**ಬಳ್ಳಾರಿ, ಜೂನ್ 08: ಕರ್ನಾಟಕ ಯುವ ಜಾಗೃತಿ ವೇದಿಕೆಯ ವತಿಯಿಂದ ವಾರ್ಡ್ ನಂ. 35ರ ಇಂದಿರಾ ನಗರದ ಹುಲಿಗೆಮ್ಮ ದೇವಸ್ಥಾನದ ಹತ್ತಿರ ಕೆ.ಎಚ್.ಬಿ. ಕಾಲೋನಿಗೆ ಹೋಗುವ ದಾರಿಯಲ್ಲಿ ಅಪಾಯಕಾರಿಯಾಗಿ ಬಾಗಿರುವ ವಿದ್ಯುತ್ ಕಂಬವನ್ನು ತಕ್ಷಣ ದುರಸ್ತಿ ಮಾಡಬೇಕೆಂದು ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ಶೈಲೇಂದ್ರ ರೆಡ್ಡಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಕಂಬ ಸಂಖ್ಯೆ CCB ES W.34 C.KMR 853 ಯಾವುದೇ ಕ್ಷಣದಲ್ಲಿ ಬೀಳುವ ಹಂತದಲ್ಲಿದ್ದು, ಸಾರ್ವಜನಿಕರಿಗೆ ಜೀವಹಾನಿಯಾಗುವ ಅಪಾಯವಿದೆ ಎಂದು ವೇದಿಕೆ ಆರೋಪಿಸಿದೆ.
ಈ ಸಂದರ್ಭದಲ್ಲಿ ನಗರ ಗೌರವ ಅಧ್ಯಕ್ಷ ಚಂದ್ರಶೇಖರ್, ನಗರ ಅಧ್ಯಕ್ಷ ಬಿ. ಪ್ರಸಾದ್, ನಗರ ಉಪಾಧ್ಯಕ್ಷ ರಾಮು, ಪ್ರಧಾನ ಕಾರ್ಯದರ್ಶಿ ರಜಾಕ್ ಮತ್ತು ಜಡೇಶ ಹಾಜರಿದ್ದರು.