Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕಬ್ಬಡ್ಡಿ ಆತ್ಮೀಯತೆ ಬೆಳೆಸುವ ಆಟ; ಸಚಿವ ತಿಮ್ಮಾಪೂರ


ಹಸಿರು ಕ್ರಾಂತಿ ವರದಿ: ಜಮಖಂಡಿ: ಕಬ್ಬಡ್ಡಿ ಎಂಬುದು ಅದ್ಭುತ ಆಟ ಆತ್ಮೀಯತೆ ಬೆಳೆಸುವ ಆಟ. ಅಬಕಾರಿ ಇಲಾಖೆಯಿಂದ ಕ್ರೀಡಾ ಮೀಸಲಾತಿ ತರುವ ಕೆಲಸ ಮಾಡುತ್ತೇನೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.


ನಗರದ ಬಿಎಲ್‌ಡಿಇ ದರ್ಬಾರ ಹಾಲ್ ನಲ್ಲಿ ನಡೆದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ, ಬೆಂಗಳೂರು. ಬಿ.ಎಲ್.ಡಿ.ಇ. ಅಸೋಸಿಯೇಷನ್ಸ್ ನರ್ಸಿಂಗ್ ಕಾಲೇಜು, ಜಮಖಂಡಿ ಇವರ ಸಹಯೋಗದಲ್ಲಿ ಆರ್.ಜಿ.ಯು.ಎಚ್.ಎಸ್. ಕಬಡ್ಡಿ (ಪುರುಷ) ಅಂತರ ವಲಯ & ಕಬಡ್ಡಿ (ಮಹಿಳೆಯರು) ಏಕ ವಲಯ ಪಂದ್ಯಾವಳಿ ಮತ್ತು ಆಯ್ಕೆ ಟ್ರಯಲ್ಸ್ ೨೦೨೫-೨೬ ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಕಬ್ಬಡ್ಡಿ ಆಟವು ಎದುರಿಗಿನ ಆಟಗಾರನ ಚಲನವಲನಗಳನ್ನು ಗಮನಿಸಿ ಹೊಂಚುಹಾಕಿ ಧಾಳಿಮಾಡುವ ಆಟ. ಕಬ್ಬಡ್ಡಿಯನ್ನು ಛಲದಿಂದ ಯುಕ್ತಿ ಉಪಯೋಗಿಸಿ ಆಡಬೇಕು. ಆಟಗಾರರು ದೇಶದ ಕೀರ್ತಿ ತರುವ ಕೆಲಸವಾಗಬೇಕು. ಆಟಗಾರರು ಛಲದಿಂದ ಎದುರಾಳಿಯನ್ನು ಸೋಲಿಸಿ ಗೆಲ್ಲುವ ಹುಮ್ಮಸನ್ನು ಬೆಳಸಿಕೊಳ್ಳಿ ಎಂದು ತಮ್ಮ ಬಾಲ್ಯವನ್ನು ನೆನಪಿಸಿಕೊಂಡರು.


ಮುಖ್ಯ ಅಥಿತಿ ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ ಜಮಖಂಡಿ ಕ್ರೀಡೆಯಲ್ಲಿ ತನ್ನದೆ ಆದ ಕೊಡುಗೆ ನೀಡಿದೆ ಅಂತರಾಷ್ಟಿಯ ಸೈಕಲ್ ಪಟುಗಳನ್ನು, ಕುಸ್ತಿಪಟುಗಳನ್ನು ಸೇರಿದಂತೆ ಹಲವಾರು ಸಾಧಕರನ್ನು ನೀಡಿದೆ. ಕಳೆದ ೫ ವರ್ಷದಿಂದ ಸಿದ್ದುನ್ಯಾಮಗೌಡ ಅಕ್ಯಾಡೆಮಿಯಿಂದ ೩ ಜನ ಪ್ರೋ ಕಬ್ಬಡಿಗೆ ಆಯ್ಕೆಯಾಗಿದ್ದಾರೆ. ಸೋತವರು ಹುಮ್ಮಸ್ಸು ಕಳೆದುಕೊಳ್ಳದೆ ಗೆದ್ದವರು ಅಹಂಕಾರಿಗಳಾಗದೆ ದೇಶದ ಕೀರ್ತಿ ಹೆಚ್ಚಿಸಿ, ದೇಶವನ್ನು ಪ್ರತಿನಿಧಿಸುವ ಕ್ರೀಡಾಪಟುಗಳಾಗಿ ಹೊಮ್ಮಲಿ ಎಂದರು.


ಇದೇ ಸಂದರ್ಭದಲ್ಲಿ ಅಧ್ಯಕ್ಷ ಅರುಣಕುಮಾರ ಶಹಾ, ವಿ.ಎಚ್.ಲಗಳಿ, ದೈಹಿಕ ನಿರ್ದೇಶಕ ಐ.ಎಸ್.ನ್ಯಾಮಗೌಡ, ಪ್ರೋಫೆಸರ್ ವೀರಭದ್ರ, ಧಮೇಂದ್ರ ಸೇರಿದಂತೆ ಹಲವರು ಇದ್ದರು.

ಪೋಟೋ ಜೆಕೆಡಿ ೨೦-೧ಎ-ಬಿಜಮಖಂಡಿ: ನಗರದ ಬಿಎಲ್‌ಡಿಇ ದರ್ಬಾರ ಹಾಲ್‌ನಲ್ಲಿ ನಡೆದ ಬಿ.ಎಲ್.ಡಿ.ಇ. ಅಸೋಸಿಯೇಷನ್ಸ್ ನರ್ಸಿಂಗ್ ಕಾಲೇಜು, ಜಮಖಂಡಿ ಇವರ ಸಹಯೋಗದಲ್ಲಿ ಆರ್.ಜಿ.ಯು.ಎಚ್.ಎಸ್. ಕಬಡ್ಡಿ (ಪುರುಷ) ಅಂತರ ವಲಯ & (ಮಹಿಳೆಯರು) ಏಕ ವಲಯ ಪಂದ್ಯಾವಳಿ ಮತ್ತು ಆಯ್ಕೆ ಟ್ರಯಲ್ಸ್ ೨೦೨೫-೨೬ ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವ ಆರ್.ಬಿ.ತಿಮ್ಮಾಪೂರ
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ