Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪತ್ರಕರ್ತರು ಸಮಾಜದ ಅವಿಭಾಜ್ಯ ಘಟಕ: ಪ್ರಭಾಕರ ಕೋರೆ





ಬೆಳಗಾವಿ: ಬೆಳಗಾವಿ ಪ್ರತ್ರಕರ್ತರ ಸಂಘದ ವತಿಯಿಂದ ನಗರದ ಎಸ್ ಜಿ ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಶಿವಕುಮಾರ ಸಂಬರಗಿಮಠ ಸಭಾಗೃದಲ್ಲಿ ಆಯೋಜಿಸಲಾಗಿದ್ದ ಪತ್ರಕರ್ತರ ಮಕ್ಕಳ 'ಪ್ರತಿಭಾ ಪುರಸ್ಕಾರ' ಕಾರ್ಯಕ್ರಮ ಶನಿವಾರ ಅದ್ದೂರಿಯಾಗಿ ಜರುಗಿತು.


ಈ ಸಂದರ್ಭದಲ್ಲಿ ಎಸ್ಎಸ್ಎಲ್ಸಿ/ ಪಿಯುಸಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 25 ಮಕ್ಕಳನ್ನು ಸನ್ಮಾನಿಸಲಾಯಿತು.  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೆಎಲ್ಇ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರು,‌ "ಪತ್ರಕರ್ತರ ವೃತ್ತಿಜೀವನ ಸಾಕಷ್ಟು ಕಷ್ಟಕರವಾಗಿರುತ್ತದೆ. ಬಿಡುವಿಲ್ಲದ ಕೆಲಸವಿರುವ ಕಾರಣ ಅವರು ತಮ್ಮ ಕುಟುಂಬದ ಕಡೆಗೆ, ಮಕ್ಕಳತ್ತ ಗಮನ ಹರಿಸುವುದು ಕಡಿಮೆ. ಇಂತಹ ಸಂದರ್ಭದಲ್ಲಿ ಸಾಧನೆ ತೋರಿದ ಪತ್ರಕರ್ತರ ಮಕ್ಕಳಿಗೆ ಪ್ರೋತ್ಸಾಹಿಸಿ ಸನ್ಮಾನಿಸುತ್ತಿರುವ ಈ ಕಾರ್ಯಕ್ರಮ ಐತಿಹಾಸಿಕವಾದುದು. ಯಾವತ್ತಿದ್ದರೂ ಮಕ್ಕಳು ನನ್ನ ಮೊದಲ‌ ಆದ್ಯತೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನನಗೆ ಅತೀವ ಸಂತೋಷ ತಂದಿದೆ ಎಂದರು. ಮಕ್ಕಳ ಕಡೆ ಗಮನ ಇರಲಿ, ನಿಮ್ಮ ಅರೋಗ್ಯವನ್ನೂ ಕಾಪಾಡಿಕೊಳ್ಳಿ. ಪತ್ರಕರ್ತರು ಸಮಾಜದ ಅವಿಭಾಜ್ಯ ಘಟಕ" ಎಂದು ಇದೇ ಸಂದರ್ಭದಲ್ಲಿ ಅವರು ಪತ್ರಕರ್ತರಿಗೆ ಕಿವಿಮಾತು ಹೇಳಿದರು.


ಮುಖ್ಯ ಅತಿಥಿಯಾಗಿ ಮಾತನಾಡಿದ ಬೆಳಗಾವಿ ಉತ್ತರ ಶಾಸಕ ಅಭಯ ಪಾಟೀಲ, ಇವತ್ತು ಬೆಳಗಾವಿ ಇಷ್ಟೊಂದು ಅಭಿವೃದ್ಧಿಯಾಗಲು ಜನಪ್ರತಿನಿಧಿಗಳು ಎಷ್ಟು ಕಾರಣವೋ, ಪತ್ರಕರ್ತರ ಪಾತ್ರವೂ ಅಷ್ಟೇ ಮುಖ್ಯವಾಗಿದೆ. ಹಿಂದಿನ ಸರ್ಕಾರದಲ್ಲಿ ಬೆಳಗಾವಿಯ ಪತ್ರಕರ್ತರಿಗಾಗಿ ಒಂದು ಪ್ರತ್ಯೇಕ ಕಾಲನಿ ಮಾಡುವ ಪ್ರಯತ್ನ ಮಾಡಿದ್ದೆವು. ಆದರೆ ಸಮಯದ ಅಭಾವದಿಂದ ಅದು ಕಾರ್ಯಗತವಾಗಲಿಲ್ಲ. ಇಂದಿನ‌ ಸರ್ಕಾರದ ಮುಂದೆ ಪ್ರಸ್ತಾಪ ಇಟ್ಟು, ಪತ್ರಕರ್ತರ ಬೇಡಿಕೆ ಈಡೇರಿಸಲು ಪ್ರಯತ್ನ ಪಡುವುದಾಗಿ ಭರವಸೆ ನೀಡಿದರು.


ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅಸೀಫ್ ಸೇಠ ಮಾತನಾಡಿ, ಮಕ್ಕಳು ಬರೀ‌ ಅವರ ಭವಿಷ್ಯವಲ್ಲ. ಅವರು ತಮ್ಮ ಕುಟುಂಬ ಮತ್ತು ದೇಶದ ಭವಿಷ್ಯ. ಜಗತ್ತಿನ ಯಾವುದೇ ದೊಡ್ಡ ಕಂಪನಿ ತೆಗೆದುಕೊಳ್ಳಿ. ಅಲ್ಲಿ ಭಾರತೀಯರು ಕಾಣುತ್ತಾರೆ. ಅದಕ್ಕೆ ಅವರ ಶ್ರಮ ಮತ್ತು ಬುದ್ಧಿವಂತಿಕೆ ಕಾರಣ. "ನೀವೂ ಕೂಡ ವಿದ್ಯಾರ್ಥಿ ಜೀವನದಲ್ಲಿ ಚೆನ್ನಾಗಿ ಶ್ರಮ ಪಟ್ಟಿದ್ದೇ ಆದಲ್ಲಿ ಒಳ್ಳೆಯ ಭವಿಷ್ಯ ನಿಮಗೆ ಸಿಗಲಿದೆ" ಎಂದು ಸನ್ಮಾನಿಸಿಕೊಂಡ ಪತ್ರಕರ್ತರ ಮಕ್ಕಳನ್ನು ಉದ್ದೇಶಿಸಿ ಹೇಳಿದರು.


ಮೇಯರ್ ಮಂಗೇಶ ಪವಾರ, ಉಪಮೇಯರ ವಾಣಿ ವಿಲಾಸ ಜೋಶಿ, ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ, ಬೆಳಗಾವಿ ಪತ್ರಕರ್ತರ ಸಂಘದ ಅಧ್ಯಕ್ಷ ವಿಲಾಸ ಜೋಶಿ ಮಾತನಾಡಿದರು.


ಶ್ರೀಶೈಲ ಮಠದ ಅತಿಥಿಗಳನ್ನು ಸ್ವಾಗತಿದರು. ರವೀಂದ್ರ ಉಪ್ಪಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುನಿತಾ ದೇಸಾಯಿ ಕಾರ್ಯಕ್ರಮ ನಿರೂಪಿಸಿ, ಸಂತೋಷ ಚುನಗುಡಿ ವಂದಿಸಿದರು. ಚುಕ್ಕಿ ಸಾಂಸ್ಕೃತಿಕ ಅಕ್ಯಾಡೆಮಿಯ ಮಹಿಳಾ ಸದಸ್ಯರು ಸಂಗೀತದ ರಸದೌತಣ ನೀಡಿದರು.


ಬೆಳಗಾವಿ ಪತ್ರಕರ್ತರ ಸಂಘದ ಪದಾಧಿಕಾರಿಗಳಾದ ಮಹೇಶ ಬಿಜಾಪುರೆ, ಸುರೇಶ ನೇರ್ಲಿ, ಸಂಜಯ ಸೂರ್ಯವಂಶಿ, ರಾಜು ಗವಳಿ, ವಿನಾಯಕ ಮಠಪತಿ, ಕೀರ್ತಿ ಕಾಸರಗೋಡು, ಮುನ್ನಾ ಬಾಗವಾನ, ಮಂಜುನಾಥ ಕೋಳಿಗುಡ್ಡ, ಸುನೀಲ ಪಾಟೀಲ, ರಾಜು ಹಿರೇಮಠ, ಅರುಣ ಯಳ್ಳೂರಕರ, ಇಮಾಮ ಗೂಡುನವರ, ಕುಂತಿನಾಥ ಕಲಮನಿ, ಹೆಚ್.ವಿ.ನಾಗರಾಜ, ರವಿ ಗೋಸಾವಿ, ಪಿ.ಕೆ.ಬಡಿಗೇರ, ರಜನಿಕಾಂತ ಯಾದವಾಡ, ರಾಮಚಂದ್ರ ಸುಣಗಾರ ಸೇರಿದಂತೆ ಬಹುತೇಕ ಪತ್ರಕರ್ತರು ಉಪಸ್ಥಿತರಿದ್ದರು.








Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ