Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಗೋವಾ ವಿಮೋಚನಾ ಚಳುವಳಿಯ ಪ್ರೇರಣಾ ಶಕ್ತಿ ಜಗನ್ನಾಥರಾವ್ ಜೋಶಿ - ಕರಿಗೌಡ್ರ 


ಗದಗ, 25. ನರಗುಂದ ನೆಲದಲ್ಲಿ ಹುಟ್ಟಿ ಬೆಳೆದ ಮಹಾನ್ ದೇಶಭಕ್ತ ಕರ್ನಾಟಕದ ಕೇಸರಿ ಜಗನ್ನಾಥರಾವ್ ಜೋಶಿ ಅವರು ಗೋವಾ ವಿಮೋಚನಾ ಚಳುವಳಿಯ ಪ್ರೇರಣಾ ಶಕ್ತಿಯಾಗಿದ್ದರು ಎಂದು ನಿಗಮ ಮಂಡಳಿ ಮಾಜಿ ಅಧ್ಯಕ್ಷ ಎಮ್ ಎಸ್ ಕರಿಗೌಡ್ರ ಹೇಳಿದರು.

     ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಜಗನ್ನಾಥರಾವ್ ಜೋಶಿ ಅವರ 105 ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಗೋವಾವನ್ನು ಪೋರ್ಚಿಗೀಸರು ಆಳುತ್ತಿದ್ದ ಕಾಲವದಲ್ಲಿ ಆ ರಾಜ್ಯದ ಪ್ರವೇಶಕ್ಕೆ ಅನುಮತಿ ಕಡ್ಡಾಯವಾಗಿತ್ತು. ಚಳುವಳಿ ನೇತೃತ್ವ ವಹಿಸಿದ್ದ ಜಗನ್ನಾಥರನ್ನ ಅಕ್ರಮ ಪ್ರವೇಶದ ಹೆಸರಲ್ಲಿ ಸಾವಂತ್ವಾಡ ಅರಣ್ಯ ಪ್ರದೇಶದಲ್ಲಿ ಬಂಧಿಸಿ ಕಾರಾಗ್ರಹದಲ್ಲಿಟ್ಟು ಹಿಂಸಿಸಲಾಯಿತು. ಎಷ್ಟೋ ದಿನಗಳ ನಂತರ ನ್ಯಾಯಾಲಯದಲ್ಲಿ ಹಾಜರುಪಡಿಸಿದಾಗ ಜೋಶಿ ಅವರು " ನಾನು ನಿಮ್ಮನ್ನು ಗೋವಾದಿಂದ ಹೊರ ಹೋಗಲು ಹೇಳಲು ಬಂದಿರುವೆ, ಇದು ನನ್ನ ಮಾತೃಭೂಮಿಯ ಅವಿಭಾಜ್ಯ ಅಂಗ, ಇಲ್ಲಿ ನಿಮಗೇನು ಕೆಲಸ ಗೋವಾ ಬಿಟ್ಟು ತೊಲಗಿ " ಎಂದು ಸಿಂಹ ಗರ್ಜನೆ ಮಾಡಿದ್ದು ಪೋರ್ಚುಗೀಸರ್ ಜಂಗಾಭಲವೇ ಕಮರಿಹೋಯಲು ಕಾರಣವಾಯ್ತು ಎಂದರು.

    ನಾಡಿನ ಒಳಿತಿಗಾಗಿ, ಸಮುದಾಯದಗಳ ಸೌಹಾರ್ದತೆಗಾಗಿ ಸಂಘಟನೆ,ಪಕ್ಷ, ಸರ್ಕಾರಗಳ ಪ್ರತಿನಿಧಿಯಾಗಿ ಸಂಪೂರ್ಣ ಸಮರ್ಪಣಾ ಭಾವದಿಂದ ಜನಸೇವೆಗೆ ತಮ್ಮನ್ನು ಅರ್ಪಿಸಿಕೊಂಡಿದ್ದರು ಎಂದು ಎಮ್ ಎಸ್ ಕರಿಗೌಡ್ರ ಸ್ಮರಿಸಿದರು.

    ಮುಖ್ಯ ಅತಿಥಿಯಾದ ಹಿರಿಯ ಮುಖಂಡ ಶ್ರೀಪತಿ ಉಡುಪಿ ಮಾತನಾಡಿ ಕರ್ನಾಟಕದಲ್ಲಿ ಜನಸಂಘ ಹಾಗು ಬಿಜೆಪಿ ಕಟ್ಟಿ ಬೆಳೆಸುವಲ್ಲಿ ಜಗನ್ನಾಥರ ಸಂಘಟನಾ ಪ್ರವಾಸ, ಅಧ್ಯಯನ,ಪರಿಶ್ರಮ, ಶೃದ್ದೆ,ಸಂಕಲ್ಪ,ಹೋರಾಟಗಳು ಮಹತ್ತರ ಪಾತ್ರವಹಿಸಿವೆ.ಯಾವುದೇ ದೇಶ ಶುಭದ್ರವಾಗಿ ಇರಬೇಕಾದರೆ ಅಲ್ಲಿಯ ಜನರು ವೈಚಾರಿಕ ಹಾಗು ಸೈದ್ದಾಂತಿಕಾವಾಗಿ ರೂಪಗೊಂಡಾಗ ಮಾತ್ರ ಸಾಧ್ಯ ಎಂಬುದು ಅವರ ನಂಬಿಕೆಯಾಗಿತ್ತು ಆ ಕಾರಣದಿಂದಲ್ಲೇ ಜಗನ್ನಾಥರ ಎಲ್ಲಾ ಕೆಲಸ ಕಾರ್ಯಗಳು ಆ ದೃಷ್ಟಿಕೋನ ಹೊಂದಿರುತ್ತಿದವು ಎಂದ ಶ್ರೀಪತಿಯವರು ಜಗನ್ನಾಥ ಜೋಶಿ ಅವರ ಉತ್ತರ ಕರ್ನಾಟಕ ಪ್ರವಾಸ,ಭಾಷಣ,ಇತ್ಯಾದಿ ಸಂಗತಿಗಳು, ಅವರ ಜೊತೆಗಿನ ಒಡನಾಟವನ್ನ ಹಂಚಿಕೊಂಡರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಮಲ್ಲಾಪೂರ ವಹಿಸಿದ್ದರು.ಬಸವಣ್ಣೆಪ್ಪ ಚಿಂಚಲಿ, ಜಗನ್ನಾಥಸಾ ಭಾಂಡಗೆ, ಎಂ.ಎಂ.ಹಿರೇಮಠ, ನಾಗರಾಜ ಕುಲಕರ್ಣಿ,  ಕೆ.ಪಿ.ಕೋಟಿಗೌಡ್ರ, ಸುರೇಶ ಮರಳಪ್ಪನವರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಗರಸಭೆ ಸದಸ್ಯ ಅನಿಲ ಅಬ್ಬಿಗೇರಿ, ಸುಧೀರ ಕಾಟೀಗರ, ಅಶೋಕ ಕುಡತಿನಿ, ಸಂತೋಷ ಅಕ್ಕಿ, ಸಿದ್ದು ಮೊರಬದ, ರಮೇಶ ಸಜ್ಜಗಾರ, ಶಂಕರ ಖಾಕಿ, ದೇವೇಂದ್ರಪ್ಪ ಗೋಟುರ, ಅಪ್ಪಣ್ಣ ಟೆಂಗಿನಕಾಯಿ, ಸ್ವಾತಿ ಅಕ್ಕಿ, ರೇಖಾ ಬಂಗಾರಶೆಟ್ರ, ಕವಿತಾ ಬಂಗಾರಿ, ದೇವೇಂದ್ರಪ್ಪ ಹೂಗಾರ, ಕುಮಾರ ಮಾರನಬಸರಿ, ಸಂತೋಷ ಕಲ್ಯಾಣಿ, ರಾಚಯ್ಯ ಹೊಸಮಠ, ವಿನೋದ ಹಂಸನೂರ,


  ಮುಂತಾದ ಗಣ್ಯರು, ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ