ಝಳಕಿ : ಭತಗುಣಕಿ ಗ್ರಾಮದ ಶಿವಪುತ್ರಪ್ಪ ರುದ್ರಪ್ಪ ನಾವಿ ರೈತರು ಸಾಕಿದ ೧೨ ಕುರಿಗಳಲ್ಲಿ ೪ ಕುರಿಗಳು ಅನುಮಾನಾಸ್ಪದವಾಗಿ ಸಾವಿಗಿಡದ ಘಟನೆ ನಡೆದಿದೆ.
ಗ್ರಾಮದ ಮನೆಯಲ್ಲಿ ಎಲ್ಲ ಕುರಿಗಳು, ಶೇಡ್ಡಿನಲ್ಲಿ ತಿನ್ನಲು ಆಹಾರ, ಕುಡಿಯಲು ನೀರಿನ ವ್ಯವಸ್ಥೆ ಇದ್ದು, ಬೆಳಿಗ್ಗೆ ಬಕೇಟಿನಲ್ಲಿ ಎಂದಿನಂತೆ ರೈತ ನೀರು ಹಾಕಿದ್ದಾರೆ, ಅದನ್ನು ನಾಲ್ಕು ಕುರಿಗಳು ಕುಡಿದು ಎಂದಿನಂತೆ ಜೈಮಿನಿಗೆ ಹೋಗಿವೆ, ಅಲ್ಲಿಯೇ ಅವುಗಳು ಉಸಿರು ಬಿಟ್ಟ ಘಟನೆ ತಡವಾಗಿ ತಿಳಿದ ಕೂಡಲೆ, ಗ್ರಾಮಸ್ಥರು ಓಡಿ ಹೋಗಿ, ಕೂಡಲೆ ಪಶು ವೈದ್ಯರಿಗೆ ಕರೆ ಮಾಡಿದ್ದು, ಪರೀಕ್ಷೆ ಮಾಡಲಾಗಿ ಕುರಿಗಳು ವಿ? ಸೇವಿಸಿರಬಹುದು, ಇದನ್ನು ಆಸ್ಪತ್ರೆಯಲ್ಲಿ ಪರಿಶೀಲಿಸಿ ವರದಿ ಕೊಡಲಾಗುವದು ಎಂದು ಇಂಡಿ ತಾಲೂಕು ಪಶು ಇಲಾಖೆ ಆಡಳಿತ ಅಧಿಕಾರಿಗಳು ಡಾ. ರಾಜಕುಮಾರ ಅಡವಿ ಪ್ರಕಟಣೆಗೆ ತಿಳಿಸಿದ್ದಾರೆ.
ಸುಮಾರು ಲಕ್ಷ ರೂಪಾಯಿ ಬೆಲೆಬಾಳುವ ಕುರಿಗಳು, ಯಾರೋ ಸಹಿಸಲಾಗದೆ ಕುರಿಗಳಿಗೆ ವಿ? ಹಾಕಿದ್ದಾರೆ, ಇಂತಹ ಕೃತ್ಯ ಎಸಗಿದವರಿಗೆ ದೇವರು ತಕ್ಕ ಪಾಠ ಕಲಿಸುತ್ತಾನೆ ಎಂದು ರೈತ ಶಿವಪುತ್ರಪ್ಪ ನಾವಿ ಕಣ್ಣೀರಿಟ್ಟರು, ಇದನ್ನು ಶಾಸಕರು, ಅಧಿಕಾರಿಗಳು ಇಂತಹ ಬಡ ರೈತನಿಗೆ ಸಹಾಯ ಹಸ್ತಕ್ಕೆ ಮುಂದಾಗಬೇಕೆಂದು ಗ್ರಾಮಸ್ಥರು ತಿಳಿಸಿದರು.
ಈ ಸಂದರ್ಭದಲ್ಲಿ ಕೆ. ಎಮ್. ಎಫನ್ ಅಭಿ?ಕ್ ಕೊಡತೇ, ಶಿವರಾಜ್ ಬಿರಾದಾರ, ವಿಶ್ವನಾಥ್ ಬನ್ನಿ, ಗ್ರಾಮಸ್ಥರಾದ ಶಿವಾಜಿ ಮಾನೆ, ಚನ್ನಯ್ಯ ಹಿರೇಮಠ್, ರಾಜಶೇಖರ್ ಕಾಡೆ, ರಾಜು ಪವಾರ, ಕಲ್ಲಪ್ಪ ಇಕ್ಕಳಕಿ, ಮಲಕಪ್ಪ ದುದಗಿ, ಸುರೇಶ ಬಂದಪಟ್ಟೆ, ಸಂಗಮೇಶ ಹಳಕಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
