ಬಳ್ಳಾರಿ;10.: ತಾಲೂಕಿನ ಸಿರಿವಾರ ಗ್ರಾಮದಲ್ಲಿ ಗಾನಲಹರಿ ಸಾಂಸ್ಕೃತಿಕ ಕಲಾ ಟ್ರಸ್ಟ್ ಸಿದ್ದರಾಂಪುರ ಇವರಿಂದ ತತ್ವಪದ ಗೀತ ಗಾಯನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಪುರವರ್ಗ ಮಠ ಜಂಗಮರ ಹೊಸಳ್ಳಿಯ ಷಟಸ್ಥಲ ಬ್ರಹ್ಮಅಜಾತ ಶಂಭುಲಿಂಗ ಶಿವಾಚಾರ್ಯರು ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ಯುವಕರಲ್ಲಿ ಭಜನೆ ಪದ ಮತ್ತು ತತ್ವಪದಗಳ ಬಗ್ಗೆ ಆಸಕ್ತಿ ಮತ್ತು ಉತ್ಸಾಹ ಕಡಿಮೆಯಾಗುತ್ತಿದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಯುವಕರು ಭಾಗವಹಿಸುವುದರಿಂದ ಭಜನೆ ಪದ ಮತ್ತು ತತ್ವ ಪದಗಳ ಬಗ್ಗೆ ಆಸಕ್ತಿ ಹೆಚ್ಚಾಗುವುದರ ಜೊತೆಗೆ ತತ್ವ ಪದಗಳು ಜೀವಂತವಾಗಿ ಉಳಿಸಲು ಅನುಕೂಲವಾಗುತ್ತದೆ ಎಂದರು.
ಕೊಟ್ಟೂರು ಸ್ವಾಮಿಮಠ ಬಳ್ಳಾರಿ ಶ್ರೀ. ನಿ. ಪ್ರ ಮುಪ್ಪಿನ ಬಸವಲಿಂಗ ಸ್ವಾಮಿಗಳು, ಶ್ರೀಧರಗಡ್ಡೆಯ ಸಂಸ್ಥಾನ ಮಠದ ಶ್ರೀ ಮ.ನಿ . ಪ್ರ. ಕೊಟ್ಟೂರು ದೇಶಿಕರು ಸಂಸ್ಥಾನ ಮಠ ಶ್ರೀಧರಗಡ್ಡೆ ಅಚರು ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಸಂಗಪ್ಪ, ರಾಜಶೇಖರ ಸ್ವಾಮಿ, ಹೊನ್ನೂರ್ ಸಾಬ್,
ಶರಣಬಸವಗೌಡ, ಕೋರಿ ವೀರೇಶಪ್ಪ, ಬಸವನಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಗಾನ ಲಹರಿ ಟ್ರಸ್ಟ್ ಅಧ್ಯಕ್ಷ ಎಸ್ ಆರ್ ಎಂ. ಶರಣಬಸವರಾಜ ಸಿದ್ದರಾಮಪುರ ಅವರು ತತ್ವಪದ ಗಾಯನ ಮಾಡಿದರು.
ಮಲ್ಲನಗೌಡ ಕೊಂಚಗೇರಿ, ದಾಸಪುರ ಮುದುಕನಗೌಡ ಅವರು ಹಾರ್ಮೋನಿಯಂ ಸಾಥ್ ನೀಡಿದರು. ಯುವರಾಜ ಶ್ರೀಧರಗಟ್ಟ ರಿದಮ್ ಪ್ಯಾಡ್ ಸಾಥ್ ನೀಡಿದರು. .