ಬಳ್ಳಾರಿ. ಜೂ. 06 : ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇಂದು ಶುಕ್ರವಾರದಂದು ಸಿವಿಲ್ ವಿಭಾಗದ ವತಿಯಿಂದ ಅಂತರಾಷ್ಟ್ರೀಯ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ವೀ.ವಿ.ಸಂಘದ ಪದಾದಿಕಾರಿಗಳು ಮುಖ್ಯ ಅತಿಥಿಗಳಾಗಿ ಹೊಸೂರು ಈಶ್ವರ ಗೌಡ್ ಮಾಜಿ ಅಧ್ಯಕ್ಷರು ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ (ಎ ಸಿ ಸಿ ಇ ಎ) ಬಳ್ಳಾರಿ, ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಅರವಿಂದ ಪಾಟೀಲ್ ,ಪ್ರಾಂಶುಪಾಲರಾದ ಡಾ. ಮಹಾಬಲೇಶ್ವರ. ಹೆಚ್., ಉಪಪ್ರಾಂಶುಪಾಲರು ಡಾ.ಸವಿತಾ ಸೋನೋಳಿ, ಗಿಡ ನೆಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಹೊಸೂರು ಈಶ್ವರ ಗೌಡ್ ಮಾತನಾಡಿ, ವಿಶ್ವದಲ್ಲಿ ಲಕ್ಷಾಂತರ ಗ್ರಹಗಳು, ಗಲಾಕ್ಸಿಗಳು ಇದ್ದರೇ, ಭೂಮಿಯೋಂದೇ ಇದೆ, ಅದನ್ನು ಎಲ್ಲರು ಸೇರಿ ಉಳಿಸಿ, ಬೆಳಸಬೇಕು , ಈ ಪರಿಸರ ದಿನಾಚರಣೆಯ ಉದ್ದೇಶ ಮತ್ತು ಅದನ್ನು ಹೇಗೆ ಕಾಪಾಡಬೇಕೆಂದು,ಆಹಾರ ವ್ಯರ್ಥ, ನೀರಿನ ವ್ಯರ್ಥ, ಪರಿಸರಮಾಲಿನ್ಯ ನಿಯಂತ್ರಣ, ಕೀಟನಾಶಕಗಳ ಸೀಮಿತಗೋಳಿಸುವಿಕೆ ಮುಂತಾದ ಉದಾಹರಣೆಗಳ ಮೂಲಕ ವಿವರಿಸಿದರು. ಇದೇ ಸಂದರ್ಭದಲ್ಲಿ ಎಂಎಲ್ಸಿ ವೈಎನ್ ಸತೀಶ್ ಫೌಂಡೇಶನ್ ಅವರ ಸಂಸ್ಥೆಯಿಂದ ವೇಸ್ಟ್ ಪೇಪರ್ ಗಳಿಂದ ರಿಸೈಕ್ಲಿಂಗ್ ಮಾಡಿ ಪೆನ್ಸಿಲ್ ತಯಾರಿಸಿದ ಸ್ಯಾಂಪಲ್ ಪೆನ್ಸಿಲ್ ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಪ್ರಾಂಶುಪಾಲರಾದ ಡಾ. ಮಹಾಬಲೇಶ್ವರ. ಹೆಚ್ ಮಾತನಾಡಿ ನಮ್ಮ ಸುತ್ತಮುತ್ತಲಿನ ಪರಿಸರವು ಒಂದು ಅಮೂಲ್ಯ ರತ್ನವಿದ್ದಂತೆ, ಅದನ್ನ ಮುಂದಿನ ಪೀಳಿಗೆಗೆ, ಉಳಿಸಿ ಬೆಳಸುವುದು ನಮ್ಮೆಲ್ಲರ ಕರ್ತವ್ಯ, 2026 ರ ವಿಶ್ವ ಪರಿಸರ ದಿನದ ಪ್ರಮುಖ ಗಮನವು ಜಾಗತಿಕ ಹವಾಮಾನ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸಲು ಮತ್ತು ಕಾಡುಗಳು, ಸಾಗರಗಳು ಮತ್ತು ಜೌಗು ಪ್ರದೇಶಗಳಂತಹ ಪ್ರಮುಖ ಪರಿಸರ ವ್ಯವಸ್ಥೆಗಳನ್ನು ರಕ್ಷಿಸಲು ಪ್ರಕೃತಿ ಆಧಾರಿತ ಪರಿಹಾರಗಳನ್ನು ಬಳಸಿಕೊಳ್ಳುವುದನ್ನು ಒತ್ತಿಹೇಳುತ್ತದೆ.
ಈ ಕಾರ್ಯಕ್ರಮದಲ್ಲಿ
ವೀ.ವಿ.ಸಂಘದ ಪದಾಧಿಕಾರಿಗಳಾದ ಡಾ. ಕಣೇಕಲ್ ಮಹಾಂತೇಶ್, ಅಧ್ಯಕ್ಷರು, ಜಾನೆಕುಂಟೆ ಬಸವರಾಜ್ ಉಪಾಧ್ಯಕ್ಷರು, ವಿ.ವಿ. ಸಂಘ, ಮತ್ತು ಅಧ್ಯಕ್ಷರು, ಆರ್.ವೈ.ಎಂ.ಇ.ಸಿ, ಬಳ್ಳಾರಿ, ಡಾ. ಅರವಿಂದ್ ಪಟೇಲ್, ಕಾರ್ಯದರ್ಶಿ, ಮೇಟಿ ಪಂಪನ ಗೌಡ ಸಹಾಯಕ ಕಾರ್ಯದರ್ಶಿ, ಬೈಲುವದ್ದಿಗೇರಿ ಯೆರ್ರಿಸ್ವಾಮಿ ಖಜಾಂಚಿ, ಆರ್.ವೈ.ಎಂ.ಇ.ಸಿ. ಆಡಳಿತ ಮಂಡಳಿ ಸದಸ್ಯರು, ಪ್ರಭು ಸ್ವಾಮಿ ಎಸ್.ಎಂ, ಬಾಡದ ಪ್ರಕಾಶ್, ಎಲ್ಲರಿಗೂ ಅಂತರಾಷ್ಟ್ರೀಯ ಪರಿಸರ ದಿನಾಚರಣೆಯ ಶುಭಾಶಯಗಳು ಕೋರಿದರು.