Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕಾರಂತ ರತ್ನ ಹಾಗೂ ಕಾರಂತ ಸಾಹಿತ್ಯ ರತ್ನ ಪ್ರಶಸ್ತಿ ಪ್ರದಾನ;  ಕಲೆಗೆ ಸಾವಿಲ್ಲ ಕಲಾವಿದನಿಗೆ ಸುಖವಿಲ್ಲ - ಚೋರನೂರು ಟಿ ಕೊಟ್ರಪ್ಪ








ಬಳ್ಳಾರಿ.ಏ.10 : ಮನುಷ್ಯನ ಸರ್ವಾಂಗ ಸುಂದರ ಬದುಕಿನ ನಿರ್ಮಾಣಕ್ಕೆ ಕಲೆ ಮತ್ತು ಸಂಸ್ಕೃತಿ ಪೂರಕವಾಗಿವೆ ಕಲಾವಿದರು ಮತ್ತು ಕಲಾಭಿವೃದ್ಧಿ ಕಾರ್ಯಕ್ರಮಗಳ ಸಂಖ್ಯೆ ಹೆಚ್ಚಳವಾದಂತೆ ಕಲೆಯ  ತಾನಾಗಿಯೇ ಬೆಳವಣಿಗೆ

ಆಗುತ್ತದೆ ಆದರೂ ಕಲೆಗೆ ಸಾವಿಲ್ಲ ಕಲಾವಿದನಿಗೆ ಸುಖವಿಲ್ಲ ಎಂಬ ಮಾತು ಸತ್ಯ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ಉಪನಿರ್ದೇಶಕ ಚೋರನೂರು ಟಿ ಕೊಟ್ರಪ್ಪ ಅಭಿಪ್ರಾಯ ಪಟ್ಟರು.


 ಅವರು ನಗರದ ಶ್ರೀಮೇಧಾ ಪದವಿ ಮಹಾ ವಿದ್ಯಾಲಯಲ್ಲಿ ಕಾರಂತ ರಂಗಲೋಕ ಕಲಾತ್ಮಕ ಮನಸ್ಸುಗಳ ತಾಣ  ಭೈರಗಾಮದಿನ್ನೆ ವತಿಯಿಂದ

ಹಮ್ಮಿಕೊಂಡ ಕಾರಂತ ರತ್ನ, ಕಾರಂತ ಸಾಹಿತ್ಯ ರತ್ನ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ,  ನಮ್ಮ ನಡುವೆ ಎಲೆಮರೆ ಕಾಯಿಯಂತೆ ಬದುಕುತ್ತಿರುವ ಅಪ್ರತಿಮ ಕಲಾವಿದರು ಇದ್ದಾರೆ. ಅವರನ್ನು ಗುರುತಿಸಿ  ಮುಖ್ಯವಾಹಿನಿಗೆ ತರುವ ಕಾರ್ಯದಲ್ಲಿ ಈ ಸಂಸ್ಥೆ ನಿರತವಾಗಿರುವುದು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.


ನಂತರ ಹಿರಿಯ ರಂಗಕರ್ಮಿ ಕುಡುದರಹಾಳ್ ಡಾ.ಶಿವಕುಮಾರ ತಾತ ಮಾತಾನಾಡಿ ಮನುಷ್ಯ ಎಲ್ಲವನ್ನೂ ತಿಳಿಯುತ್ತಲೆ ತಿಳಿಯಾಗುತ್ತಾನೆ ಹಾಗಾಗಿ ಅವನ ಎಲ್ಲ ತಿಳುವಳಿಕೆಗೆ ರಂಗಭೂಮಿ ಅವಶ್ಯ ಎಂದರು.


ಕಾರ್ಯಕ್ರಮದಲ್ಲಿ ವಿರೇಂದ್ರ ರಾವಿಹಾಳ್ ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ ರಚನೆಯ 'ಯಪ್ಪ ತಿಪ್ಪನ ನುಡಿಗಳು' ಪುಸ್ತಕ ಲೋಕಾರ್ಪಣೆ ಮಾಡಿ ಈ ಪುಸ್ತಕ ಸಮಾಜ ಎಲ್ಲ ವರ್ಗಗಳ ಚಲನವಲನಗಳ ಪ್ರತಿಫಲಕದಂತಿದ್ದು, ಸಹೃದಯಿಗಳನ್ನು ಆಕರ್ಷಿಸುತ್ತದೆ ಎಂದರು. ನಂತರ ಕಾರ್ಯಕ್ರಮದಲ್ಲಿ ಮರಿಯಮ್ಮಮಹಳ್ಳಿ ಈ.ವೆಂಕಟೇಶ ಮಹಾಶಕ್ತಿ, ಯಾದಗಿರಿ ಅನಂತಕುಮಾರ  ರುಧಿರಶ್ರು, ಕಾರ್ಕಳ ಸಾವಿತ್ರಿ ಮನೋಹರ ರ ಪಂಚ ಪ್ರಹಸನ,ಧಾರವಾಡ ಡಾ.ವೀಣಾ ಸಂಕನಗೌಡರ ಮೂರು ಮತ್ತೊಂದು ನಾಟಕಗಳು, ಶಿವಮೊಗ್ಗ ಡಾ.ಗಣೇಶ ಕೆಂಚನಾಲ ರ ಉಡು-ತಡಿ ಪುಸ್ತಕಗಳಿಗೆ ರಾಜ್ಯ ಮಟ್ಟದ ಕಾರಂತ ಸಾಹಿತ್ಯ ರತ್ನ ಪ್ರಶಸ್ತಿ ಹಾಗೂ ಬಯಲಾಟ ಕಲಾವಿದೆ ಎಳ್ಳಾರ್ತಿ ಚಾಮುಂಡೇಶ್ವರಿ, ಬಯಲಾಟ ನೇಪಥ್ಯಗಾರ ಎಮ್ಮಿಗನೂರು ಜೀರ್ ಹಾಲೇಶಪ್ಪ, ಹಿರಿಯ ಕಲಾವಿದೆ ಕೊಟ್ನೆಕಲ್ ರಂಗಮ್ಮ, ಬಯಲಾಟ ಹಾರ್ಮೋನಿಯಂ ಮೇಷ್ಟ್ರು ಮೆಟ್ರಿ ಸಿ.ಡಿ.ಪಿ‌.ಮಾರೆಪ್ಪ, ಬಯಲಾಟ ಹಿರಿಯ ಕಲಾವಿದ ಬಂಡ್ರಿ ಲಿಂಗಪ್ಪ ರವರಿಗೆ ಕಾರಂತ ರತ್ನ ರಂಗ ಪ್ರಶಸ್ತಿ ಪ್ರದಾನ ಮಾಡಲಾಯಿತು.


 ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ.ರಾಮಕಿರಣ್, ಸಾಹಿತಿಗಳಾದ ಡಾ.ದಸ್ತಗೀರ್ ಸಾಬ್ ದಿನ್ನಿ, ವಿರೇಂದ್ರ ರಾವಿಹಾಳ್, ಬಯಲಾಟ ಅಕಾಡೆಮಿ ಮಾಜಿ ಸದಸ್ಯ ಮುದ್ದಟನೂರು ಹೆಚ್ ತಿಪ್ಪೇಸ್ವಾಮಿ ಹಾಗೂ ಕಾರ್ಯದರ್ಶಿ ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ ಭಾಗವಹಿಸಿದ್ದರು.ಡಾ.ವೈ.ಸುಮ ನಿರೂಪಿಸಿದರು.






Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ