Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ದುಶ್ಚಟಗಳಿಂದ ದೂರವಿದ್ದು, ನಾಟಕ, ಸಾಂಕೃತಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಿ:ಮಹಾಂತೇಶ ದೊಡ್ಡಗೌಡರ 





ನೇಸರಗಿ: ಇಂದಿನ‌ ಯುವಕರು ಹವ್ಯಾಸಗಳನ್ನು ಬಿಟ್ಟು  ನಾಟಕ, ಜಾನಪದ, ಸಾಹಿತ್ಯ ಕ್ಷೇತ್ರದಲ್ಲಿ ಭಾಗವಹಿಸಿ ಮತ್ತು ಅದರ  ಬೆಳವಣಿಗೆಗೆ ಪ್ರೋತ್ಸಾಹ ನೀಡಿ  ಸಮಾಜದಲ್ಲಿ ದೊಡ್ಡವರಾಗಿ ಬೆಳೆದು ಗ್ರಾಮದ ಹೆಸರು ತರಬೇಕೆಂದು  ಮಾಜಿ ಶಾಸಕ ಹಾಗೂ ಬಿ ಡಿ  ಸಿ ಸಿ ಬ್ಯಾಂಕ ನಿರ್ದೇಶಕ ಮಹಾಂತೇಶ ದೊಡ್ಡಗೌಡರ ಹೇಳಿದರು.

     ಅವರು  ಸಮೀಪದ ಮತ್ತಿಕೊಪ್ಪ ಗ್ರಾಮದಲ್ಲಿ ಗ್ರಾಮದೇವಿಯರ  ಹಾಗೂ ಕಲ್ಮೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ‌ ಮಹಾಂತೇಶ ದೊಡ್ಡಗೌಡರ ಅಭಿಮಾನಿ ಬಳಗದಿಂದ ದೇಶನೂರ ಬನಶಂಕರಿ ನಾಟ್ಯ ಸಂಘದಿಂದ ಪ್ರದರ್ಶಿಸುವ  ಬಾಳು ಬೆಳಗಿದ ಮನೆ ನಾಟಕ ಉದ್ಘಾಟಿಸಿ ಮಾತನಾಡಿ ಗ್ರಾಮದ ಯುವಕರಾದ ಮಹಾಂತೇಶ ಮೋಹರೆ ಹಾಗೂ ಅಡಿವಪ್ಪ ಹೊಸಮನಿ ಹಾಗೂ ಸಂಗಡಿಗರು ಗ್ರಾಮದಲ್ಲಿ ವಿನೂತನ ಕಾರ್ಯಕ್ರಮ ಮಾಡುತ್ತಿದ್ದು ಈ ಅದ್ದೂರಿ ತಾಯಿಯ ಜಾತ್ರೆಯಿಂದ ಗ್ರಾಮ ಉನ್ನತ ಹೊಂದಿ ಮಳೆ ಬೆಳೆ ಚನ್ನಾಗಿ ಬಂದು ಹಳ್ಳ ಕೊಳ್ಳ ತುಂಬಿ ಅಭಿವೃದ್ಧಿ ಹೊಂದಲಿ.

ಜಾತ್ರೆಗಳು ನಡೆಯುವದರಿಂದ ಸಮಾಜ ಮತ್ತು ಊರಿನ ಜನರು ಒಂದೇಡೆ ಸಂತೋಷದಿಂದ ಸೇರಲು ಸಾಧ್ಯವಾಗುತ್ತದೆ. ಜಾತ್ರೆಗಳಿಂದ ನಮ್ಮ ಸಂಸ್ಕೃತಿ ಮುನ್ನೆಡೆಗೆ ಬರುತ್ತದೆ. ಜಾತ್ರೆಯಲ್ಲಿ ನಾಟಕ ಪ್ರದರ್ಶನ ಹಮ್ಮಿಕೊಂಡಿರುವದು ಸುತ್ಯಾರ್ಹ ಎಂದರು.

      ಈ ಜಾತ್ರೆಯ  ದಿವ್ಯ ಸಾನಿಧ್ಯ ವಹಿಸಿರುವ   ದತ್ತವಾಡ ಹೃಷಿಕೇಶಾನಂದ ಬಾಬಾ ಮಹಾರಾಜರು ಮಾತನಾಡಿ, ನಾಟಕಗಳಲ್ಲಿ ಸಮಾಜ ಸುಧಾರಣೆಗೆ  ಸಹಕಾರಿ ಗುಣಗಳಿವೆ. ಇಲ್ಲಿಯ ಉತ್ತಮ ಸಂದೇಶಗಳಿಂದ ನಮ್ಮ ವ್ಯಕ್ತಿತ್ವ ಸುಧಾರಣೆ ಮತ್ತು ಸಮಾಜ ಸುಧಾರಣೆಗೆ ಸಹಕಾರಿ ಆಗುತ್ತಿದೆ. 7 ದಿನಗಳಿಂದ ಬಹಳ ಅರ್ಥಗರ್ಭಿತ ತಾಯಿಯರ ಜಾತ್ರೆ ವಿಜೃಂಭಣೆಯಿಂದ ನಡೆಯುತ್ತಿದ್ದು ಈ ನಾಟಕ ಪ್ರದರ್ಶನ ಜಾತ್ರೆಗೆ  ಕಳೆ ತಂದಿದೆ ಎಂದರು.

         ಕಾರ್ಯಕ್ರಮದಲ್ಲಿ  ಕೆವಿಕೆ ವಿಜ್ಞಾನಿ ಡಾ.ಮಂಜುನಾಥ ಚವರಡ್ಡಿ, ಎಸ್ .ಎಂ.ವಾರದ,

ಬಿಜೆಪಿ ಮುಖಂಡ ರವಿರಾಜ ಇನಾಂದಾರ,ಗ್ರಾ.ಪಂ ಮಾಜಿ ಅಧ್ಯಕ್ಷ ಉದಯಗೌಡ ಪಾಟೀಲ, ಚ.ಕಿತ್ತೂರ ಬಿಜೆಪಿ ಮಂಡಳ ಅದ್ಯಕ್ಷ ಶೇಖರ ಕುಲಕರ್ಣಿ, ಗ್ರಾ.ಪಂ ಸದಸ್ಯ ಯಲ್ಲನಗೌಡ ದೊಡ್ಡಗೌಡರ, ಬಸನಗೌಡಾ ಸಿದ್ರಾಮಣಿ, ಸಿದ್ದು ಬೋಳನ್ನವರ,  ದೇಶನೂರ ಪಿಕೆಪಿಎಸ್ ಅದ್ಯಕ್ಷ ಬಸವರಾಜ ಕೇದಾರಿ, ಮಾಜಿ ತಾ.ಪಂ ಸದಸ್ಯ ಶ್ರೀಶೈಲ ಕಮತಗಿ, ಡಾ.ಪ್ರಕಾಶ ಹಲ್ಯಾಳ, ಸೋಮಪ್ಪ ದೇಯಣ್ಣವರ, ಮತ್ತಿಕೊಪ್ಪ ಪಿಕೆಪಿಎಸ್ ಉಪಾಧ್ಯಕ್ಷ ಅಡಿವೆಪ್ಪ ಹೊಸಮನಿ, ಸೋಮಪ್ಪ ತುಕ್ಕುನವರ, ಪ್ರದೀಪ ದೊಡ್ಡಗೌಡರ, ಅಶೋಕ ಹತ್ತರಗಿ, ಶ್ರೀಕಾಂತ ತರಗಾರ, ಶಿವಯ್ಯಾ ಪೂಜೇರಿ, ಬಸಪ್ಪ ಮುಚ್ಚಂಡಿ, ಅಶೋಕ ಲೆಂಕೆನ್ನವರ,ಎಸ್.ಎಂ.ಪಾಟೀಲ,ಈರಣ್ಣ ವಾರದ,ಶಶಿಕಾಂತ ಪಾಟೀಲ,ಸಿ.ವಾಯ್.ಮೆಣಸಿನಕಾಯಿ,ಮಹಾದೇವ ಲಂಕೆನ್ನವರ,ನಾಗರಾಜ ಮುಚಂಡಿ,ಬಸಪ್ಪ ಶಿಂತ್ರಿ,ಈರಪ್ಪ ಶೇಗುಣಸಿ,ಸೋಮಪ್ಪ ಶೇಗುಣಸಿ, ಮಾಜಿ ಮತ್ತು ನಿವೃತ್ತ ಸೈನಿಕರು,ಮತ್ತಿಕೊಪ್ಪ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು,ದೂರ ಊರಿನ ಸಂಬಂದಿಗಳು ಭಾಗವಹಿಸಿದ್ದರು. ಮತ್ತಿಕೊಪ್ಪ ಪಿಕೆಪಿಎಸ್ ಅಧ್ಯಕ್ಷ ಮಹಾಂತೇಶ ಮೊಹರೆ ಅಧ್ಯಕ್ಷತೆ ವಹಿಸಿದ್ದರು.






Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ