Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಹಿಳೆಯರು ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಬೆಳೆಸಿ: ಕೀರ್ತಿ ಶಿವಕುಮಾರ್

ಬೆಳಗಾವಿ:  ಹೆಣ್ಣು ಅಬಲೆಯಲ್ಲ, ಸಬಲೆ.  ಜಗತ್ತಿನ ಸೃಷ್ಟಿಯ ಮೂಲವೇ ಮಹಿಳೆಯಾಗಿದ್ದಾಳೆ.  ಅವರು ಮಾಡುವ ಕೆಲಸಗಳಿಗೆ ಅಭಿನಂದಿಸಿ,  ಪ್ರೋತ್ಸಾಹಿಸಬೇಕು ಹೊರತು ತಾರತಮ್ಯತೆ ಮಾಡಬಾರದು ಎಂದು ಕೀರ್ತಿ ಶಿವಕುಮಾರ್ ಅವರು ಹೇಳಿದರು.

ನಗರದ ಹಿಂದವಾಡಿಯ ಗೊಮ್ಮಟೇಶ್ ವಿದ್ಯಾ ಪೀಠದಲ್ಲಿ ಕ್ರಾಂತಿ ಮಹಿಳಾ ಮಂಡಳ  ಮತ್ತು ಉಮಾ ಸಂಗೀತ ಪ್ರತಿಷ್ಠಾನದ ವತಿಯಿಂದ  ಆಯೋಜಿಸಲಾದ    ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮನೆಯ ಬೆಳಗುವ ದೀಪ ಅವಳು, ಈ  ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲೂ ತನ್ನ ಛಾಪನ್ನು ಮೂಡಿಸುತ್ತಿರುವ ಮಹಿಳೆ ಅಸಾಮಾನ್ಯಳು ಎಂದರು.

ಸ್ತ್ರೀ ಶಿಕ್ಷಣವನ್ನು  ಪಡೆಯುವುದರ ಜೊತೆಗೆ ಸಂಸ್ಕಾರವನ್ನು ಕಲಿತು ತಮ್ಮ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡುವುದು ಮಹಿಳೆಯ ಮುಖ್ಯ ಕೆಲಸವಾಗಿದೆ ಮಹಿಳೆಯರು  ಸ್ವಾವಲಂಬಿಗಳಾಗಿ ಬದುಕಬೇಕು ಮಹಿಳೆ ಯಾವುದೇ ಒಂದು ಚಟುವಟಿಕೆಯಲ್ಲಿ ಭಾಗವಹಿಸಲು ವಯಸ್ಸಿನ ಅಂತರವನ್ನು ಲೆಕ್ಕಿಸದೆ ಖುಷಿಯಿಂದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು.

ಡಾ. ಸಂಜೀವ್  ಪಾಟೀಲ್ ಮಾತನಾಡಿ,   ದೇವರು ನಮಗೆ ಸೌಂದರ್ಯವಾದ ಈ ದೇಹವನ್ನು ನೀಡಿದ್ದಾನೆ ಇದನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳಬೇಕು ಎಂದು ಹೇಳಿದರು.

ಆಶ್ರಯ  ಫೌಂಡೇಶನ್‌ ಸಂಸ್ಥಾಪಕಿ ನಾಗರತ್ನ ರಾಮ ಗೌಡ ಮಾತನಾಡಿ,  ಸಮಾಜದ ಉನ್ನತಿಗಾಗಿ ಬೆಳಗಾವಿಯಲ್ಲಿ ಶ್ರಮಿಸುವ ಏಕೈಕ ಮಂಡಳ ಎಂದರೆ ಕ್ರಾಂತಿ ಮಹಿಳಾ  ಮಂಡಳ ಮತ್ತು ಉಮಾ ಸಂಗೀತ ಪ್ರತಿಷ್ಠಾನ ಎಂದು ಹೇಳಲು  ಹೆಮ್ಮೆ ಅನಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ಕ್ರಾಂತಿ ಮಹಿಳಾ ಮಂಡಳ  ಮತ್ತು ಉಮಾ ಸಂಗೀತ ಪ್ರತಿಷ್ಠಾನದಿಂದ ಲೇಕವ್ಯೂ  ಆಸ್ಪತ್ರೆಯ ವೈದ್ಯರಾದ ಡಾ. ಸಂಗೀತ,  ಡಾ. ಸಂಜೀವ್ ಪಾಟೀಲ್ ದಂಪತಿಗಳಿಗೆ ಆದರ್ಶ ದಂಪತಿಗಳ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಮತ್ತು ಆದರ್ಶ ಅತ್ತೆ ಸೊಸೆ ಪ್ರಶಸ್ತಿಯನ್ನು  ಚೆನ್ನಕ್ಕಾ ಕಾಗತಿಕರ ಮತ್ತು ಸೊಸೆ ನೀತಾ ಅಶೋಕ್ ಕಾಗತಿಕರ್ ಅವರಿಗೆ ಆದರ್ಶ ಅತ್ತೆ ಸೊಸೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಸಂಗೀತ ವಿದುಷಕಿ  ಸೀಮಾ  ಕುಲ್ಕರ್ಣಿ ಅವರಿಗೆ ಪ್ರತಿಭಾ ಪುರಸ್ಕಾರ ಎಂಬ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.  ಕಾರ್ಯಕ್ರಮದಲ್ಲಿ ಆರ್ಷ ಆಶ್ರಮದ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ 5,52,000 ರೂ. ಚಕ್ ವಿತರಿಸಲಾಯಿತು.

ಅದೇ ರೀತಿಯಾಗಿ ಆರಾಧನಾ ಸ್ಕೂಲ್ ಮಕ್ಕಳಿಗೋಸ್ಕರ 5000 ರೂ.  ಚೆಕ್ ಅನ್ನು ಶಾಲೆಯ ಮುಖ್ಯೋಪಾಧ್ಯಾಯರಾದಂತಹ ಸುತಾರ್ ಸರ್ ಅವರಿಗೆ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷರಾದ  ಮಂಗಲಾ ಮಠದ ಸ್ವಾಗತಿಸಿದರು.    ಕಾರ್ಯದರ್ಶಿ  ಭಾರತಿ ರತ್ನಪಗೊಳ ಪ್ರಸ್ತಾವಿಕವಾಗಿ ಮಾತನಾಡಿದರು.  ಕ್ರಾಂತಿ  ಮಹಿಳಾ ಮಂಡಳ ಮತ್ತು ಉಮಾ ಸಂಗೀತ ಪ್ರತಿಷ್ಠಾನದ ಎಲ್ಲ ಸದಸ್ಯರು ಪ್ರಾರ್ಥನೆಯನ್ನು ಹಾಡಿದರು.  ತ್ರಿಶಲಾ ಪಾಯಪ್ಪನವರ್ , ದರ್ಶನ ನಿಲಜಗಿ,  ಮಮ್ತಾ ಪತ್ರಾವಳಿ ಪರಚಯಿಸಿದರು. ರೋಹಿಣಿ ಇಂಡಿ ,   ಡಾ. ರಾಜೇಂದ್ರ ಮಠದ,  ಡಾ. ಗುಡಗನಟ್ಟಿ, ಆರ್ಷ್ ಆಶ್ರಮದ ಹೆಣ್ಣು ಮಕ್ಕಳು ಹಾಗೂ ಕಾಗತಿಕರ್  ಇತರರು ಇದ್ದರು.   ಪುಷ್ಪ ನಿಲಜಗಿ  ನಿರೂಪಿಸಿದರು. ಪದ್ಮಜಾ ತುರುಮುಂಡಿ ವಂದಸಿದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ