Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ: ಮೇ 27ಕ್ಕೆ ಪ್ರತಿಭಾ ಪುರಸ್ಕಾರ ಸಮಾರಂಭ

ಅಥಣಿ: ಚಲವಾದಿ (ಬಲಗೈ) ಸಮುದಾಯ ನೌಕರರ ಸಂಘ (ರಿ.) ಅಥಣಿ ಇವರ ಆಶ್ರಯದಲ್ಲಿ 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ದ್ವಿತೀಯ ವರ್ಷದ ವಾರ್ಷಿಕ ಪರೀಕ್ಷೆಗಳಲ್ಲಿ ಶೇ. 80% ಕ್ಕಿಂತ ಹೆಚ್ಚು ಅಂಕ ಪಡೆದ ಪರಿಶಿಷ್ಟ ಜಾತಿಯ ಬಲಗೈ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಪ್ರೋತ್ಸಾಹ ಧನ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಚಲವಾದಿ (ಬಲಗೈ) ಸಮುದಾಯ ನೌಕರರ ಸಂಘದ ಅಧ್ಯಕ್ಷ ಮಹಾಲಿಂಗ ಮೇತ್ರಿ ಹೇಳಿದರು ಅವರು ಅಥಣಿ ಪ್ರವಾಸಿ ಮಂದಿರದಲ್ಲಿ ಪತ್ರಕಾಗೋಷ್ಟಿಯಲ್ಲಿ ಮಾತನಾಡಿ ಬರುವ ಮೇ ದಿ 27. 2026 ರಂದು ಅಥಣಿ ಪಟ್ಟಣದ ಶಿವಣಗಿ ಮಂಗಲ ಕಾರ್ಯಾಲಯದಲ್ಲಿ ಈ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ
ಸಾವಿರಾರು ವರ್ಷಗಳಿಂದ ಶೋಷಣೆಗೆ ಒಳಪಟ್ಟ ಎಸ್.ಸಿ,  ಸಮುದಾಯಗಳಿಗೆ ಡಾ. ಬಾಬಾಸಾಹೇಬ ಅಂಬೇಡ್ಕರರು ತಮ್ಮ ಹೋರಾಟದ ಮೂಲಕ ಸ್ವಾಭಿಮಾನದ ಬದುಕನ್ನು ಕಟ್ಟಿಕೊಟ್ಟಿದ್ದಾರೆ. ಅವರ ಆಶಯದಂತೆ ಸಮುದಾಯದವರು ಶಿಕ್ಷಣ ಮತ್ತು ಸರಕಾರಿ ನೌಕರಿಗಳನ್ನು ಪಡೆಯುವಂತಾಗಿದೆ ಆದರೆ ಪ್ರಸ್ತುತ ಜಾಗತೀಕರಣ ಖಾಸಗೀಕರಣ ಮತ್ತು ಉದಾರೀಕರಣದ ಪರಿಣಾಮದಿಂದ ಯುವಕರ ಶೈಕ್ಷಣಿಕ ಮಟ್ಟ ಕುಸಿಯುತ್ತಿದೆ ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಜಾಗೃತಗೊಳಿಸಿ ಸುಶಿಕ್ಷಿತರನ್ನಾಗಿಸಲು ಪ್ರೇರೇಪಿಸುವುದು ಅತ್ಯಗತ್ಯವಾಗಿದೆ ಈ ಸಮಾರಂಭಕ್ಕೆ ದಿವ್ಯ ಸಾನಿಧ್ಯ ವಿಜಯಪೂರದ ಪೂಜ್ಯ ಬಂತೇಜೀ ಪ್ರಜ್ಞಾಬೋದಿ ಥೇರೋ ಅಧ್ಯಕ್ಷತೆ ಐಪಿಎಸ್ ಅಧಿಕಾರಿಗಳು ಆಯುಷ್ಮಾನ ರವಿಂದ್ರ ಗಡಾದಿ, ಮುಖ್ಯ ಅಥಿತಿಗಳಾಗಿ ಬೆಂಗಳೂರಿನ ಅಕ್ಕ ಐಎಎಸ್ ಅಕಾಡಮಿ ನಿರ್ದೇಶಕ ಶಿವಕುಮಾರ,ಉಪನ್ಯಾಸಕರಾಗಿ ಆಯುಷ್ಮಾನ ಬಿ ಸಂತೋಷ,ಡಾ.ಗೀತಾ ಕಾಂಬಳೆ, ಡಾ.ವಿಲಾಸ ಕಾಂಬಳೆ, ಅವರು ಆಗಮಿಸಲಿದ್ದಾರೆ ಈ ನಿಟ್ಟಿನಲ್ಲಿ ಚಲವಾದಿ ಸಮುದಾಯ ನೌಕರರ ಸಂಘ ಹಾಗೂ ಅಥಣಿ ತಾಲೂಕಿನ ವಿವಿಧ ದಲಿತ ಪರ ಸಂಘಟನೆಗಳು, ನ್ಯಾಯವಾದಿಗಳು ಮತ್ತು ಪತ್ರಕರ್ತರು ಈ ಕಾರ್ಯಕ್ರಮದ ಆಯೋಜಬೆಯಲ್ಲಿ ಪಾಲ್ಗೊಳ್ಳಲಿದ್ದು. ಅಥಣಿ ಮತ್ತು ಕಾಗವಾಡ ತಾಲೂಕುಗಳ ಪ್ರತಿಭಾವಂತ ವಿದ್ಯಾರ್ಥಿಗಳು ಪುರಸ್ಕಾರ ಕಾರ್ಯಕ್ರಮಕ್ಕೆ ಬಂದು ಶೋಭೆ ತರಬೇಕಾಗಿ ವಿನಂತಿಸಿದರು.
ಈ ವೇಳೆ ಸಂಘಟನೆಯ ಕಾರ್ಯದರ್ಶಿ ಮಹಾಂತೇಶ ಕಾಂಬಳೆ,ಎ ಬಿ ಕುಟಗೋಳಿ,ಭರತ ಕಾಂಬಳೆ,ಸಂಜು ತಳವಲಕರ,ರವಿ ಕಾಂಬಳೆ,ಮಹಾಂತೇಶ ಬಾಡಗಿ,ರಾಮ ಮರೇಳರ,ದಯಾನಂದ ವಾಘಮೊರೆ,ಸಿದ್ಧಾರ್ಥ್ ಸಿಂಗೆ,ಪರಶುರಾಮ ತುಬಚಿ,ಭೀಮು ಕಾಂಬಳೆ,ರಾಕೇಶ ಮೈಗೂರ,ವಿಲಾಸ ಕಾಂಬಳೆ,ರಮೇಶ ಬಾದವಾಡಗಿ,ಬಾಹುಸಾಹೇಬ ದೊಡ್ಡಮನಿ,ಶಿವರಾಮ ಕಾಂಬಳೆ, ಶ್ರೀಮತಿ.ಜಯಶ್ರೀ ಕಾಂಬಳೆ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ