LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
International News

ಜಮ್ಮು-ಕಾಶ್ಮೀರ, ಅಲೆಕ್ಸಾಂಡರ್ ಕೆಡವಿದ ಸೂರ್ಯ ದೇವಾಲಯ ಪುನರ್​​ ನಿರ್ಮಾಣ

ಜಮ್ಮು-ಕಾಶ್ಮೀರ27: ಇಲ್ಲಿ ಅನೇಕ ಬದಲಾವಣೆಗಳು ಆಗುತ್ತಿದೆ. ಹಿಂಸೆಗಳನ್ನು ಕಾಣುತ್ತಿದ್ದ ಈ ರಾಜ್ಯದಲ್ಲಿ ಶಾಂತಿ, ಧಾರ್ಮಿಕ ಬದಲಾವಣೆಗಳು ಆಗುತ್ತಿದೆ. ಇದೀಗ ಇಲ್ಲಿ ಧಾರ್ಮಿಕ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಬದಲಾವಣೆಗೆ ಮಾಡಲು ಇಲ್ಲಿನ ಜನ ಮುಂದಾಗಿದ್ದಾರೆ.

ಹೌದು ಜಮ್ಮು ಮತ್ತು ಕಾಶ್ಮೀರದಲ್ಲಿರುವ ದೇಶದ ಅತ್ಯಂತ ಪುರಾತನ ಸೂರ್ಯ ದೇವಾಲಯವನ್ನು ಪುನರ್​​​ನಿರ್ಮಾಣ ಮಾಡಲಾಗುತ್ತಿದೆ. ಅನಂತನಾಗ್‌ನಲ್ಲಿ ನಿರ್ಮಿಸಲಾದ ಈ ಸೂರ್ಯ ದೇವಾಲಯವನ್ನು ಶೀಘ್ರದಲ್ಲೇ ನವೀಕರಿಸಲಾಗುವುದು ಎಂದು ಹೇಳಲಾಗಿದೆ. ಇನ್ನು ದೇವಾಲಯಕ್ಕಾಗಿ ಒಂದು ಸಮಿತಿಯನ್ನು ರಚನೆ ಮಾಡಲಾಗಿದೆ. ಇದರ ಮೊದಲ ಸಭೆಯಲ್ಲಿ ದೇವಾಲಯ ನಿರ್ಮಾಣ ಕಾಮಗಾರಿಯನ್ನು ಶೀಘ್ರ ಆರಂಭಿಸುವ ತಿರ್ಮಾನವನ್ನು ತೆಗೆದುಕೊಳ್ಳಲಾಗಿದೆ.

ಮಾರ್ತಾಂಡ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಬಹುದಿನಗಳಿಂದ ಬೇಡಿಕೆ ಇತ್ತು. ಇದಕ್ಕಾಗಿ ಹಿಂದೂ ಮತ್ತು ಮುಸ್ಲಿಂ ಎರಡೂ ಧರ್ಮಗಳ ಜನರು ದೇವಾಲಯದ ಪುನರ್​​​ ನಿರ್ಮಾಣಕ್ಕೆ ಅಭಿಯಾನ ಕೂಡ ನಡೆಸಿದರು ಎಂದು ಹೇಳಲಾಗಿದೆ. ಈ ದೇವಾಲಯವು ಶ್ರೀನಗರದಿಂದ ಸುಮಾರು 63 ಕಿಲೋಮೀಟರ್ ದೂರದಲ್ಲಿದೆ. ಈ ದೇವಾಲಯವನ್ನು ಕ್ರಿ.ಶ.750 ರಲ್ಲಿ ರಾಜ ಲಾಲಿದಾದಿತ್ಯ ನಿರ್ಮಿಸಿದ್ದ, ಇದು ದೇಶದ ಹಳೆಯ ಪರಂಪರೆಗಳಲ್ಲಿ ಇದೂ ಒಂದಾಗಿದ್ದು, ಇದೀಗ ಇದನ್ನು ಪುನರ್​​​ ನಿರ್ಮಾಣ ಮಾಡಲಾಗುತ್ತಿದೆ.

ಈ ಸೂರ್ಯ ದೇವಾಲಯವು ಕಾಶ್ಮೀರಿ ವಾಸ್ತುಶಿಲ್ಪದ ಸೌಂದರ್ಯವನ್ನು ಒಳಗೊಂಡಿದೆ. ಈ ದೇವಾಲಯದ ನಿರ್ಮಾಣದಲ್ಲಿ ಕಂಧಾರ, ಚೈನೀಸ್ ಮತ್ತು ಗುಪ್ತ ರೋಮನ್ ಶೈಲಿಗಳನ್ನು ಬಳಸಲಾಗಿದೆ. ದೇವಾಲಯವು 270 ಅಡಿ ವಿಸ್ತೀರ್ಣವನ್ನು ಹೊಂದಿದ್ದು, ಅಗಲ 180 ಅಡಿ ಇದೆ. ಇದರ ಜತೆಗೆ ಇನ್ನು ಆಶ್ಚರ್ಯಕರ ಸಂಗತಿಯೆಂದರೆ, ಮಾರ್ತಾಂಡ ದೇವಾಲಯವು ಎಎಸ್‌ಐ ಸಂರಕ್ಷಿತ ತಾಣಗಳಲ್ಲಿ ಒಂದಾಗಿದೆ. ಆದರೆ ಇಲ್ಲಿ ಸೂರ್ಯನಿಗೆ ಇಂದು ಪೂಜೆ ನಡೆಯುತ್ತಿಲ್ಲ ಎಂದು ಸಮಿತಿ ಹೇಳಿದೆ. ಗುಜರಾತ್ ಮತ್ತು ಒಡಿಶಾದಲ್ಲೂ ಸೂರ್ಯ ದೇವಾಲಯಗಳು ಸಹ ಎಎಸ್‌ಐ ಸಂರಕ್ಷಿತ ದೇವಾಲಯಗಳಾಗಿವೆ ಹಾಗೂ ಇಲ್ಲಿನ ಸೂರ್ಯ ದೇವಾಲಯಗಳಲ್ಲಿ ಪೂಜೆ ಮಾಡಲಾಗುತ್ತದೆ.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ೩೦ ಮೀಟರ್ ಉದ್ದದ ತ್ರಿವರ್ಣ ಧ್ವಜದೊಂದಿಗೆ ಬೃಹತ್ ಶೋಭಾಯಾತ್ರೆಅನ್ನಪೂರ್ಣಾ ಯತ್ತಿನಮನಿ ನಿಧನ. ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಾಡಗೌಡರಿಂದ ಚಾಲನೆಎಂಆರ್‌ಎನ್‌ ಗ್ರೂಪ್ ಬ ಬಯೋಪ್ಲಾಸ್ಟಿಕ್ ಕಾರ್ಖಾನೆಗೆ ರಾಜ್ಯ ಸರ್ಕಾರದ ನಿರಾಕರಣೆ: ಮುರುಗೇಶ್ ನಿರಾಣಿ ಅಸಮಾಧಾನಇಂಡಿಯಲ್ಲಿ 'ವಿಶಾಲ ಸೌಹಾರ್ದ' ಬ್ಯಾಂಕ್‌ 12ನೇ ಶಾಖೆ ಉದ್ಘಾಟನೆ: ನಿರಾಣಿ ಕುಟುಂಬದ ಸಹಕಾರಿ ಸೇವೆ ಶ್ಲಾಘನೀಯ ಎಂದ ಶಾಸಕ ಯಶವಂತರಾಯಗೌಡ ಪಾಟೀಲಇಂಡಿ, ಚಡಚಣ, ತಾಳಿಕೋಟೆ ತಾಲೂಕುಗಳು ಶೀಘ್ರದಲ್ಲೇ ಬರಪೀಡಿತ ಎಂದು ಘೋಷಣೆ: ಶಾಸಕ ಯಶವಂತರಾಯಗೌಡ ಪಾಟೀಲರೈತರ ವಿಷಯದಲ್ಲಿ ನಿರ್ಲಕ್ಷ ವಹಿಸಿದರೆ ಸಹಿಸಲ್ಲಾ-ಸೋಮನಗೌಡತಾಲ್ಲೂಕಾ ಮಟ್ಟದಲ್ಲಿ ಲಕ್ಷ್ಮೀಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಬ್ಬಡ್ಢಿಯಲ್ಲಿ ಪ್ರಥಮ: ಜಿಲ್ಲಾಮಟ್ಟಕ್ಕೆ ಆಯ್ಕೆ*ವಿವಿಧ ಗ್ರಾಮಗಳ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಭೇಟಿ ನೀಡಿದ ಚನ್ನರಾಜ ಹಟ್ಟಿಹೊಳಿ*ವಿವಿಧೆಡೆ ಗಣೇಶ ಮೂರ್ತಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್