Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

" ಕೂಡಿ ಬಂತು ಕಂಕಣ ಬಲ" ನಾಟಕ ಪ್ರಯೋಗ, ಮತ್ತು ನಾಟಕದ ಕೃತಿ ಬಿಡುಗಡೆ   

           

   ಕೊಪ್ಪಳ : ಕೊಪ್ಪಳ ತಾಲುಕಿನ ಮೈನಹಳ್ಳಿ ಗ್ರಾಮದ ಶ್ರೀ ಶಿವಶರಣಿ ಬುಡ್ಡಮ್ಮ ದೇವಿಯ ಜಾತ್ರೆಯ ಪ್ರಯುಕ್ತ ಶ್ರೀ ಗುರುಬಸವರಾಜೇಶ್ವರ ನಾಟ್ಯ ಸಂಘ ಮೈನಹಳ್ಳಿ ದಿ.4-03-2026 ರಂದು ಅಭಿನಯಿಸಿದ "ಕೂಡಿ ಬಂತು ಕಂಕಣ ಬಲ ( ಸುಂದರ ಸಾಮಾಜಿಕ ನಾಟಕ ) ನಾಟಕಕ್ಕೆ ದಿ. ಮಹಾದೇವಪ್ಪ.ನಿ. ಬಾಸಿಂಗದಾರ ಮಾ. ತಾ.ಪಂ.ಅಧ್ಯಕ್ಷರ ಇವರ ಸ್ಮರಣಾರ್ಥ ಅವರ ಮಕ್ಕಳಾದ ಮಂಜುನಾಥ ಬಾಸಿಂಗದಾರ ಶಿಕ್ಷಕರು ಮತ್ತು ಸುಧಿರಬಾಬು ಬಾಸಿಂಗದಾರ ಕೆ.ಇ.ಬಿ ಮತ್ತು ಶ್ರೀ ಕನ್ನಡಾಂಬೆ ಯುವಕರ ಸಂಘದ ಅಧ್ಯಕ್ಷರಾದ ವಿರುಪಾಕ್ಷಯ್ಯ ತೋಟದವರು ಮತ್ತು ಸಂಘದ ಸದಸ್ಯರ ಸಹಾಯದಿಂದ ಅವರ ಆಶ್ರಯದಲ್ಲಿ 3ನೇ ಬಾರಿಗೆ ನಾಟಕ ಪ್ರದರ್ಶನ ಕಂಡಿತು , ಮತ್ತು ಕೊಟ್ರೇಶ ಬಳಗೇರಿ. ನಿ. ಶಿಕ್ಷಕರು ಅವರ ತಂದೆಯವರಾದ ದಿ. ಫಕೀರಣ್ಣ .ಬ. ಬಳಿಗೇರಿ ಇವರ ಸ್ಮರಣಾರ್ಥ ಮುದ್ರಣಕ್ಕೆ ಸಹಕರಿಸಿದ್ದಕ್ಕೆ ರಂಗಪ್ರಯೋಗದ ಸಂದರ್ಭದಲ್ಲಿ ನಾಟಕದ ಪುಸ್ತಕ ಬಿಡುಗಡೆ ಮಾಡಲಾಯಿತು. ನಾಟಕ ಪುಸ್ತಕವನ್ನು ಈಶಪ್ಪ ಮಾಸ್ತರ ಓಜನಹಳ್ಳಿ ಸ‌ಂಗೀತ ನಿರ್ದೇಶಕರು ಬಿಡುಗಡೆ ಮಾಡಿ ನಾಟಕದ ಬಗ್ಗೆ ಮಾತನಾಡುತ್ತ ಕವಿಗಳ ಶ್ರಮ, ಸಾಹಿತ್ಯದ ಸಾಧನೆಯ ಬಗ್ಗೆ ತಿಳಿಸಿದರು‌. ಮತ್ತು ಕೊಟ್ರೇಶ ಬಳಗೇರಿ ನಿ. ಶಿಕ್ಷಕರು ಕವಿಗಳ ತಮ್ಮ ಒಟನಾಟ, ಚಟುವಟಿಕೆ ಬಗ್ಗೆ ತಿಳಿಸಿದರು ನಂತರ ಕವಿಗಳಾದ ಡಾ. ಷಣ್ಮುಖಯ್ಯ. ಎ. ತೋಟದರುವರು ಸನ್ಮಾನವನ್ನು ಸ್ವೀಕರಿಸಿ ಮಾತಾಡುತ್ತ ಮಾಹಾದೇವಪ್ಪ ಬಾಸಿಂಗದಾರ ಮಾ. ತಾ. ಪ. ಅಧ್ಯಕ್ಷರಾಗಿದ್ದಾಗ ಮಾಡಿದ ಸಾಧನೆ , ಜೊತೆಗೆ ಕನ್ನಡಾಂಬೆ ಯುವಕರ ಸಂಘ(ರಿ) ಗ್ರಾಮದ ಅಭಿವೃದ್ದಿಗೆ ನೀಡಿದ ಕೊಡುಗೆ ಮತ್ತು ಕಾರ್ಯಕ್ರಮಗಳ ಬಗ್ಗೆ ಹಾಗು ಕೋಟ್ರೆಶ ಬಳಿಗೇರಿಯವರು ನಾಟಕ, ಸಾಹಿತ್ಯದ ಒಲವಿನ ಬಗ್ಗೆ ತಿಳಿಸುತ್ತ ಸಹಾಯ ಮತ್ತು ಸಹಕಾರ ನೀಡಿದ ಎಲ್ಲರಿಗೂ ಕೃತದ್ಞತೆ ಸಲ್ಲಿಸುತ್ತ ನಾಟಕವು ಸಮಾಜದ ಲೊಪ ದೋಷಗಳನ್ನು ರಂಗ ಪ್ರಯೋಗ ಮಾಡುವದರ ಮೂಲಕ ತಿದ್ದುವ ಕಾರ್ಯ ಮಾಡುತ್ತದೆ. ಇಂದಿನ ಸಮಾಜಕ್ಕೆ ರಂಗಭೂಮಿ ಅವಶ್ಯವಿದೆ ಎಂದು ತಿಳಿಸಿದರು . 
 
   ಈ ಸಂದರ್ಭದಲ್ಲಿ ಹಿರಿಯ ಕಲಾವಿದರು‌ ಮತ್ತು ಸಮಾಜ ಸೇವಕರು, ಎಸ್.ಎಸ್. ಎಲ್.ಸಿ.ಯಲ್ಲಿ‌ ಹೆಚ್ವು ಅಂಕ ಗಳಿಸಿದ ಅಭೀಷೆಕ ಬಳಿಗೇರಿ ಮತ್ತು ಸಂಪಾದಕರಾದ ಉದಯ.ಎಸ್. ತೋಟದ ಯುವ ಜಾಗೃತಿ ದಿನ ಪತ್ರಿಕೆ ಸೇರಿ ಎಲ್ಲರಿಗೂ ಸನ್ಮಾನ ಮಾಡಲಾಯಿತು.  
  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾಂತೇಶ. ಮಾ, ಪಾಟೀಲ ಮೈನಹಳ್ಳಿ ವಹಿಸಿದ್ದರು , ವೇದಿಕೆ ಮೇಲಿಂದ ಗಣ್ಯರು ಜ್ಯೋತಿ ಬೆಳಗಿಸುವದರ ಮೂಲಕ ನಾಟಕಕ್ಕೆ ಚಾಲನೆ ನೀಡಿದರು. ಕನ್ನಡಾಂಭೆ ಸಂಘದ ಅಧ್ಯಕ್ಷರು ಸಂಘದ ಮುಂದಿನ ಗುರಿ ತಿಳಿಸುತ್ತ ಪ್ರಸ್ತಾವಿಕ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಸಂಘದ ಹಿತೈಸಿಗಳಾದ ಶ್ರೀಧರ ಕುರಡಿಗಿ, ಮಲ್ಲಿಕಾರ್ಜನ ಹಳ್ಳಿ, ಜಗದೀಶ ಬಾಸಿಂಗದಾರ . ಗುರುರಾಜ ಮೂಲಿಮನಿ , ತಿಪ್ಪಣ್ಣ ಹೂಗಾರ ವೇದಿಕೆ ಮೇಲಿದ್ದರು. 
     ಕಾರ್ಯಕ್ರದ ನಿರೂಪಣೆ ಶಂಕ್ರಯ್ಯ ಕಾಟ್ರಳ್ಳಿ, ಬನ್ನಪ್ಪ ಕತ್ತಿ , ಮಲ್ಲಪ್ಪ ಗುಡದಣ್ಣವರು ನಡೆಸಿ ಕೊಟ್ಟರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ