ಇಂಡಿ,ಮೇ.೨೭: ಜಾತ್ಯಾತೀತ ನಾಯಕರು ನಮ್ಮ ಇಂಡಿ ಮತಕ್ಷೇತ್ರದ ಶಾಸಕರಾದ ಯಶವಂತರಾಯಗೌಡ ಪಾಟೀಲ ಅವರ ಬಗ್ಗೆ ಜಿತೇಂದ್ರ ಕಾಂಬಳೆ ಅವರು ನಾಲಿಗೆ ಹರಿ ಬಿಟ್ಟು ಅವಾಚ್ಯ ಶಬ್ದಗಳನ್ನು ಬಳಕೆ ಮಾಡಿದ್ದು ಸರಿಯಲ್ಲ. ಡಾ. ಬಾಬಾಸಾಹೇಬ ಅಂಬೇಡ್ಕರ, ಬುದ್ದ, ಬಸವರ ಅನುಯಾಯಿಗಳಾದ ನಾವು ನಮ್ಮ ಬಾಯಿ ಇಂದ ಇಂತಹ ಶಬ್ದಗಳು ಬರಬಾರದು. ಶಾಸಕರು ನಮ್ಮ ಸಮುದಾಯಕ್ಕೆ ಎಂದು ಅನ್ಯಾಯ ಮಾಡಿಲ್ಲ ಇಂತವರ ಬಗ್ಗೆ ಅವಹೇಳನಕಾರಿ ಶಬ್ದ ಬಳಕೆ ಮಾಡಿದನ್ನು ಛಲವಾದಿ ಸಮುದಾಯದ ಪರವಾಗಿ ನಾವು ಖಂಡಿಸುತ್ತೆವೆ. ಈ ಕೂಡಲೆ ಶಾಸಕರಿಗೆ ಕ್ಷೇಮೆ ಯಾಚಿಸಬೇಕು. ಒಂದು ವೇಳೆ ಕ್ಷೇಮೆ ಯಾಚಿಸದೆ ಇದ್ದಲ್ಲಿ ಮುಂಬರುವ ದಿನಗಳಲ್ಲಿ ನಮ್ಮ ಛಲವಾದಿ ಸಮಾಜದ ಎಲ್ಲ ಬಾಂದವರು ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಛಲವಾದಿ ಸಮಾಜದ ಮುಖಂಡ ಭೀಮಾಶಂಕರ ಮೂರಮನ ಹಾಗೂ ದಲಿತ ಮುಖಂಡ ಮುತ್ತಪ್ಪ ಪೋತೆ ಮತ್ತು ಗ್ಯಾರೆಂಟಿ ಅನುಷ್ಠಾನ ಸಮಿತಿ ತಾಲೂಕಾ ಅಧ್ಯಕ್ಷ ಪ್ರಶಾಂತ ಕಾಳೆ ಜಂಟಿಯಾಗಿ ಹೇಳಿದರು.
ಅವರು ನಗರದ ನೌಕರರ ಸಭಾಭವನದಲ್ಲಿ ಛಲವಾದಿ ಸಮುದಾಯದ ಮುಖಂಡರು ಹಮ್ಮಿಕೊಂಡ ಪತ್ರಿಕಾ ಗೋಷ್ಟಿಯನ್ನು ಉದ್ದೆಶಿಸಿ ಮಾತನಾಡಿ ನನ್ನ ೪೦ ವರ್ಷದ ರಾಜಕೀಯ ಜೀವನದಲ್ಲಿ ಶಾಸಕರ ಒಡನಾಡಿಯಾಗಿ ಕೇಲಸ ಕಾರ್ಯಗಳನ್ನು ಮಾಡಿದ್ದೆನೆ. ಎಂದು ಅವರು ದಲಿತರ ಬಗ್ಗೆ ಕೀಳಾಗಿ ಕಂಡವರಲ್ಲ ತಮ್ಮ ಜೊತೆಯಲ್ಲಿ ಕರೆದುಕೊಂಡು ಊಟ ಮಾಡಿದಂತ ಸರಳ ಸಜ್ಜನಿಕೆ ರಾಜಕಾರಣಿಗಳಾಗಿದ್ದಾರೆ. ಇತಂಹವರ ವಿರುದ್ದ ಇಲ್ಲ ಸಲ್ಲದ ಆರೋಪ ಮಾಡಿ ನಮ್ಮ ಸಮುದಾಯಕ್ಕೆ ಕಪ್ಪು ಚುಕ್ಕೆ ಬಳಿಯುತ್ತಿರುವ ಜಿತೇಂದ್ರ ಕಾಂಬಳೆಯ ನಡೆಯನ್ನು ನಾವು ಖಂಡಿಸುತ್ತೆವೆ ಎಂದು ಪೋತೆ ಹೇಳಿದರು.
ಬಾಕ್ಸ್: ನಮ್ಮ ಸಮುದಾಯಕ್ಕೆ ಶಾಸಕ ಯಶವಂತರಾಯಗೌಡ ಪಾಟೀಲ ಅವರ ಕೊಡುಗೆ ಅಪಾರವಾಗಿದೆ. ಗ್ರಾಮಿಣ ಭಾಗದಲ್ಲಿ ಅಂಬೇಡ್ಕರ ಭವನಗಳು, ಸಿಸಿ ರಸ್ತೆ, ಬುದ್ದವಿಹಾರ, ಕ್ರೀಡಾಂಗಣಕ್ಕೆ ಡಾ ಬಾಬಾಸಾಹೇಬರ ಅಂಬೇಡ್ಕರ ನಾಮಕರಣ, ರಮಾಬಾಯಿ ಮಂಗಲ ಕಾರ್ಯಾಲಯ ಹೀಗೆ ಸಾಕಷ್ಟು ಅಭಿವೃದ್ದಿ ಕೇಲಸಗಳನ್ನು ನಮ್ಮ ಸಮುದಾಯಕ್ಕೆ ಕೊಡುಗೆಯಾಗಿ ನೀಡಿದ್ದಾರೆ.
ದಲಿತ ಸಮುದಾಯದ ಎಲ್ಲರನ್ನು ಗೌರವದಿಂದ ಕಂಡಿರುವ ಶಾಸಕರು ಯಾರಾದರು ಇದ್ದರೆ ಅದು ಯಶವಂತರಾಯಗೌಡರಾಗಿದ್ದಾರೆ. ಇಂತಹವರನ್ನು ಸುಖಾ ಸುಮ್ಮನೆ ಆರೋಪ ಮಾಡುವುದು ಬೀಡಬೇಕು. ಈ ಹಿಂದೆ ಕೂಡಾ ನಮ್ಮ ಶಾಸಕರ ಬಗ್ಗೆ ಹಗುರವಾಗಿ ಮಾತನಾಡಿದ್ದ. ಆಗ ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ತಿಳಿ ಹೇಳಲಾಗಿತ್ತು. ಆದರು ಮತ್ತೆ ಅದೇ ಚಾಳಿ ಮುಂದುವರೆಸಿ ಹೇಳಿಕೆ ನೀಡಿದ್ದರಿಂದ ನಮ್ಮ ಛಲವಾದಿ ಸಮುದಾಯಕ್ಕೆ ಕೆಟ್ಟ ಹೇಸರು ಬರುವಂತಾಗಿದೆ. ನಮ್ಮ ಸಮುದಾಯ ಹೇಸರು ಮುಂದೆ ಮಾಡಿ ಆರೋಪ ಮಾಡುವುದು ಬೀಡಬೆಕು ಇಲ್ಲಾಂದರ ಇದರ ಫಲಬೋಗ ಮುಂದಿನ ದಿನಮಾನಗಳಲ್ಲಿ ಉಣಬೇಕಾಗುತ್ತದೆ ಎಂದರು.
ಗಣಪತಿ ಬಾಣಿಕೋಲ, ಪ್ರದೀಪ ಮೂರಮನ, ಮಲ್ಲು ಮಡ್ಡಿಮನಿ, ರವಿ, ಕಲ್ಲಪ್ಪ ಅಂಜುಟಗಿ, ಸಂತೋಷ ಪರಶನವರ, ಶೇಖರ ಶಿವಶರಣ ಸೇರಿದಂತೆ ಅನೇಕ ಮುಖಂಡರು ಇದ್ದರು.
