Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

 IT 2.0"  ತಂತ್ರಜ್ಞಾನ ಗ್ರಾಹಕ ;ಅಂಚೆ ನೌಕರರ ಸ್ನೇಹಿ : ರಮೇಶ ಮಡಿವಾಳರ

 

ಗದಗ: ಅಂಚೆ ಇಲಾಖೆಯಲ್ಲಿ  "IT 2.0"  ತಂತ್ರಜ್ಞಾನ ಆರಂಭದಿಂದಾಗಿ ತ್ವರಿತ ಮತ್ತು ಉತ್ತಮ ಸೇವೆ  ದೊರೆಯಲಿದೆ ಎಂದು ಗದಗ ವಿಭಾಗೀಯ ಅಂಚೆ ಅಧೀಕ್ಷಕ ರಮೇಶ ಮಡಿವಾಳರ ಹೇಳಿದರು.


ಭಾರತೀಯ ಅಂಚೆ ಇಲಾಖೆಯ ಪ್ರಧಾನ ಅಂಚೆ ಕಚೇರಿಯಲ್ಲಿ ಸೋಮವಾರ "IT 2.0" ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಂಚೆ ಇಲಾಖೆಯ ಕಾರ್ಯಚಟುವಟಿಕೆಗಳಿಗೆ ಅಗತ್ಯವಾದ ತಂತ್ರಾಂಶಗಳನ್ನು ನೂರಿತ ಅಂಚೆ ತಂತ್ರಜ್ಞಾನರಿಂದ ತಯಾರಿಸಿದೆ.  ಇದರಿಂದಾಗಿ ಅನುಭವ ಆಧಾರದಲ್ಲಿ ಹೆಚ್ಚು ಸರಳೀಕರಣಗೊಳಿಸಿದ ತಂತ್ರಜ್ಞಾನ
ಅಂಚೆ ಇಲಾಖೆಗೆ ಲಭಿಸಿದೆ‌ ಎಂದರು.


ದೇಶದಲ್ಲಿಯೇ ಕನಾ೯ಟಕ ರಾಜ್ಯದಲ್ಲಿ ಪ್ರಾಯೋಗಿಕವಾಗಿ  "IT 2.0" ಜಾರಿಗೆ ತಂದಿದೆ. ಈಗಾಗಲೇ ಅಂಚೆ ಇಲಾಖೆ  ಹಲವು ದಶಕಗಳಿಂದ ಜನರ ಮನೆ ಬಾಗಿಲಿಗೆ  ವಿಶ್ವಾಸಾರ್ಹ ಸೇವೆ ನೀಡುತ್ತಿದೆ. ಈ ಸಾಲಿಗೆ ಈಗ ಹೊಸ ನವೀಕರಣದೊಂದಿಗೆ ಗ್ರಾಹಕ ಮತ್ತು ಅಂಚೆ ನೌಕರರ ಸ್ನೇಹಿಯಾಗಿ ರೂಪಾಂತರಗೊಳಲಿದೆ ಎಂದರು.


ಗದಗ ಉಪ ವಿಭಾಗ ಸಹಾಯಕ ಅಂಚೆ ಅಧೀಕ್ಷಕ ಶ್ರೀಕಾಂತ ಜಾದವ ಹಾಗೂ ಉಪ ಅಂಚೆ ಪಾಲಕ ದೊಡ್ಡಪ್ಪ ಇಟಗಿ ಪ್ರಾಸ್ತಾವಿಕವಾಗಿ ಮಾತನಾಡಿ,ಅಂಚೆ ಇಲಾಖೆ ಕಾರ್ಯನಿರ್ವಹಣೆಯಲ್ಲಿ ಸುಧಾರಣೆ, ಬೆಳವಣಿಗೆ ಮತ್ತು ವಿವಿಧ ವಲಯಗಳಲ್ಲಿ‌ ಉತ್ಕೃಷ್ಟ ಸೇವಾ
ಸಾಧನೆ ಬಗೆಗೆ ತಿಳಿಸಿದರು.


ವಿಭಾಗೀಯ ಸಹಾಯಕ‌ಅಂಚೆ ಅಧೀಕ್ಷಕ ವಿ.ಸುನೀಲಕುಮಾರ, ಡಿ.ಜಿ.ಮ್ಯಾಗೇರಿ, ಶರಣಪ್ಪ ನಾಯ್ಕರ, ವೆಂಕಟೇಶ ಆಕಳವಾಡಿ, ವೀರಣ್ಣ ಅಂಗಡಿ,  ಎಸ್.ವಿ.ಹಿರೇಮಠ, ಸಿದ್ಧಲಿಂಗೇಶ ಯಂಡಿಗೇರಿ, ವೈ.ಎಸ್.ಗುಗ್ಗರಿ, ಮನೋಹರ ಕಡಿಯವರ, ಉಮೇಶ ಸಂದಿಮನಿ, ಮಹಾಂತೇಶ ಗದಗ, ರವಿ ಜಾದವ, ವಾಣಿ ಮಾಂಡ್ರೆ, ಸರೋಜ ಪಟ್ಟಶೆಟ್ಟಿ, ನೀಲಮ್ಮ ದಿಬ್ಬದಮನಿ, ವಿದ್ಯಾ ಗದಗ , ಶಿವರಾಜ ಕ್ಷತ್ರಿಯವರ, ಮತ್ತಿತರು ಪಾಲ್ಗೊಂಡಿದ್ದರು.ಪ್ರಧಾನ ಅಂಚೆ ಪಾಲಕ ಮಂಜುಳಾ ದೇಗಿನಾಳ ಅಧ್ಯಕ್ಷತೆ ವಹಿಸಿದ್ದರು.‌


ಜನಮನ ಸೆಳೆದ ವಿವಿಧ ಚಿತ್ರಾವಳಿ..
ನವ ವಧುವಿನಂತೆ ಕಂಗೊಳಿಸಿದ ಪ್ರಧಾನ ಅಂಚೆ ಇಲಾಖೆ ಎಲ್ಲಾ ಕೌಂಟರಗಳಿಗೂ ವಿವಿಧ ಹೂ ಹಾಗೂ ಚಿತ್ರಾವಳಿಗಳಲ್ಲಿ ಅಂಚೆ ಇಲಾಖೆ ವಿವಿಧ ಸೇವೆ ಬಗೆಗೆ ರಂಗೋಲಿಗಳಿಂದ ಅಲಂಕಾರಿಸಲಾಗಿತ್ತು. ಇದರಿಂದಾಗಿ ಗ್ರಾಹಕರ ಮೆಚ್ಚುಗೆ ಪಡೆಯಿತು.
***
ಫೋಟೋ:ಕ್ಯಾಪ್ಷನ್
ಗದಗ ಪ್ರಧಾನ ಅಂಚೆ ಕಚೇರಿಯಲ್ಲಿ ಸೋಮವಾರ
ಸೋಮವಾರ "IT 2.0" ಕಾರ್ಯಕ್ರಮವನ್ನು ಅಂಚೆ ಅಧೀಕ್ಷಕ ರಮೇಶ ಮಡಿವಾಳರ ಉದ್ಘಾಟಿಸಿ ಸಿಹಿ ವಿತರಿಸಿದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ