ಧಾರವಾಡ ,ಕರ್ನಾಟಕ ವಿಶ್ವವಿದ್ಯಾಲಯದ 75 ನೇ ವಾರ್ಷಿಕ ಘಟಿಕೋತ್ಸವವು ಎಪ್ರೀಲ್ 23 ಗುರುವಾರದಂದು ಬೆಳಿಗ್ಗೆ 11:೦೦ ಗಂಟೆಗೆ ಗಾಂಧಿ ಭವನದಲ್ಲಿ ನಡೆಯಲಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಎ.ಎಂ.ಖಾನ್ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು.
75ನೇ ವಾರ್ಷಿಕ ಘಟಿಕೋತ್ಸವದಲ್ಲಿ ರಾಜ್ಯದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಘಟಿಕೋತ್ಸವದ ಅಧ್ಯಕ್ಷತೆ ವಹಿಸಲಿದ್ದಾರೆ. ಇಸ್ರೋದ ನಿಕಟಪೂರ್ವ ಅಧ್ಯಕ್ಷರಾದ ಪ್ರೊ. ಎ.ಎಸ್.ಕಿರಣಕುಮಾರ ಘಟಿಕೋತ್ಸವದ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ. ಸುಧಾಕರ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಎಂದರು
75 ನೇ ಘಟಿಕೋತ್ಸವದಲ್ಲಿ ಸುವರ್ಣ ಪದಕ, ಪಾರಿತೋಷಕ, ಶಿಷ್ಯವೇತನ ಮತ್ತು ರ‍್ಯಾಂಕ್ ಪಡೆದವರ ವಿವರ
ಈ ಘಟಿಕೋತ್ಸವದಲ್ಲಿ 270 ಪ್ರಶಸ್ತಿಗಳನ್ನು ಮಾಡಲಾಗುವದು ಅದರಲ್ಲಿ 113 ವಿದ್ಯಾರ್ಥಿಗಳು ಉಪಸ್ಥಿತಿಯಲ್ಲಿ ಸುವರ್ಣ ಪದಕವನ್ನು ಪಡೆಯಲಿದ್ದಾರೆ. 57 ವಿದ್ಯಾರ್ಥಿಗಳು ಪಾರಿತೋಷಕಗಳನ್ನು ಉಪಸ್ಥಿತಿಯಲ್ಲಿ ಪಡೆಯಲಿದ್ದಾರೆ. 78 ವಿದ್ಯಾರ್ಥಿಗಳು ಶಿಷ್ಯವೇತನ ಪಡೆಯಲಿದ್ದಾರೆ. ಇನ್ನೂ 96 ವಿದ್ಯಾರ್ಥಿಗಳು ರ‍್ಯಾಂಕ್‌ಗಳನ್ನು ಪಡೆಯಲಿದ್ದಾರೆ.
ಪಿ.ಎಚ್.ಡಿ ಪದವಿ ಪಡೆಯುವವರ ವಿವರ
75 ನೇ ವಾರ್ಷಿಕ ಘಟಿಕೋತ್ಸವದಲ್ಲಿ ಕಲೆ. ವಾಣಿಜ್ಯ, ಸಮಾಜ ವಿಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ, ಕಾನೂನು ಮತ್ತು ನಿರ್ವಹಣೆ, ಶಿಕ್ಷಣ ನಿಖಾಯದ ೨೫೨ ಅಭ್ಯರ್ಥಿಗಳು ಪಿ.ಎಚ್.ಡಿ ಪದವಿ ಪಡೆಯಲಿದ್ದು, ಅದರಲ್ಲಿ 172 ಪುರಷರು ಮತ್ತು 80 ಮಹಿಳೆಯರಿದ್ದಾರೆ .
ಸ್ನಾತಕೋತ್ತರ ಪದವಿ:
ಸ್ನಾತಕೋತ್ತರದ ಕಲೆ. ವಾಣಿಜ್ಯ, ಸಮಾಜ ವಿಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ, ಕಾನೂನು ಮತ್ತು ನಿರ್ವಹಣೆ, ಶಿಕ್ಷಣ ಮತ್ತು ದೈಹಿಕ ಶಿಕ್ಷಣ,ವಿಷಯಗಳ ಒಟ್ಟು 4129 (93.73%)ವಿದ್ಯಾರ್ಥಿಗಳು ಉಪಸ್ಥಿತಿ ಮತ್ತು ಅನುಪಸ್ಥಿತಿಯಲ್ಲಿ ಪದವಿ ಪಡೆಯಲಿದ್ದಾರೆ.
ಸ್ನಾತಕ ಪದವಿ:
ಪದವಿಯ ವಿವಿಧ ವಿಷಯಗಳಲ್ಲಿ ಒಟ್ಟು 24,030(81.23%) ವಿದ್ಯಾರ್ಥಿಗಳು ಘಟಿಕೋತ್ಸವದಲ್ಲಿ ಉಪಸ್ಥಿತಿ ಮತ್ತು ಅನುಪಸ್ಥಿತಿಯಲ್ಲಿ ಪದವಿ ಪಡೆಯಲಿದ್ದಾರೆ.
ಸ್ನಾತ್ತಕೋತ್ತರ ಪ್ಲೊಮಾ ಪದವಿ:
ವಿವಿಧ ವಿಷಯಗಳಲ್ಲಿ ಒಟ್ಟು ೬೯ ವಿದ್ಯಾರ್ಥಿಗಳು ಸ್ನಾತಕೋತ್ತರ ಡಿಪ್ಲೋಮಾ ಪದವಿ ಪಡೆಯಲಿದ್ದಾರೆ ಎಂದರು.
ಕರ್ನಾಟಕ ವಿಶ್ವವಿದ್ಯಾಲಯದಿಂದ ಇಲ್ಲಿಯವರೆಗೆ ಘಟಿಕೋತ್ಸವದಲ್ಲಿ 104 ಜನರಿಗೆ ಗೌರವ ಡಾಕ್ಟರೇಟ್ ನೀಡಲಾಗಿದೆ. ಕವಿವಿಯು ಲಕ್ಷಾಂತರ ವಿದ್ಯಾರ್ಥಿಗಳ ಬೃಹತ್ ಸಂಖ್ಯೆಯ ಹಳೆಯ ವಿದ್ಯಾರ್ಥಿಗಳ ಸಂಖ್ಯೆ ಹೊಂದಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಶಂಕರ ವಣಿಕ್ಯಾಳ, ಮತ್ತು ಕರ್ನಾಟಕ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ಪ್ರೊ. ನಿಜಲಿಂಗಪ್ಪ ಮಟ್ಟಿಹಾಳ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಪ್ರೊ.ಸಂಜಯಕುಮಾರ ಮಾಲಗತ್ತಿ, ಡಾ.ಜೆ.ಎಂ.ಚಂದುನವರ, ಡಾ.ಪ್ರಭಾಕರ ಕಾಂಬಳೆ, ಡಾ.ವಿಶ್ವನಾಥ ಚಿಂತಾಮಣಿ, ಡಾ.ಮಂಜುನಾಥ ಅಡಿಗಲ್ ಇದ್ದರು.