ಬಳ್ಳಾರಿ. ಎ. 28:: ನಗರ ಸುಂದರೀಕರಣದ ಹೆಸರಿನಲ್ಲಿ ವಿದ್ಯಾನಗರ
ವೃತ್ತ ಮತ್ತು ಕೊಳಗಲ್ ರಸ್ತೆಗಳನ್ನು ಅಭಿವೃದ್ಧಿಗೊಳಿಸಲು ಪಟ್ಟಣದ ಜನಪ್ರತಿನಿಧಿಯು ಜಿಲ್ಲೆಯ PWD
ಇಲಾಖೆ ಅಧಿಕಾರಿಗಳಿಗೆ ಸೂಚಿಸಿರುತ್ತಾರೆ. ಪ್ರಸ್ತುತ ವಿವಾದಿತವಾಗಿರುವ ವಿದ್ಯಾನಗರ ವೃತ್ತ ಮತ್ತು
ಕೊಳಗಲ್ ರಸ್ತೆಗಳು ಅಧಿಸೂಚನೆಯ ಪ್ರಕಾರ 18.5 ಮೀಟರ್ ಇದ್ದು ಬಳ್ಳಾರಿ ನಗರದ ಶಾಸಕರು 24
ಮೀಟರ್ ಅಗಲದ ರಸ್ತೆಯನ್ನು ನಿರ್ಮಿಸಲು ಮೌಖಿಕ ಸೂಚನೆಯ ಮೇಲೆ PWD ಇಲಾಖೆಯ
ಅಧಿಕಾರಿಗಳು ಹೆಚ್ಚುವರಿಯಾಗಿ 5.5 ಮೀಟರ್ ಗೆ ಸರ್ಕಾರದ ನೀಟೊಫಿಕೇಷನ್ ಹೊಂದದೆ ರಸ್ತೆಯ
ಎರಡು ಬದಿಯಲ್ಲಿನ ಮರಗಳನ್ನು ತೆರವುಗೊಳಿಸಲು ಅನುಮತಿ ನೀಡುವಂತೆ ಕೋರಿ ಅರಣ್ಯ ಇಲಾಖೆಗೆ
PWD ಇಲಾಖೆಯು 3.2.2026 ರಂದು ಬರೆದ ಪತ್ರವನ್ನು ಪರಿಶೀಲಿಸಿದ ಅರಣ್ಯ ಇಲಾಖೆಯು ದಿನಾಂಕ
27.2.2026 ರಂದು ಎರಡು ರಸ್ತೆಗಳ (24 ಮೀಟರ್ ಅಗಲದ ರಸ್ತೆ) ನಿರ್ಮಾಣಕ್ಕೆ ಒಟ್ಟು 233 ಮರಗಳು ಕಡಿತಲೆ ಆಗುತ್ತಿರುವದರಿಂದ ಹಾಲಿ ಇರುವ 18.5 ಮೀಟರ್ ರಸ್ತೆಯನ್ನು
ಅಭಿವೃದ್ಧಿಗೊಳಿಸಿಕೊಳ್ಳುವುದರಿಂದ ನೂರಾರು ಮರಗಳ ಕಡಿತಲೆಯನ್ನು ತಡೆಯಬಹುದು ಎಂದು ಜನಸಂಗ್ರಾಮ್ ಪರಿಷತ್ತಿನ ಶ್ರೀಶೈಲ ಆಲದಳ್ಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ನಗರ ಸುಂದರೀಕರಣದ ಹೆಸರಲ್ಲಿ
ನಡೆಯುತ್ತಿರುವ ಪರಿಸರ ನಾಶದ ಅಭಿವೃದ್ಧಿಯ ಹರಿಕಾರ ಶಾಸಕರ ಅಣತಿಯಂತೆ 18.5 ಮೀಟರ್
ಇರುವ ರಸ್ತೆಯನ್ನು 24 ಮೀಟರ್ ರಸ್ತೆಯನ್ನು ಮಾಡುವುದರ ಮೂಲಕ ಶಾಸಕರ ಕೈಗೊಂಬೆಗಳಂತೆ
ವರ್ತಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ ಜೊತೆಗೆ ಕಾನೂನು ಉಲ್ಲಂಘನೆ ಮಾಡಿ ಎರಡು
ಬದಿಯಲ್ಲಿನ ಮರಗಳ ಕಡಿತಲೆಗೆ ಕಾರಣೀಕರ್ತರಾಗಿರುತ್ತಾರೆ, ನಗರದ ಅಭಿವೃದ್ಧಿಗೆ ಅರಣ್ಯ ಇಲಾಖೆಯ
ಅಧಿಕಾರಿಗಳೇ ಅಡ್ಡಿಯಾಗಿದ್ದಾರೆಂದು ಜನಪ್ರತಿನಿಧಿಗಳ ಮುಂದೆ ಅರಣ್ಯ ಇಲಾಖೆಯನ್ನು ಖಳನಾಯಕ
ಸ್ಥಾನದಲ್ಲಿ ನಿಲ್ಲಿಸಿರುತ್ತಾರೆ.
ಪ್ರಸ್ತುತವಾಗಿ ಬಳ್ಳಾರಿ ಜಿಲ್ಲೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಸೇರಿದಂತೆ ಇಡೀ ಅಧಿಕಾರಿಗಳು
ಗಣಿ,ಗುತ್ತಿಗೆ,ಟಿಂಬರ್,ಗಂಧ,ವನ್ಯಜೀವಿ ಬೇಟೆಗಾರರಂತಹ ಮಾಫಿಯಗಳನ್ನು ಯಾವುದೇ ಒತ್ತಡಕ್ಕೆ
ಮಣಿಯದೆ ದಕ್ಷತೆಯಿಂದ ಜೀವದ ಹಂಗನ್ನು ತೊರೆದು ಕಾರ್ಯಾಚರಣೆ ಮಾಡುತ್ತಿದ್ದಾರೆ.
CEPMIZ/DMF/CSR/CAMPA ಸೇರಿದಂತೆ ಹಲವು ಯೋಜನೆಗಳಡಿಯಲ್ಲಿ ಪಟ್ಟಣ, ಪಾರ್ಕ್
ಗುಡ್ಡಗಾಡಿನಲ್ಲಿ ಅರಣೀಕರಣ, ವನ್ಯಜೀವಿಗಳಿಗೆ ನೀರಿನ ತೊಟ್ಟಿಗಳನ್ನು ನಿರ್ಮಾಣ ಮಾಡಿದುದರ
ಫಲವಾಗಿ ಬಳ್ಳಾರಿ ಪಟ್ಟಣ ಸೇರಿದಂತೆ ಇಡೀ ಜಿಲ್ಲೆಯಲ್ಲಿನ ತಾಪಮಾನ ಇತರೆ ಕಲ್ಯಾಣ ಕರ್ನಾಟಕದ
ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ತೃಪ್ತಿಕರವಾಗಿರುತ್ತದೆ.
PWD ಇಲಾಖೆಯು 18.5 ಮೀಟರ್ ರಸ್ತೆಯನ್ನು 24 ಮೀಟರ್ ಗೆ ಅಭಿವೃದ್ಧಿಗೊಳಿಲು ಅಡ್ಡಿಯ
ಮರಗಳನ್ನು ಕಡಿತಲೆ ಮಾಡಲು ಶ್ರೀನಿವಾಸ್ ಇನ್ಸಾ, ಪ್ರಾಜೆಕ್ಟ್ Pvt ltd ಗುತ್ತಿಗೆದಾರ
ಜನಪ್ರತಿನಿಧಿಗಳು ಮತ್ತು PWD ಇಲಾಖೆಯ ಅಧಿಕಾರಿಗಳು ಕುಮ್ಮಕ್ಕು ನೀಡಿ 25 ಮರಗಳನ್ನು
ರಾತ್ರೋರಾತ್ರಿ ಕಳ್ಳತನದಿಂದ ಕಡಿರುವುದು ಅಕ್ಷಮ್ಯವಾದ ಅಫರಾಧವಾಗಿರುತ್ತದೆ. ಹಾಗು ಅಕ್ರಮವಾಗಿ
ಮರ ಕಡಿಯುವುದನ್ನು ತಡೆಗಟ್ಟಲು ಬಂದಿರುವ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿರುವುದನ್ನು
ನೋಡಿದರೆ ಒಂದುವರೆ ದಶಕಗಳ ಹಿಂದೆ ಗಾಲಿ ಜನಾರ್ಧನರೆಡ್ಡಿ ಮತ್ತವರ ಪಟಾಲಂನಂತೆ
ನಡೆಸಿದ ಕೃತ್ಯಕ್ಯಗಳು ಪುನಾರ್ವತನೆಯಾಗಿ ಮತ್ತೊಮ್ಮೆ "ರಿಪಬ್ಲಿಕ್ ಆಫ್ ಬಳ್ಳಾರಿ” ಆಗುವತ್ತ
ಸಾಗುತ್ತಿರುವುದಕ್ಕೆ ತಡೆಹಾಕಬೇಕಾಗಿರುತ್ತದೆ.
ಬಳ್ಳಾರಿ ಜಿಲ್ಲೆಯ ಕೆಲವು ಜನಪ್ರತಿನಿಧಿಗಳು ಕಾನೂನು ಉಲ್ಲಂಘಿಸುವಂತಹ ಗಣಿಗಾರಿಕೆ,ರಸ್ತೆ ನಿರ್ಮಾಣದ
ಕಡತ, ಕ್ರಿಯಾಯೋಜನೆ, ಕಾಮಗಾರಿಗಳಿಗೆ ಅನುಮತಿ/ನಿರಾಕ್ಷೇಪಣಾ ಪತ್ರವನ್ನು ನೀಡುವಂತೆ ಒತ್ತಡ
ಹಾಕುತ್ತಿರುವದರಿಂದ ಜಿಲ್ಲೆಯ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ವತಂತ್ರವಾಗಿ
ಕಾರ್ಯನಿರ್ವಹಿಸಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆಯೆಂದು ದಿನಾಂಕ 23.4.26 ರಂದು
ಅರಣ್ಯ ಇಲಾಖೆಯ ಸಿಬ್ಬಂದಿ ಮೇಲೆ ನಡೆದಿರುವ ಹಲ್ಲೆಯು ಪುಷ್ಟಿಕರಿಸುತ್ತದೆ.
ಮೇಲ್ಕಂಡ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿರುವ ಅರಣ್ಯ
ಇಲಾಖೆಯ ಅಧಿಕಾರಿಗಳಿಗೆ,ಸಿಬ್ಬಂದಿಗಳಿಗೆ ಜಿಲ್ಲಾಡಳಿತ/ಸರ್ಕಾರವು ಸೂಕ್ತ ರಕ್ಷಣೆಯನ್ನು ನೀಡಬೇಕು
ಹಾಗೆಯ ಬಳ್ಳಾರಿ ಪಟ್ಟಣದ ವಿದ್ಯಾನಗರ ವೃತ್ತ ಮತ್ತು ಕೊಳಗಲ್ ರಸ್ತೆಗಳಲ್ಲಿನ 25 ಮರಗಳನ್ನು
ಅಕ್ರಮವಾಗಿ ಕಡಿತಲೆ ಮಾಡಿದವರ ವಿರುದ್ಧ ಹಾಗು ಅರಣ್ಯ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿರುವವರ
ವಿರುದ್ಧ ಹಾಗೂ ಅಕ್ರಮ ಕಡಿತಲೆಗೆ ಹಾಗು ಅರಣ್ಯ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಲು ಪರೋಕ್ಷವಾಗಿ
ಕಾರಣವಾಗಿರುವ ಮತ್ತು 18.5 ಮೀಟರ್ ರಸ್ತೆಯನ್ನು 24 ಮೀಟರ್ ಗೆ ಯಾವುದೇ ಅಧಿಕೃತ
ನೋಟಿಫಿಕೇಷನ್ ಇಲ್ಲದೆ ರಸ್ತೆ ಕಾಮಗಾರಿಗೆ ಅನುಮೋದನೆ ನೀಡಿದ PWD ಇಲಾಖೆಯ EE,AEE,AE,JE
ಗಳ ವಿರುದ್ಧ ಕ್ರಿಮಿನಲ್ ಮೊಕ್ಕದ್ದಮೆಯನ್ನು ದಾಖಲಿಸುವುದರ ಜೊತೆಗೆ ಶ್ರೀನಿವಾಸ್ ಇನ್ನಾ, ಪ್ರಾಜೆಕ್ಟ್
Pvt ltd ನ್ನು ಕಪ್ಪುಪಟ್ಟಿಗೆ ಸೇರಿಸಲು ತಾವುಗಳು ಕ್ರಮವಹಿಸಬೇಕು.
ಇಲಾಖೆಯ ಆಡಳಿತದಲ್ಲಿ ಜನಪ್ರತಿನಿಧಿಗಳ ಹಸ್ತಕ್ಷೇಪ ಮತ್ತು ಕಾನೂನುಬಾಹೀರ
ಚಟುವಟಿಕೆಗೆಗಳನ್ನು ಪ್ರೋತ್ಸಾಹಿಸಲು ಒತ್ತಡಹೇರದಂತೆ ನೋಡಿಕೊಳ್ಳಬೇಕು, ಇಡೀ ರಾಜ್ಯದಲ್ಲಿ
ಅಕ್ರಮಗಣಿಗಾರಿಕೆಯ ಕಿಂಗ್ ಪಿನ್ ಗಾಲಿ ಜನಾರ್ಧನರೆಡ್ಡಿ ಟೀಂ ಜಿಲ್ಲೆಯಲ್ಲಿನ ಅಧಿಕಾರಿಗಳನ್ನು
ಅಕ್ರಮವನ್ನೆಸಗಲು ಬಳಕೆ ಮಾಡಿಕೊಂಡು “ರಿಪಬ್ಲಿಕ್ ಆಫ್ ಬಳ್ಳಾರಿ' ಎಂದು ಅಪಖ್ಯಾತಿ ಪಡೆದಿತ್ತು.
ಲೋಕಾಯುಕ್ತರಾಗಿದ್ದ ಸಂತೋಷ್ ಹೆಗಡೆಯವರ ವರದಿಯನ್ನು ಸಮಾಜ ಪರಿವರ್ತನ ಸಮುದಾಯದ
ಸುಪ್ರೀಂಕೋರ್ಟಿನಲ್ಲಿ ದಾವೆ ಹೂಡಿದ್ದರಿಂದ ಬಳ್ಳಾರಿಯು ನಿಧಾನವಾಗಿ ಮೂಲ ಸ್ವರೂಪಕ್ಕೆ
ಬರುತ್ತಿರುವುದರ ಮಧ್ಯೆ ಬಳ್ಳಾರಿಯಲ್ಲಿ ಮತ್ತೊಂದು ಸುತ್ತಿನ ಜನಪ್ರತಿನಿಧಿಗಳ ರಾಜಕೀಯ
ಪುಢಾರಿತನ/ದೊಂಬಿ/ಗಲಭೆಗಳು ಅಧಿಕಾರಿಗಳ ಮೇಲೆ ಹಲ್ಲೆಗೆ ಅವಕಾಶ ಮಾಡಿಕೊಡದೇ
ಅಧಿಕಾರಿಗಳ ನೈತಿಕ ಸೈರ್ಯ ಕುಸಿಯದಂತೆ ನೋಡಿಕೊಳ್ಳಬೇಕೆಂದು ಸಂಘಟನೆ ವತಿಯಿಂದ ಆಗ್ರಹಿಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ಆಲ್ದಳ್ಳಿ ತಿಳಿಸಿದ್ದಾರೆ.