Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಇಂದಿರಾ ಗಾಂಧಿ ದಿಟ್ಟತನದಂತೆ ಅಕ್ಕ ಪಡೆ ಕೆಲಸ ಮಾಡಲಿ - ಜ್ಯೋತಿ

ಮಹಿಳಾ ಕಾಂಗ್ರೆಸ್ ಮೂಲಕ ಅಕ್ಕ ಪಡೆ ಸಿಬ್ಬಂದಿಗೆ ಅಭಿನಂದನೆ


ಕೊಪ್ಪಳ: ರಾಜ್ಯ ಕಾಂಗ್ರೆಸ್ ಸರಕಾರದ ಮಹಿಳಾಪರ ಮತ್ತೊಂದು ಕಾರ್ಯಕ್ರಮವಾಗಿರುವ ಅಕ್ಕಪಡೆಯು ಇಂದಿರಾ ಗಾಂಧಿ ಅವರ ಆದರ್ಶ ಮತ್ತು ದಿಟ್ಟತನದಂತೆ ಕೆಲಸ ಮಾಡಲಿ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳ ಮನವಿ ಮಾಡಿದರು.

ಅವರು ಇಲ್ಲಿನ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಪೋಲಿಸ್ ಔಟಪೋಸ್ಟ್ ಹತ್ತಿರ ರಾಜ್ಯ ಕಾಂಗ್ರೆಸ್ ಸರಕಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಆರಂಬಿಸಿದ  ಮಹಿಳೆಯರ ಸಂರಕ್ಷಣೆಯ ಮಹತ್ವಾಕಾಂಕ್ಷೆ ಕಾರ್ಯಕ್ರಮ ಅಕ್ಕಪಡೆ ಸಿಬ್ಬಂದಿಯನ್ನು ಗೌರವಿಸಿ ಮಾತನಾಡಿದರು.

ಗ್ಯಾರಂಟಿ ಯೋಜನೆಗಳ ಮೂಲಕ ಆರ್ಥಿಕ ಸಬಲೀಕರಣ ಮಾಡಿದ ಹಾಗೆ ದೌರ್ಜನ್ಯ ಹಾಗೂ ಸಂಕಷ್ಟಕ್ಕೊಳಗಾಗುವ ಮಹಿಳೆಯರಿಗೆ ತುರ್ತು ಸಹಾಯ ಒದಗಿಸಲು ಅಕ್ಕ ಪಡೆ ಸದಾ ಸನ್ನದ್ಧವಾಗಿರುತ್ತದೆ, ಮಹಿಳೆಯರ ಸುರಕ್ಷತೆಗೆ ಅಗ್ರ ಆದ್ಯತೆಯಾಗಿದೆ. ಮಹಿಳೆಯರಿಗಾಗಿ ರಾಜ್ಯಾದ್ಯಂತ ಇರುವ ಸಹಾಯವಾಣಿಯ ಮೂಲಕ ತಲುಪಲು ಲಭ್ಯವಿರುತ್ತದೆ. ದೂರದ ಸ್ಥಳದಿಂದ ಕರೆ ಬಂದರೂ ತಕ್ಷಣದ ಸಹಾಯ  ಒದಗಿಸಲಾಗುತ್ತದೆ.

ತಂಡವು ದೂರುಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸಲಿದ್ದು, ಗಂಭೀರ ಪ್ರಕರಣಗಳಲ್ಲಿ ಆರೋಪಿಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ಹಸ್ತಾಂತರಿಸುತ್ತದೆ. ಅಕ್ಕಪಡೆಯ ಸದಸ್ಯರಿಗೆ ಹಿಂಸಾಚಾರ ಪ್ರಕರಣಗಳ ನಿರ್ವಹಣೆ ಮತ್ತು ಸಾರ್ವಜನಿಕ ಸುವ್ಯವಸ್ಥೆ ಕಾಪಾಡುವುದು ಸೇರಿದಂತೆ ವಿಶೇಷ ತರಬೇತಿ ನೀಡಲಾಗುತ್ತದೆ.

ಅಲ್ಲದೇ ವಿದ್ಯಾರ್ಥಿಗಳು ಮತ್ತು ಮಹಿಳೆಯರಲ್ಲಿ ಬಾಲ್ಯ ವಿವಾಹ ನಿಷೇಧ, ಪೋಸ್ಕೋ ಕಾಯಿದೆ, ಮಹಿಳಾ ಸುರಕ್ಷತೆ ಮತ್ತು ಮೊಬೈಲ್ ಸುರಕ್ಷತಾ ನಿಯಮಗಳ ಕುರಿತು ಅರಿವು ಮೂಡಿಸಲಾಗುವುದು. ಅಲ್ಲದೆ, ೧೦೯೮, ೧೧೨, ಮತ್ತು ೧೯೩೦ ರಂತಹ ಸಹಾಯವಾಣಿಗಳ ಬಗ್ಗೆ ಮಾಹಿತಿ ನೀಡುತ್ತದೆ.

ಇಷ್ಟೆಲ್ಲಾ ಕೆಲಸ ಮಾಡುವ ಈ ಪಡೆಗೆ ಮಹಿಳಾ ಕಾಂಗ್ರೆಸ್ ಸಹ ಸಹಕಾರ ನೀಡುತ್ತದೆ, ಗಾಂಧೀಜಿ ಅವರ ಕನಸಿನಂತೆ ಮಹಿಳೆ ಸ್ವಾಬಿಮಾನ ಮತ್ತು ಸ್ವತಂತ್ರವಾಗಿ ಬದುಕಲು ಅಗತ್ಯ ಸುರಕ್ಷತೆಗೆ ಇನ್ನಷ್ಟು ಶಕ್ತಿಯನ್ನು ನೂತನ ಅಕ್ಕ ಪಡೆ ನೀಡಲಿರುವದು ಖುಷಿಯ ಸಂಗತಿ ಎಂದರು.

ಈ ಸಂದರ್ಭದಲ್ಲಿ ಅಕ್ಕ ಪಡೆ ಸಿಬ್ಬಂದಿ ಪೋಲಿಸ್ ಇಲಾಖೆಯ ಸಾವಿತ್ರಿ ಡಿ. ಮತ್ತು ಈರಣ್ಣ ತಾವರಗೇರಾ ಜೊತೆಗೆ ಹೋಮ್ ಗಾರ್ಡ್‌ಗಳಾದ ಯಲ್ಲಮ್ಮ ಎನ್. ಕೊಪ್ಪಳ, ನಾಗರತನ್ ಗಂಗಾವತಿ, ಭಾಗ್ಯ ಗಂಗಾವತಿ ಮತ್ತು ತಾಯೇರಾ ಬೇಗಂ ಅವರನ್ನು ಹೂಗುಚ್ಛ ನೀಡಿ ಸನ್ಮಾನಿಸಲಾಯಿತು. ಕೆಪಿಸಿಸಿ ಸದಸ್ಯರಾದ ಗಿರಿಜಾ ಸಂಗಟಿ, ಮುಖಂಡರಾದ ಕಿಶೋರಿ ಬೂದನೂರ್, ಜಯಶ್ರೀ ಕಂದಕೂರ್, ಕೆಡಿಪಿ ಸದಸ್ಯೆ ನಾಗರತ್ನ ಹುಲಿಗಿ, ರೇಷ್ಮಾ ಖಾಜಾವಲಿ, ಸುಮಂಗಲಾ ನಾಯಕ್, ಸೌಭಾಗ್ಯ ಗೊರವರ್, ಶರಣಮ್ಮ ಪೂಜಾರಿ, ಜಯಶ್ರೀ ಅರಕೇರಿ, ಶಿಲ್ಪಾ ಗುಡ್ಲಾನೂರ್, ಅನಿತಾ ಅಳ್ಳಮ್ಮನವರ, ಗ್ಯಾರೆಂಟಿ ಸಮಿತಿ ಸದಸ್ಯೆ ರೇಣುಕಮ್ಮ ಕಾರಟಗಿ, ಮುತ್ತಮ್ಮ ಕಾರಟಗಿ ಇತರರಿದ್ದರು.


Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ