Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕ್ರೆಸ್ಟ್ ಗೇಟ್ ಕಳಪೆ ನಿರ್ವಹಣೆ ಕ್ರಮಕ್ಕೆ KPRS ಆಗ್ರಹ





ಕ್ರೆಸ್ಟ್ ಗೇಟ್ಗಳ ನಿರಂತರ ಪರಿಶೀಲನೆ ಮತ್ತು ಅಗತ್ಯ ಕ್ರಮವಹಿಸುವಲ್ಲಿ ಆದ ಲೋಪದಿಂದಾಗಿಯೇ  ತುಂಗಭದ್ರಾ ಆಣೆಕಟ್ಟೆಯ 19ನೇ ಗೇಟ್ ಚೈನ್ ಲಿಂಕ್ ಮುರಿದು ಬಿದ್ದು ಆಣೆಕಟ್ಟೆಯಲ್ಲಿನ ನೀರು ಬರಿದು ಮಾಡುವ ಅವಘಡಕ್ಕೆ ಕಾರಣವಾಗಿದೆಯೆಂದು   ಕರ್ನಾಟಕ ಪ್ರಾಂತ ರೈತ ಸಂಘ(KPRS) ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ಆರೋಪಿಸುತ್ತದೆ ಮತ್ತು ಈ ಕೂಡಲೇ ಲೋಪವೆಸಗಿದ ಅಧಿಕಾರಿಗಳ ಮೇಲೆ ಸೂಕ್ತ ಕಾನೂನಿನ ಕ್ರಮವಹಿಸಬೇಕೆಂದು ಆಗ್ರಹಿಸುತ್ತದೆ.


ಕಳೆದ 2019 ರಲ್ಲಿ ಇದೇ ಆಣೆಕಟ್ಟೆಯ ಎಡದಂಡೆ ಮೇಲ್ಮಟ್ಟದ ಕಾಲುವೆಯ ಬಳಿ ಗೇಟ್ ಮುರಿದು ಸಣ್ಣ ಪ್ರಮಾಣದ ಅವಘಡ ಉಂಟಾಗಿ ಅಪಾರ ಪ್ರಮಾಣದ ನೀರು ಪೋಲಾದ  ಅನುಭವ ಆಡಳಿತ ಮಂಡಳಿ ಹಾಗು ಅಧಿಕಾರಿಗಳಲ್ಲಿದ್ದರೂ

ಸೂಕ್ತ ನಿರ್ವಹಣೆಯ ಲೋಪ ಮರಳಿ ಉಂಟಾಗಿರುವುದು ಅವರುಗಳ ಬೇಜವಾಬ್ದಾರಿ ನಡೆಯಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ(KPRS) ಕರ್ನಾಟಕ ರಾಜ್ಯ ಸಮಿತಿ ಕಟುವಾಗಿ ಟೀಕಿಸುತ್ತದೆ.


ಈ ಅವಘಡವನ್ನು ಸರಿಪಡಿಸಲು ಆಣೆಕಟ್ಟೆಯಲ್ಲಿ ಸಂಗ್ರಹವಾದ ಶೇ 60 ಪ್ರಮಾಣದ 65 ಟಿಎಂಸಿ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ. ಇದರಿಂದಾಗಿ, ಈ ಆಣೆಕಟ್ಟೆಯ ಫಲಾನುಭವಿಗಳಾದ

ಕರ್ನಾಟಕ, ಆಂದ್ರ ಪ್ರದೇಶ ಮತ್ತು ತೆಲಂಗಾಣಾ ರಾಜ್ಯಗಳ ಸುಮಾರು 30 ಲಕ್ಷ ಎಕರೆ ನೀರಾವರಿ ಪ್ರದೇಶದ ರೈತರ ಭವಿಷ್ಯಕ್ಕೆ ತೀವ್ರ ಆತಂಕ ಉಂಟು ಮಾಡಿದೆ.


ತಕ್ಷಣವೇ ಅವಘಡವನ್ನು ಸರಿ ಪಡಿಸಲು ಮತ್ತು ನೀರನ್ನು ಉಳಿಸಿಕೊಳ್ಳಲು ತೀವ್ರ ಕ್ರಮಗಳಾಗದಿದ್ದಲ್ಲಿ ಈ ಮೂರು ರಾಜ್ಯಗಳ ರೈತರು ತಲಾ ಎಕರೆಗೆ ಲಕ್ಷಾಂತರ ರೂ ಬೆಳೆ ನಷ್ಟ ಮಾಡಿಕೊಳ್ಳಬೇಕಾಗುತ್ತದೆ. ಮುಂಬರುವ ದಿನಗಳಲ್ಲಿ ನೀರು ಸಂಗ್ರಹವಾಗುವ ಭರವಸೆಯೂ ಇಲ್ಲ. ಹೀಗಾಗಿ

ಒಟ್ಟಾಗಿ ಗಮನಿಸುವಾಗ ನಷ್ಠದ ಪ್ರಮಾಣ 30,000 ಕೋಟಿ ರೂಗಳಷ್ಠಾಗಲಿದೆ.


ಅದಾಗಲೆ ಕಳೆದ ವರ್ಷದ ಬರಗಾಲದಿಂದಾಗಿ ಕರ್ನಾಟಕದ ಈ ಭಾಗದ ರೈತರು ನೀರಿನ ಕೊರತೆಯಿಂದ ಬೆಳೆ ನಷ್ಠ ಅನುಭವಿಸಿದ್ದಾರೆ. ಒಕ್ಕೂಟ ಹಾಗೂ ರಾಜ್ಯ ಸರಕಾರಗಳು ಸೂಕ್ತ ಪರಿಹಾರಗಳನ್ನು ನೀಡಿಲ್ಲ. ಮಾತ್ರವಲ್ಲಾ, ಬೆಳೆ ವಿಮೆಯನ್ನು ಸಮರ್ಪಕವಾಗಿ ಸಿಗುವಂತೆ ಕ್ರಮವಹಿಸಿಲ್ಲ. ಹೀಗಾಗಿ, ಈ ಬೆಳೆ ನಷ್ಟವು ಈ ಭಾಗದಲ್ಲಿ ರೈತರ ಆತ್ಮಹತ್ಯೆಗಳನ್ನು ತೀವ್ರವಾಗಿ ಹೆಚ್ಚಿಸಲಿದೆ.


ಆದ್ದರಿಂದ, ರಾಜ್ಯ ಸರಕಾರ ಸಾಲದ ಬಾಧೆಯನ್ನು ತಡೆಯಲು ಅಗತ್ಯ ಕ್ರಮವಹಿಸಬೇಕು. ಮತ್ತು

ಪರಿಸ್ಥಿತಿಯನ್ನು ಸಮರ್ಪಕವಾಗಿ ಅವಲೋಕಿಸಿ, ನದಿಯ ಮೇಲು ಭಾಗದಲ್ಲಿ ನೀರನ್ನು ಸಂರಕ್ಷಿಸಲು ಅಗತ್ಯ ಕ್ರಮವಹಿಸಬೇಕು ಮತ್ತು ಸಮರೋಪಾದಿಯಲ್ಲಿ ಪರಣಿತರೊಂದಿಗೆ ಗೇಟ್ ನಿರ್ವಹಿಸಲು ಮುಂದಾಗುವಂತೆ ಕರ್ನಾಟಕ ಪ್ರಾಂತ ರೈತ ಸಂಘ (KPRS) ಬಲವಾಗಿ ಒತ್ತಾಯಿಸಿದೆ



 *ಯು.ಬಸವರಾಜ* KPRS ರಾಜ್ಯ ಉಪಾದ್ಯಕ್ಷರು.. KPRS ಜಿಲ್ಲಾ ಅಧ್ಯಕ್ಷರು..v.s ಶಿವಶಂಕರ್. KPRS ಜಿಲ್ಲಾ ಸಮಿತಿ ಕಾರ್ಯದರ್ಶಿ.. ಗಾಳಿ. ಬಸವರಾಜ್. ಸಿಐಟಿಯು ಜಿಲ್ಲಾ ಸಮಿತಿ ಜಂಟಿ ಕಾರ್ಯದರ್ಶಿ. M. ತಿಪ್ಪೇಸ್ವಾಮಿ.. ಸೋಮಪ್ಪ.ಆಶಿನ್ ಸಾಬು. ಉಪ್ಪಾರ್ ಶಂಕ್ರಪ್ಪ.  ರುದ್ರಪ್ಪ. ಗುಳಪ್ಪ. ಕೊಮಾರಪ್ಪ. ಕುರುವಳ್ಳಿ ಸೋಮಯ್ಯ. ಅಮೀನ್ಸ್. ಫಕೀರಪ್ಪ. Dyfi ಜಿಲ್ಲಾ ಸಮಿತಿ ಅಧ್ಯಕ್ಷರು. ಯು. ಎರಿಸ್ವಾಮಿ. ಕಾರೆಕಲ್ಲು ದೊಡ್ಡ ಬಸವನ ಗೌಡ. ಕಟ್ಟೆ ಬಸಪ್ಪ. ಮಸ್ತಾನ್ ಬಾಷಾ. ವೆಂಕಟೇಶ್. ಬೈಲ ಹನುಮಂತ...... ಮೊದಲಾದವರು ಭಾಗವಹಿಸಿದ್ದರು






Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ