Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಧಾರವಾಡ-ಬೆಳಗಾವಿ ರೈಲ್ವೆ ಮಾರ್ಗದ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಕಿತ್ತೂರು ರೈತರ ಪರಿತಾಪ – ಸೂಕ್ತ ಪರಿಹಾರಕ್ಕಾಗಿ ಒತ್ತಾಯ

ಚನ್ನಮ್ಮನ ಕಿತ್ತೂರು: ಧಾರವಾಡ-ಬೆಳಗಾವಿ ರೈಲ್ವೆ ಮಾರ್ಗದ ನಿರ್ಮಾಣ ಕಾರ್ಯಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿರುವಾಗ, ಕಿತ್ತೂರು ತಾಲೂಕಿನ ರೈತರು ತಮ್ಮ ಭೂಮಿಗಳಿಗೆ ನ್ಯಾಯಸಮ್ಮತ ಹಾಗೂ ಸಮಾನ ಪ್ರಮಾಣದ ಪರಿಹಾರ ನೀಡುವಂತೆ ಸರ್ಕಾರದ ವಿರುದ್ಧ ಗಂಭೀರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಭಾಗದ ರೈತರು ತಮ್ಮ ಪೋಷಣಾ ಮೂಲವಷ್ಟಾದ ಕೃಷಿ ಭೂಮಿಗಳನ್ನು ಕಳೆದುಕೊಳ್ಳುತ್ತಿದ್ದಾಗ, ಸರ್ಕಾರದಿಂದ ನಿರ್ಧರಿಸಲಾದ ಪರಿಹಾರ ಮೊತ್ತ ಸಮಾನವಾಗಿಲ್ಲ ಎಂಬುದು ಅವರ ಅಳಲು. ಬೆಳಗಾವಿಯಿಂದ ಚಿಕ್ಕಬಾಗೇವಾಡಿ ವರೆಗಿನ ರೈತರಿಗೆ ಪ್ರತಿ ಎಕರೆಗೆ ರೂ 45 ಲಕ್ಷ ಹಾಗೂ ಚಿಕ್ಕಬಾಗೇವಾಡಿಯಿಂದ ಕಿತ್ತೂರಿನವರೆಗೆ ಇರುವ ರೈತರಿಗೆ ರೂ 35 ಲಕ್ಷ ಪರಿಹಾರ ನೀಡಲು ಸರ್ಕಾರ ತಿರ್ಮಾನಿಸಿದ್ದು, ಅದೇ ಯೋಜನೆಯ ಭಾಗವಾಗಿರುವ

ಈ ಪರಸ್ಪರ ವ್ಯತ್ಯಾಸದ ಬಗ್ಗೆ ಕಿತ್ತೂರಿನ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಇದು ಭೂಮಿ ಮೌಲ್ಯದಲ್ಲಿ ಅಸಮಾನತೆ ಸಾಧಿಸುವ ನಿರ್ಧಾರವಾಗಿದೆ ಎಂದು ಹೇಳಿದ್ದಾರೆ. ಭೂಮಿಯ ಮೌಲ್ಯ ಎಲ್ಲೆಂದರಲ್ಲಿ ಸಮಾನವಾಗಿಲ್ಲದಿದ್ದರೂ, ರೈಲ್ವೆ ಯೋಜನೆಯೊಂದರಲ್ಲಿಯೇ ವಿಭಿನ್ನ ಪ್ರಮಾಣದ ಪರಿಹಾರ ನೀಡುವುದು ಸಮ್ಮತವಲ್ಲ ಎಂದು ಅವರು ತಿಳಿಸಿದ್ದಾರೆ.

ಕಿತ್ತೂರಿನಲ್ಲಿ ಇಂದು ನಡೆದ ಸಭೆಯಲ್ಲಿ ರೈತರು ‘ಒಂದು ಗುಂಟೆಗೆ ಕನಿಷ್ಠ ರೂ 3 ಲಕ್ಷ ನಿಗದಿಪಡಿಸಬೇಕು’ ಎಂದು ಒತ್ತಾಯಿಸಿದರು. ಇಂತಹ ನಿಗದಿತ ಪರಿಹಾರವಿಲ್ಲದೆ ಭೂಮಿಗಳನ್ನು ಒಪ್ಪಿಸುವುದು ನ್ಯಾಯಸಮ್ಮತವಲ್ಲ ಎಂದು ತಾವು ಸರ್ಕಾರದ ಮುಂದಾಗು ತೀರ್ಮಾನವನ್ನು ತಿದ್ದುಪಡಿ ಮಾಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ ರೈತ ಮುಖಂಡ ಬೈಲಪ್ಪ ದಳವಾಯಿ ಮಾತನಾಡಿ “ಭೂಮಿ ನಮ್ಮ ಜೀವದಾಳ. ಇದನ್ನು ಕಳೆದುಕೊಂಡರೆ, ಬದುಕಿಗೆ ಆಧಾರವೇ ಇಲ್ಲ. ಸರ್ಕಾರ ಭೂಮಿಯ ಮೌಲ್ಯಕ್ಕೆ ನ್ಯಾಯ ನೀಡದೆ ಕೇವಲ ಯೋಜನೆಯ ಪೂರೈಸುವ ಹೆಸರಲ್ಲಿ ರೈತರ ಹಕ್ಕುಗಳನ್ನು ಹಿಂಸೆ ಮಾಡಬಾರದು” ಎಂದು ಎಚ್ಚರಿಸಿದರು.



ಧಾರವಾಡ-ಬೆಳಗಾವಿ ರೈಲ್ವೆ ಮಾರ್ಗದ ನಿರ್ಮಾಣ ಕಾರ್ಯಕ್ಕಾಗಿ ಕಿತ್ತೂರು ತಾಲೂಕಿನ ರೈತರು ತಮ್ಮ ಭೂಮಿಗಳಿಗೆ ನ್ಯಾಯಸಮ್ಮತ ಹಾಗೂ ಸಮಾನ ಪ್ರಮಾಣದ ಪರಿಹಾರ ನೀಡುವಂತೆ ಸರ್ಕಾರದ ವಿರುದ್ಧ ಜೂನ್‌ 2 ರಂದು ಸೋಮವಾರ ರಾಣಿ ಚನ್ನಮ್ಮನ ಸರ್ಕಲ್ಲನಿಂದ ತಾಲೂಕಾ ದಂಡಾಧಿಕಾರಿಗಳ ಕಚೇರಿವರೆಗ ಪಾದಯಾತ್ರೆ ಮಾಡುವ ಮೂಲಕ ತಹಶೀಲ್ದಾರ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುದು.

- ಬೈಲಪ್ಪ ದಳವಾಯಿ. ಜಿಲ್ಲಾ ಅಧ್ಯಕ್ಷರು ಕಿತ್ತೂರು ಕರ್ನಾಟಕ ರೈತ ಜಾಗೃತಿ ಸಂಘ.



ಈ ವೇಳೆ ಮಡಿವಾಳೆಪ್ಪ ವಕ್ಕುಂದ, ನಿಂಗಪ್ಪ ಹಣಜಿ ಸೇರಿದಂತೆ ಕಿತ್ತೂರು ಹಾಗೂ ಸುತ್ತಮುತ್ತಲಿನ ರೈತರು ಇದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ