Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಐಪಿಎಸ್ ದಯಾನಂದ ಅವರ ಮರು ನೇಮಕ ಆಗಲಿ: ಡಾ.ಗಾದಿಲಿಂಗನಗೌಡ 



ಬಳ್ಳಾರಿ, ಜೂ.09: ದಕ್ಷತೆ, ಪ್ರಾಮಾಣಿಕತೆಗೆ ಹೆಸರಾಗಿರುವ ಐಪಿಎಸ್ ಅಧಿಕಾರಿ, ಬೆಂಗಳೂರಿನ ನಿಕಟಪೂರ್ವ ಪೊಲೀಸ್ ಆಯುಕ್ತ ಬಿ.ದಯಾನಂದರನ್ನು ರಾಜ್ಯ ಸರ್ಕಾರ ತಕ್ಷಣ ಹುದ್ದೆಗೆ ಮರು ನೇಮಕ ಮಾಡಬೇಕೆಂದು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ, ಬಳ್ಳಾರಿ ಜಿಲ್ಲಾಧ್ಯಕ್ಷ ಡಾ.ಗಾದಿಲಿಂಗನಗೌಡ ಹೇಳಿದರು.


ಸೋಮವಾರ ಬೆಳಿಗ್ಗೆ ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿಯ ಎದುರು ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.


ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿ, ಉತ್ತಮ ಅಧಿಕಾರಿ ಎನಿಸಿಕೊಂಡಿರುವ ದಯಾನಂದ ಅವರನ್ನು ಆರ್ಸಿಬಿ ವಿಜಯೋತ್ಸವ ವೇಳೆ ನಡೆದ ಅವಘಡಕ್ಕೆ ಹೊಣೆ ಮಾಡಿ ಅಮಾನತು ಮಾಡಿರುವುದು ಖಂಡನೀಯ ಎಂದರು.


ಅಹಿಂದ ನಾಯಕ ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ನಾವು ಗೌರವಿಸುತ್ತೇವೆ, ಆದರೆ ಆರ್ಸಿಬಿ ಸಂಭ್ರಮ ವೇಳೆ ನಡೆದ ಕಾಲ್ತುಳಿತ ಪ್ರಕರಣದ ತನಿಖೆಯೇ ಆಗಿಲ್ಲ, ತಪ್ಪಿತಸ್ಥರು ಯಾರೆಂದು ಗೊತ್ತಾಗಿಲ್ಲ, ಹೀಗೆ ಏಕಾಏಕಿ ಶೋಷಿತ ಸಮುದಾಯದ ಅದರಲ್ಲೂ ಅಖಂಡ ಬಳ್ಳಾರಿ ಜಿಲ್ಲೆಯವರಾದ ದಯಾನಂದ ಅವರ ಅಮಾನತನ್ನು ತಕ್ಷಣ ಹಿಂಪಡೆದು, ಬೆಂಗಳೂರಿನ ಪೊಲೀಸ್ ಆಯುಕ್ತರನ್ನಾಗಿ ನೇಮಕ ಮಾಡಬೇಕೆಂದು ಡಾ.ಗಾದಿಲಿಗನಗೌಡ ಒತ್ತಾಯಿಸಿದರು.


ನಮ್ಮ ಬೇಡಿಕೆ ಈಡೇರದಿದ್ದರೆ ಹೋರಾಟ ತೀವ್ರಗೊಳಿಸುತ್ತೇವೆ ಎಂದರು.


ಜಿಲ್ಲಾ ಒಕ್ಕೂಟದ ಗೌರವಾಧ್ಯಕ್ಷ ಎ.ಮಾನಯ್ಯ ಮಾತನಾಡಿ; ತಮ್ಮ ಈವರೆಗಿನ ಸೇವಾ ಅವಧಿಯಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಕೆಲಸ ಮಾಡಿರುವ ದಯಾನಂದ ಅವರ ಮರು ನೇಮಕ ಆಗಬೇಕು, ಅವರ ಅಮಾನತು ರದ್ದು ಮಾಡಿ ಸರ್ಕಾರ ಈ ಹಿಂದಿನ ಹುದ್ದೆ ನೀಡಬೇಕೆಂದು ಆಗ್ರಹಿಸಿದರು.


ಒಕ್ಕೂಟದ ಕಾರ್ಯಾಧ್ಯಕ್ಷ ವಿ.ಎಸ್.ಶಿವಶಂಕರ್ ಮಾತನಾಡಿ; ಮೂಲತಹ ಅಖಂಡ ಬಳ್ಳಾರಿ ಜಿಲ್ಲೆಯವರಾದ ಐಪಿಎಸ್ ಅಧಿಕಾರಿ ದಯಾನಂದ ಬೆಂಗಳೂರಿನ ಪೊಲೀಸ್ ಆಯುಕ್ತರಾದ ನಂತರ ರೌಡಿಗಳನ್ನು ಮಟ್ಟ ಹಾಕಿ, ಭ್ರಷ್ಟಾಚಾರ ನಿಯಂತ್ರಣ ಮಾಡಿದ್ದಾರೆ, ಸಮಾಜ ಘಾತುಕ ಶಕ್ತಿಗಳಿಗೆ ಕಡಿವಾಣ ಹಾಕಿದ್ದಾರೆ, ಅವರ ಅಮಾನತು ಅನ್ಯಾಯಕರವಾದುದು, ಹೀಗಾಗಿ ಸರ್ಕಾರ ಅವರನ್ನು ತಕ್ಷಣ ಕೆಲಸಕ್ಕೆ ತೆಗೆದುಕೊಳ್ಳಬೇಕೆಂದರು.


ಈ ಸಂದರ್ಭ ಮಹಾನಗರ ಪಾಲಿಕೆ ಸದಸ್ಯ ಕೆ. ಹನುಮಂತಪ್ಪ, ಜಿಲ್ಲಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಇಮಾಮ್ ಗೋಡೆಕಾರ, ಸಂಘಟನಾ ಕಾರ್ಯದರ್ಶಿ ಸಂಗನಕಲ್ಲು ವಿಜಯ್, ವಿ.ಕೆ. ಬಸಪ್ಪ, ಎನ್.ಕೆ. ಸದಾಶಿವಪ್ಪ, ಬಿ. ಶ್ರೀನಿವಾಸ್ ಮೂರ್ತಿ, ಧನಂಜಯ ಹಮಾಲ್, ಯರಗುಡಿ ಮಲ್ಲಯ್ಯ, ಕೆ.ಕೆ.ಹಾಳ್ ಸತ್ಯನಾರಾಯಣ, ಹಗರಿ ಜನಾರ್ಧನ, ಪುಷ್ಪ, ಕಲಾವತಿ, ಮಲ್ಲೇಶ್ವರಿ,ಗಡ್ಡಂ ತಿಮ್ಮಪ್ಪ, ಬಿ.ಮಲ್ಲಿಕಾರ್ಜುನ, ಅಸುಂಡಿ ಹನುಮೇಶ್, ಅತಾವುಲ್ಲಾ, ಸಂಗನಕಲ್ ಲಿಂಗರಾಜ್, ಸಂಗನಕಲ್ ಜೋಗಿನ ವಿಜಯಕುಮಾರ್, ಹವಂಭಾವಿ ಗಂಗಾಧರ, ಟಿ.ಗಂಗಪ್ಪ, ಶಂಕರ್, ಅಂಜಿನಪ್ಪ ಎಚ್.ಕೆ, ರಮೇಶ್, ಎರಿಸ್ವಾಮಿ, ವೈ ರವೀಂದ್ರ ನೆಟ್ಟೆಕಲ್ಲಪ್ಪ, ಕುಸುಮ, ರವಿಕುಮಾರ್ ಸಂಗನಕಲ್, ದೇವಿನಗರ ಬೀಮಲಿಂಗ, ಉಮೇಶ್, ಕೆ.ಎರ್ರಿಸ್ವಾಮಿ, ರಾಮು ನಾಯಕ್, ಬೆಳಗಲ್ ಹುಲುಗಪ್ಪ, ಬೆಳಗಲ್ ಜಂಬುನಾಥ, ಮರಿಸ್ವಾಮಿಮಠ ವಸಂತ್ ಕುಮಾರ್, ಎಚ್.ಹಳ್ಳಪ್ಪ, ಸಂಗನಕಲ್ಲು ದಿವಾಕರ್, ಯರಗುಡಿ ರಮೇಶ ಮತ್ತಿತರರು ಹಾಜರಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ