನಡೆಯಲಿದೆ ಎಂದರು. ಸಂಸ್ಥೆಯು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಉನ್ನತ ಶಿಕ್ಷಣ ದೊರಕುವಂತಾಗಲು ಸಂಸ್ಥೆಯು ಶ್ರಮಿಸುತ್ತಿದೆ. ಈಗ ಅವರಿಗೆ ನೀಟ್, ಜೆ.ಇ., ಸಿ.ಇ.ಟಿ., ಸಿ.ಎ. ಅಂತಹ ಸ್ಪರ್ಧಾತ್ಮಕ ಪರೀಕ್ಷೇಗಳಿಗೆ ಅಣಿಯಾಗಲು ತರಬೇತಿಯನ್ನು ನೀಡಲಾಗುತ್ತಿದೆ ಎಂದರು.

ಬಡ ಮತ್ತು ವಿದ್ಯಾವಂತ ಮಕ್ಕಳಿಗಾಗಿ ಕೆ.ಎಲ್‌.ಇ. ಸಂಸ್ಥೆ ಶೀಘ್ರದಲ್ಲಿ ಸ್ಕಾಲರ್‌ ಶೀಪ್‌ ಯೋಜನೆ ತರಲಿದೆ ಮತ್ತು ಬೆಳಗಾವಿ ಭಾಗದಲ್ಲಿ ವಸತಿ ಸಹಿತ ಕಾಲೇಜ್‌ ಪ್ರಾರಂಭಿಸಲಾಗುವುದು ಎಂದು ಅಮಿತ ಕೋರೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ನಿರ್ದೇಶಕರಾದ ಮಾಜಿ ಸರ್ಕಾರಿ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ,  ಕೆಎಲ್‌ಇ ಸಂಸ್ಥೆಯು ಕ್ರೀಡಾಪಟುಗಳಿಗೆ ಉತ್ತಮವಾದ ತರಬೇತಿಯನ್ನು ನೀಡುತ್ತಿದ್ದು, ಖೇಲೋ ಇಂಡಿಯಾದಲ್ಲಿ ಕೆಎಲ್‌ಇ ವಿದ್ಯಾರ್ಥಿಗಳು ಸಾಧನೆ ಗೈದಿದ್ದು, ಮುಂಬರುವ ದಿನಗಳಲ್ಲಿ ಓಲಂಪಿಕನಲ್ಲಿ ಅರ್ಹತೆ  ಪಡೆಯುವ ನಿಟ್ಟಿನಲ್ಲಿ ಸುಸಜ್ಜಿತ ಹಾಗೂ ಅತ್ಯಾಧುನಿಕ ಕ್ರೀಡಾ ಸಲಕರಣೆಗಳ ಜೊತೆಗೆ ತರಬೇತಿ  ನೀಡಲಾಗುತ್ತಿದೆ ಎಂದು ತಿಳಿಸಿದರು.

news_1776864656_0_866.webp

 

 ಪ್ರತಿವರ್ಷ ಕೆಎಲ್‌ಇ ಪಿಯು ಕಾಲೇಜುಗಳ ಫಲಿತಾಂಶದಲ್ಲಿ ದಾಖಲಾರ್ಹ ಬದಲಾವಣೆಯಾಗಿರುವುದು ಅವಲೋಕಿಸಬಹುದು. ರಾಜ್ಯಮಟ್ಟದಲ್ಲಿ ಕೆಎಲ್‌ಇ ವಿದ್ಯಾರ್ಥಿಗಳು ರ‍್ಯಾಂಕ್‌  ಪಡೆಯುವ ಮೂಲಕ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಪ್ರಸಕ್ತ 2025-26ನೇ ಸಾಲಿನಲ್ಲಿ 11,516 ವಿದ್ಯಾರ್ಥಿಗಳಲ್ಲಿ 11,047 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಒಟ್ಟಾರೆ 95.93% ಫಲಿತಾಂಶವನ್ನು ಸಂಸ್ಥೆಗೆ ತಂದುಕೊಟ್ಟಿದ್ದಾರೆ. ಕಲಾ ವಿಭಾಗದಲ್ಲಿ 91.29%, ವಾಣಿಜ್ಯ ವಿಭಾಗದಲ್ಲಿ 96.62% ಹಾಗೂ ವಿಜ್ಞಾನ ವಿಭಾಗದಲ್ಲಿ 96.83% ಫಲಿತಾಂಶ ಬಂದಿದೆ.  

ಪ್ರಸಕ್ತ ಸಾಲಿನಲ್ಲಿಯೇ ರಾಜ್ಯಮಟ್ಟದಲ್ಲಿ 27 ರ‍್ಯಾಂಕ್‌ಗಳು ಕೆಎಲ್‌ಇ ಸಂಸ್ಥೆಯ ಪಾಲಾಗಿವೆ. ಕಲಾ ವಿಭಾಗದಲ್ಲಿ 5, ವಾಣಿಜ್ಯ ವಿಭಾಗದಲ್ಲಿ 13, ವಿಜ್ಞಾನ ವಿಭಾಗದಲ್ಲಿ 9 ವಿದ್ಯಾರ್ಥಿಗಳು ರ‍್ಯಾಂಕ್‌ ಪಡೆದಿದ್ದಾರೆ.

ವ್ಯವಹಾರ ಅಧ್ಯಯನದಲ್ಲಿ 172, ಗಣಿತದಲ್ಲಿ 138, ಅರ್ಥಶಾಸ್ತ್ರದಲ್ಲಿ 119, ಕಂಪ್ಯೂಟರ್‌ ಸೈನ್ಸನಲ್ಲಿ 102 ಹೀಗೆ ಒಟ್ಟಾರೆಯಾಗಿ ಕೆಎಲ್‌ಇ ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ 1007 100ಕ್ಕೆ100 ಅಂಕಗಳನ್ನು ಪಡೆದು ಮೈಲುಗಲ್ಲು ನಿರ್ಮಿಸಿದ್ದಾರೆ.

ಕಲಾ ವಿಭಾಗದಲ್ಲಿ 410, ವಾಣಿಜ್ಯದಲ್ಲಿ 1,251 ವಿದ್ಯಾರ್ಥಿಗಳು, ವಿಜ್ಞಾನದಲ್ಲಿ 2,270 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ (85% ಹೆಚ್ಚು) ಫಲಿತಾಂಶವನ್ನು ಪಡೆದುಕೊಂಡಿದ್ದಾರೆ. 6,163 ವಿದ್ಯಾರ್ಥಿಗಳು ಪ್ರಥಮಸ್ಥಾನದಲ್ಲಿ ಪಾಸಾಗಿರುವುದು ಹೆಮ್ಮೆಯ ಸಂಗತಿ.

ಕೇವಲ ನಗರ ಪ್ರದೇಶಗಳಿಗೆ ಸಿಮೀತವಾಗಿದ್ದ ಐಐಟಿ ಪ್ರವೇಶ ಪರೀಕ್ಷೆ JEE  ರ‍್ಯಾಂಕ್‌ಗಳು ಇಂದು ಕೆಎಲ್‌ಇ ಸಂಸ್ಥೆಯು ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಪ್ರಾರಂಭಿಸಿದ ಇಂಟಿಗ್ರೇಟೆಡ್‌ ಪದವಿಪೂರ್ವ ಕಾಲೇಜುಗಳಿಂದ ಗ್ರಾಮೀಣ ಭಾಗದ  ವಿದ್ಯಾರ್ಥಿಗಳಿಗೂ  ಲಭಿಸುವಂತಾಗಿದೆ ಎಂದರು.

ಪ್ರಸಕ್ತ ವರ್ಷದ JEE ಪರೀಕ್ಷೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಅಗ್ರ 500 ರ‍್ಯಾಂಕ್‌ಗಳಲ್ಲಿ ಸ್ಥಾನ ಪಡೆದಿದ್ದರೆ, ಮೂವರು ವಿದ್ಯಾರ್ಥಿಗಳು 1,000 ಒಳಗೆ, 5 ವಿದ್ಯಾರ್ಥಿಗಳು 2,000 ಒಳಗೆ, 9 ವಿದ್ಯಾರ್ಥಿಗಳು 5,000 ಒಳಗೆ ಹಾಗೂ 14 ವಿದ್ಯಾರ್ಥಿಗಳು 10,000 ಒಳಗಿನ ರ‍್ಯಾಂಕ್‌ ಪಡೆದಿರುತ್ತಾರೆ.  ಒಟ್ಟಾರೆ 100 ಕ್ಕಿಂತಲೂ ಅಧಿಕ ಕೆಎಲ್‌ಇ ವಿದ್ಯಾರ್ಥಿಗಳು JEE Advance ಪರೀಕ್ಷೆ ಬರೆಯಲು ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ರಾಜ್ಯಮಟ್ಟದಲ್ಲಿ ಪಿಯು ರ‍್ಯಾಂಕ್‌ ಪಡೆದ ಕೆಎಲ್‌ಇ ವಿದ್ಯಾರ್ಥಿಗಳಿಗೆ ಅಭಿನಂದಿಸಲಾಯಿತು.   ಜಯಾನಂದ ಮುನವಳ್ಳಿ, ಆಜೀವ ಸದಸ್ಯರಾದ ಡಾ.ಸತೀಶ ಎಂ.ಪಿ. ಮತ್ತು ಎಸ್.ಜಿ.ನಂಜಪ್ಪನವರ ಅವರು ಉಪಸ್ಥಿತರಿದ್ದರು.

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೆಹಲಿಗೆ ಕರ್ನಾಟಕದ ನಾರಿನ ಉತ್ಪನ್ನಗಳು ಸರಬರಾಜು : ಸಿ ಎಂ ಸಿದ್ದರಾಮಯ್ಯ ಚಾಲನೆದೆಹಲಿಗೆ ಕರ್ನಾಟಕದ ನಾರಿನ ಉತ್ಪನ್ನಗಳು ಸರಬರಾಜು : ಸಿ ಎಂ ಸಿದ್ದರಾಮಯ್ಯ ಚಾಲನೆಕೆಎಲ್‌ಇ ಪಿಯು ಕಾಲೇಜ ವಿದ್ಯಾರ್ಥಿಗಳ ಸಾಧನೆಗೆ ಅಮಿತ ಕೋರೆ ಮೆಚ್ಚುಗೆಖಾಕಿ ಗೌರವಕ್ಕೆ ಸ್ತ್ರೀಶಕ್ತಿಯ ನಮನ: ದಾರಿದೀಪ ಸಂಸ್ಥೆಯಿಂದ ಮಹಿಳಾ ಪೊಲೀಸ್ ಅಧಿಕಾರಿ ಚೆನ್ನಮ್ಮ ಕರ್ನಾಲ್ ಅವರಿಗೆ ಸನ್ಮಾನ*ನಾಳೆ ಬಾಗಲಕೊಟೆ ವಿವಿಯ ಪ್ರಥಮ ಘಟಿಕೋತ್ಸವ ; ರಾಜ್ಯಪಾಲರು ಭಾಗಿವಿಶ್ವ ಪುಸ್ತಕ ದಿನ  ಮತ್ತು ಕನ್ನಡ ಪುಸ್ತಕೋದ್ಯಮಧಾರವಾಡದ ಎ ಜಿ ಎಂ ಆರ್ ಸಿ ಇ ಟಿ ಕಾಲೇಜಿಗೆ ‘ಟಿಸಿಎಸ್ ಟೆಕ್ ಬೈಟ್ಸ್’ ಹುಬ್ಬಳ್ಳಿ ವಲಯ ಮಟ್ಟದ ಪ್ರಶಸ್ತಿಅಶಿಸ್ತು ಮುಂದುವರೆಸಿದರೆ ಅಧಿಕಾರಿಗಳು, ಸಿಬ್ಬಂದಿ ಮೇಲೆ ಕ್ರಮ: ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಎಚ್ಚರಿಕೆಪ್ರಾಣೇಶರಿಂದ ನಗೆಹಬ್ಬ ಕಾರ್ಯಕ್ರಮಬಿ-ಖಾತಾ ಮಾಲೀಕರಿಗೆ ತೊಂದರೆ, ಜಿಲ್ಲಾ ಪ್ರಜಾ ಜಾಗೃತಿ ವೇದಿಕೆ ಮುಖ್ಯ