ಬಳ್ಳಾರಿ12:.: ಹಿರಿಯ ಪತ್ರಕರ್ತ ಸಿದ್ದರಾಮಪ್ಪ ಸಿರಿಗೇರಿ ಅವರನ್ನು ಬಯಲಾಟದ ಹಾರ್ಮೋನಿಯಂ ಮಾಸ್ಟರ್ ವಂದವಾಗಿಲು ಪಂಪಯ್ಯ ಸ್ವಾಮಿ ಅವರು ಗುರುವಾರ ಬಳ್ಳಾರಿ ತಾಲೂಕಿನ ಶ್ರೀಧರಗಡ್ಡೆ ಗ್ರಾಮದ ತಮ್ಮ ನಿವಾಸದಲ್ಲಿ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು.
ಇದೇ ವೇಳೆ ಮಾತನಾಡಿದ ಅವರು, ಪತ್ರಕರ್ತ ಸಿದ್ದರಾಮಪ್ಪ ಸಿರಿಗೇರಿ ಅವರು ಬಯಲಾಟದ ಕಲಾವಿದರನ್ನು ಗುರುತಿಸಿ ಅವರ ಜೀವನದ ಬದುಕಿನ ನೋವು ನಲಿವುಗಳ ಬಗ್ಗೆ ಪತ್ರಿಕೆಯಲ್ಲಿ ಬರೆಯುವ ಮೂಲಕ ಹಾರ್ಮೋನಿಯಂ ಮಾಸ್ಟರ್ ಸ್ತ್ರೀ ಪಾತ್ರದಾರಿಗಳು ಮತ್ತು ಪುರುಷ ಪಾತ್ರದಾರಿಗಳು ಬಯಲಾಟದಲ್ಲಿ ಸಲ್ಲಿಸಿರುವ ಸೇವೆ ಬಗ್ಗೆ ಬೆಳಕು ಚೆಲ್ಲುವ ಮೂಲಕ ಅವರನ್ಬು ಸಮಾಜಕ್ಕೆ ಪರಿಚಯಿಸಿದರು. ಅವರ ಪತ್ರಿಕಾ ಸೇವೆ ಹೀಗೆ ಮುಂದುವರೆಯಲಿ ಮತ್ತು ಕಲಾವಿದರ ಬಗ್ಗೆ ಅವರ ಅನುಕಂಪ ಹೀಗೆ ಇರಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಯಲಾಟದ ಹಾರ್ಮೋನಿಯಂ ಮಾಸ್ಟರ್ ಹೆಚ್.ಎಂ. ಸಿದ್ದಲಿಂಗಯ್ಯ ಸ್ವಾಮಿ, ಬಯಲಾಟ ಪಾತ್ರದಾರಿಗಳ ವೇಷಭೂಷಣಕಾರ ರಾಜಾಸಾಬ್, ಧ್ವನಿವರ್ಧಕ ಆಪರೇಟರ್ ಮೆಹಬೂಬ್ ಸಾಬ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.