LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bagalkot

ಕಿತ್ತೂರು ವಿಜಯೋತ್ಸವ ಚೆನ್ನಮ್ಮಳ ಶೌರ್ಯದ ಪ್ರತೀಕ : ವಿದ್ಯಾಧರ ಸವದಿ 

ರಾಣಿ ಚನ್ನಮ್ಮ ವೃತ್ತದಲ್ಲಿ ಕಿತ್ತೂರ ಚನ್ನಮ್ಮ ಜಯಂತಿ ಆಚರಣೆ 



ಮಹಾಲಿಂಗಪುರ : ಬ್ರಿಟಿ? ಅಧಿಕಾರಿ ಧಾರವಾಡದ ಥ್ಯಾಕರೆ ೧೮೨೪ರ ಅ. ೨೩ ರಂದು ಕಿತ್ತೂರಿನ ಕೋಟೆಯ ಬಾಗಿಲು ತೆರೆಯಲು ಆಜ್ಞೆ ಮಾಡಿದನು. ಬಾಗಿಲನ್ನು ತೆರೆಯದೆ ಇದ್ದಾಗ ಕೋಟೆಯ ಬಾಗಿಲು ಒಡೆಯುವಂತೆ ಹೇಳಿದನು. ಕೊನೆಗೆ ಯುದ್ಧವನ್ನೂ ಸಾರಿದನು.ಆ ಯುದ್ಧವನ್ನು ಗೆದ್ದು ಬ್ರಿಟಿ?ರಿಗೆ ಭಾರತದಲ್ಲಿ ಮೊದಲ ಗೆಲವು ಕಂಡಿದ್ದು ಚನ್ನಮ್ಮಳ ಶೌರ್ಯದ ಪ್ರತೀಕ ಎಂದು ಬಾಗಲಕೋಟ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ವಿದ್ಯಾಧರ ಸವದಿ ಹೇಳಿದರು.
 ನಗರದ ಚನ್ನಮ್ಮ ವೃತ್ತದಲ್ಲಿ ಆಯೋಜಿಸಿದ ವೀರ ರಾಣಿ ಕಿತ್ತೂರು ಚನ್ನಮ್ಮಳ ೨೪೮ ನೇ ಜಯಂತಿ ಹಾಗೂ ೨೦೨ ನೇ ವಿಜಯೋತ್ಸವ ಕಾರ್ಯಕ್ರಮವನ್ನು ರಾಣಿ ಚನ್ನಮ್ಮರ ಭಾವಚಿತ್ರಕ್ಕೆ ಭಕ್ತಿಪೂರ್ವಕ ಪೂಜೆ, ಮಾಲಾರ್ಪಣೆ ಮಾಡಿ ಜಯಂತಿ ಆಚರಿಸಿ ಮಾತನಾಡಿ ಚೆನ್ನಮ್ಮ ಬ್ರಿಟಿ?ರ ವಿರುದ್ಧ ಹೊರಾಡಿದ್ದು ಕೇವಲ ತಮ್ಮ ಸಂಸ್ಥಾನದ ಭೂಮಿಗಾಗಿ ಅಲ್ಲ. ನಮ್ಮ ನಾಡಿನ ಸ್ವಾಭಿಮಾನ, ಹಕ್ಕು ಮತ್ತು ಸ್ವತಂತ್ರ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕಾಗಿ, ಆಗಿತ್ತು ಎಂದರು.
ನಂತರ ಮಾತನಾಡಿದ ಬಾಗಲಕೋಟ ಜಿಲ್ಲಾ ಪಂಚಮಶಾಲಿ ಸಮಾಜದ ಅಧ್ಯಕ್ಷರಾದ ಧರೆಪ್ಪ ಸಾಂಗ್ಲಿಕರ ಮಾತನಾಡಿ ಯುದ್ಧ ಎಂದಾಗ ನಮ್ಮ ಕಣ್ಣ ಮುಂದೆ ಬರುವುದು ಕತ್ತಿ, ಗುರಾಣಿ, ಸೈನ್ಯ ಮತ್ತು ರಕ್ತಪಾತ ಆದರೆ ಕಿತ್ತೂರಿನ ಹೋರಾಟದಲ್ಲಿ ಚೆನ್ನಮ್ಮನ ಕೈಯಲ್ಲಿದ್ದ ಕತ್ತಿಗಿಂತ ಪ್ರಬಲವಾಗಿದ್ದು ಅವರ ಎದೆಯಲ್ಲಿದ್ದ ದೃಢನಿರ್ಧಾರ ಎಂದರು.
ಪುರಸಭೆಯಲ್ಲಿ ಜಯಂತಿ : ನಗರದ ಪುರಸಭೆಯಲ್ಲಿ ಆಯೋಜಿಸಿದ ಕಿತ್ತೂರು ೨೦೨ ನೇ ವಿಜಯೋತ್ಸವ ಹಾಗೂ ೨೪೮ ನೇ ಜಯಂತಿ ಕಾರ್ಯಕ್ರಮದಲ್ಲಿ ಪುರಸಭೆಯ ಮುಖ್ಯಾಧಿಕಾರಿ ನಾಮದೇವ ಲಮಾಣಿ  ಚನ್ನಮ್ಮಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ ಈ ಯುದ್ಧದಲ್ಲಿ ಪತಿ ಮರಣವನ್ನಪ್ಪಿದರೂ ಹೆದರದೆ ಮುನ್ನುಗ್ಗಿದ ಚನ್ನಮ್ಮ ಪರಾಕ್ರಮ ಮೆರೆಯುತ್ತಾಳೆ. ಎಂದರು.
ಈ ಸಂಧರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷರಾದ ಬಸನಗೌಡ ಪಾಟೀಲ, ಯಲ್ಲನಗೌಡ ಪಾಟೀಲ, ಬಿಜೆಪಿ ನಗರ ಘಟಕದ ಅಧ್ಯಕ್ಷರಾದ ಶಂಕರಗೌಡ ಪಾಟೀಲ, ಕಾಂಗ್ರೆಸ ಪಕ್ಷದ ಮುಖಂಡರಾದ ಕವಿತಾ ಕೊಣ್ಣೂರ, ಡಾ,ಮೀನಾಕ್ಷೀ ಹುಬ್ಬಳ್ಳಿ, ಮುಖಂಡರಾದ ಸಿದ್ದುಗೌಡ ಪಾಟೀಲ, ಚನ್ನಪ್ಪ ಪಟ್ಟಣಶೆಟ್ಟಿ, ಕುಮಾರ ಕುಳಲಿ, ಮಹಾಲಿಂಗಪ್ಪ ಕೌಜಲಗಿ, ಈರಪ್ಪ ದಿನ್ನಿಮನಿ, ಸಂತೋ? ಹುದ್ದಾರ, ಬಸಪ್ಪ ಕೊಪ್ಪದ, ಬಸು ನಾಗನೂರ, ಮಲ್ಲು ದಲಾಲ, ಹನಮಂತ ಕೊಣ್ಣೂರ, ಹನಮಂತ ಶಿರೋಳ, ಮಾದೇಶ ಕುದರಿ, ಶ್ರೀಶೈಲ್ ರೊಡ್ಡಣ್ಣವರ, ಸೇರಿ ಹಲವರು ಇದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಾಲ್ಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಕಿತ್ತೂರು ಉತ್ಸವ ನಿಮಿತ್ತ ವೈಭವದ 'ಪಾರಂಪರಿಕ ನಡಿಗೆ'. ಸಂಸ್ಕೃತಿ, ಇತಿಹಾಸದ ರಕ್ಷಣೆ ಎಲ್ಲರ ಹೊಣೆ: ಸಾಹಿತಿ ಮಂಜುನಾಥ ಕಳಸಣ್ಣವರಹಿಂದೂ ಸಮಾಜದ ಸಂಘಟನೆಯೇ ದೇಶದ ಶಕ್ತಿಗೆ ಆಧಾರ: ನರೇಂದ್ರಜೀಕಬ್ಬಡಿ ಪುರುಷರ ಪಂದ್ಯಾವಳಿ ಸವದತ್ತಿ  ತಂಡಕ್ಕೆ ಜಯ.ವೀರರಾಣಿ ಚೆನ್ನಮ್ಮಳ ಧೈರ್ಯ, ಸಾಹಸ, ದೇಶಪ್ರೇಮ ಯುವಜನರಿಗೆ ಪ್ರೇರಣೆ: ತಹಸೀಲ್ದಾರ್ ಸಿದರಾಯ ಬೋಸಗಿ ಅಭಿಮತಬಸವರಾಜ ಶಿವಲಿಂಗಪ್ಪ ಯಾದವಾಡ ನಿಧನಜನರಲ್ಲಿ ದೇಶಾಭಿಮಾನ ಬೆಳಿಸಿದ ವೀರ ರಾಣಿ ಚೆನ್ನಮ್ಮ - ನಿರಾಣಿ    ಕಿತ್ತೂರು ಚನ್ನಮ್ಮಾಜಿ ಆದರ್ಶ, ಹೋರಾಟ ಜೀವನದಲ್ಲಿ ಬಳಸಿಕೊಳ್ಳಿ : ಬಾಬಾಸಾಹೇಬ ಪಾಟೀಲ.  ಸಿಕಂದರ ಬಾದಹ ಅರಬ ನಿಧನರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿ: ಲಚ್ಯಾಣ ಸರಕಾರಿ ಶಾಲೆಯ ಬಾಲಕಿಯರಿಗೆ ತೃತೀಯ ಸ್ಥಾನ