ಬಳ್ಳಾರಿ,ಜೂ.15: ಕರ್ನಾಟಕ ವಿಡಿಯೋ ಮತ್ತು ಪೋಟೋ ಅಸೋಸಿಯೇಷನ್ ಮತ್ತು ಕರ್ನಾಟಕ ರಾಜ್ಯ ಪತ್ರಿಕಾ ಛಾಯಗ್ರಾಹಕರ ಸಹಕಾರದೊಂದಿಗೆ ತ್ರಿಪುರ ವಾಸಿನಿ ಅರಮನೆ ಮೈದಾನದಲ್ಲಿ ಮೂರು ದಿನಗಳ ಕಾಲ ಅಂತರಾಷ್ಟ್ರೀಯ ಮಟ್ಟದ ಪೋಟೋ ಮತ್ತು ವಿಡಿಯೋ ಪ್ರದರ್ಶನದಲ್ಲಿ ಬಿ.ಎಮ್. ರುದ್ರಮುನಿ ಸ್ವಾಮಿ ಬಳ್ಳಾರಿ, ಮಹಿಳಾ ಪತ್ರಿಕಾ ಛಾಯಾಗ್ರಹತೆ ಪೂರ್ಣಿಮಾ ಬೆಂಗಳೂರು, ಸೇರಿದಂತೆ ವಿಶ್ವೇಶ್ವರಪ್ಪ ಎಸ್ ಬೆಂಗಳೂರು, ಪಿ ಕೆ ಬಡಿಗೇರ್ ಬೆಳಗಾವಿ, ನಾಬಿರಾಜ್ ದಸ್ತೆನವರ್ ಕೊಪ್ಪಳ, ಅಕ್ರಮ್ ಬೆಂಗಳೂರು, ಪ್ರಗತಿ ಗೋಪಾಲಕೃಷ್ಣ ಮೈಸೂರುರವರಿಗೆ ಸನ್ಮಾನಿಸಲಾಯಿತು.
ಅಧ್ಯಕ್ಷ ಹೆಚ್.ವಿ.ಕೃಷ್ಣಪ್ಪರವರು, ಕಾರ್ಯದರ್ಶಿ ಎ.ಜಗದೀಶ್ ಕಾರ್ಯಕ್ರಮ ಉದ್ಘಾಟಿಸಿದರು.
ಕೆ.ದೇವರಾಜ್ ಮಾತನಾಡಿ, ನಮ್ಮ ಇಲಾಖೆಯ ವತಿಯಿಂದ ಪೋಟೋ ಮತ್ತು ವಿಡಿಯೋ ಪ್ರದರ್ಶನ ಮೇಳಕ್ಕೆ ನಾವು ಸಹಕಾರ ಕೊಡುತ್ತಿದ್ದೇವೆ. ಪೋಟೋ ಮತ್ತು ವಿಡಿಯೊ ಡೊಡ್ಡ ಉದ್ಯಮವಾಗಿದೆ. ಪ್ರತಿಯೊಬ್ಬ ಪೋಟೋ ಮತ್ತು ವಿಡಿಯೊಗ್ರಾಫರ್ಸ್ ಗಳಿಗೆ ಎಂ.ಎಸ್.ಎಮ್.ಇ.ಇಲಾಖೆಗೆ ಭೇಟಿ ಮಾಡಿ ವಿವಿಧ ಯೋಜನೆಗಳ ಸಹಾಯ ಪಡೆದುಕೊಳ್ಳಿ. ವಿವಿಧ ಜಿಲ್ಲೆಗಳಲ್ಲಿ ಈ ರೀತಿಯ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ನಮ್ಮ ಇಲಾಖೆ ಸಹಕಾರ ನೀಡುತ್ತದೆ ಎಂದು ಹೇಳಿದರು.
ಅಧ್ಯಕ್ಷರಾದ ಹೆಚ್.ವಿ. ಕೃಷ್ಣಪ್ಪ ಮಾತನಾಡಿ, ಕರ್ನಾಟಕ ಪೋಟೋ ಮತ್ತು ವಿಡಿಯೋಗ್ರಾಫರ್ಸ್ ಗಳು ಆನೇಕ ಸಮಸ್ಯೆಗಳಿಂದ ಎದುರುಸುತ್ತಿದ್ದಾರೆ.
ತಂತ್ರಜ್ಞಾನ ಬೆಳಯುತ್ತಿದೆ ಅದನ್ನು ಪರಿಚಯಿಸಲು ಪ್ರದರ್ಶನ ಮಾರಾಟ ಮೇಳ ಮೂರು ದಿನಗಳ ಆಯೋಜಿಸಲಾಗಿದೆ.
ಮುಖ್ಯ ಅತಿಥಿಗಳಾಗಿ ಎಂ.ಎಸ್.ಎA.ಇ.ಡೇವಲ್ ಮೆಂಟ್ ಅಧಿಕಾರಿ ದೇವರಾಜ್ ಕೆ. ಬಿ.ಬೆಂಜಮಿನ್ ಭಾಸ್ಕರ್, ಸೆಲ್ವಮುತ್ತು, ಶ್ರೀನಾಥ್, ಎಸ್.ಕೆ.ಹುಸೇನ್, ಜಾನ್ ಅಮರ್ ರಾಜ್, ರಿನಿ ರಾವಲ್, ದಿವ್ಯರವಿ ಇದ್ದರು.
೨೦೨೬ರಲ್ಲಿ ರಾಜ್ಯದಲ್ಲಿ ಮಾದ್ಯಮದ ಕ್ಷೇತ್ರದ ೮ ಜನರಿಗೆ ಕರ್ನಾಟಕ ರತ್ನ ಮಾದರಿಯಲ್ಲಿ ಛಾಯಾರತ್ನ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಹೇಳಿದರು.