Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

"ವಲಯ ಹಾಗೂ ಅಂತರ ವಲಯ ಪುರುಷರ ಕಬಡ್ಡಿ ಪಂದ್ಯಾವಳಿ ಉದ್ಘಾಟನೆ"


ಮೂಡಲಗಿ,ಮೇ,೦೭  : ಬೆಳಗಾವಿ ಜಿಲ್ಲೆಯ ಹಳ್ಳಿಗಾಡಿನ ಯುವಕರ ಏಕಮೇವ ನೆಚ್ಚಿನ ಆಟವಾಗಿ ಕಬಡ್ಡಿ ಬೆಳೆದು ಬಂದಿದ್ದು, ಇಲ್ಲಿಯ ಆಟಗಾರರು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ  ಕೊಂಡೊಯ್ದಿದ್ದಾರೆ ಎಂದು ಬೆಳಗಾವಿ ಜಿಲ್ಲಾ ಅಮೇಚೂರ ಕಬಡ್ಡಿ ಅಸೋಷಿಯೇಷನ್ ಪ್ರಧಾನ ಕಾರ್ಯದರ್ಶಿ ಹಾಲಪ್ಪ ಹುಕ್ಕೇರಿ ಅಭಿಪ್ರಾಯಪಟ್ಟರು
ಬುಧವಾರದಂದು ಮೂಡಲಗಿ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಣ ಮಹಾವಿದ್ಯಾಲಯ, ಕಲಾ ವಾಣಿಜ್ಯ ಹಾಗೂ ಬಿಸಿಎ ಮಹಾವಿದ್ಯಾಲಯಗಳ ಸಂಯುಕ್ತಾಶ್ರಯದಲ್ಲಿ ಜರುಗುತ್ತಿರುವ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸನ್ ೨೦೨೫-೨೬ನೇ ಸಾಲಿನ ವಲಯ ಹಾಗೂ ಅಂತರ ವಲಯ ಪುರುಷರ ಕಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯ ಕಬಡ್ಡಿ ಆಟಗಾರ ಪ್ರೇಕ್ಷಕರ ಅಭಿಮಾನಿಗಳ ಸಂಘಗಳ ಸಹಕಾರವಿದ್ದರೆ ಬೆಳಗಾವಿ ಜಿಲ್ಲೆಯಲ್ಲಿ ಪ್ರೋ ಕಬಡ್ಡಿ ಸಂಘಟಿಸುವದಾಗಿ ಹೇಳಿದರು. ಮೂಡಲಗಿ ಶಿಕ್ಷಣ ಸಂಸ್ಥೆಯವರು ಸದಾ ಕ್ರೀಡೆಗಳಿಗೆ ಪ್ರೋತ್ಸಾಹಿಸಿ ಆಟಗಳನ್ನು ಸಂಘಟಿಸುತ್ತಿರುವದು ಮೆಚ್ಚುವಂತದ್ದಾಗಿದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೂಡಲಗಿ ಶಿಕ್ಷಣ ಸಂಸ್ಥೆಯ ಚೇರಮನರಾದ ವೆಂಕಟೇಶ ಸೋನವಾಲ್ಕರ ಮಾತನಾಡಿ ಕ್ರೀಡೆಗಳಲ್ಲಿ ನಿರ್ಣಾಯಕರ ನಿರ್ಣಯಕ್ಕೆ ಬದ್ದರಾಗಿರುವುದು ಬಹಳ ಮಹತ್ವದಾಗಿರುತ್ತದೆ. ಕ್ರೀಡಾಪಟುಗಳು ಕ್ರೀಡಾ ಮನೋಭಾವದಿಂದ ಆಟ ಆಡಬೇಕೆಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಹಾಲಪ್ಪ ಹುಕ್ಕೇರಿ ಹಾಗೂ ಕ್ರೀಡಾಪಟುಗಳಿಗೆ  ಸಮವಸ್ತ್ರ ಕೊಡುಗೆಯಾಗಿ ನೀಡಿದ ಮಂಜುನಾಥ ಸೈನಿಕ ತರಬೇತಿ ಸಂಸ್ಥೆಯ ಅಧ್ಯಕ್ಷ ಲಕ್ಷ್ಮಣ ಅಡಿಹುಡಿಯವರನ್ನು  ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಮೂಡಲಗಿ ಶಿಕ್ಷಣ ಸಂಸ್ಥೆಯ ಉಪಾದ್ಯಕ್ಷರಾದ ಆರ್.ಪಿ.ಸೋನವಾಲ್ಕರ, ನಿರ್ದೇಶಕರಾದ ಎ.ವ್ಹಿ. ಹೊಸಕೋಟಿ, ಆಡಳಿತಾಧಿಕಾರಿ ಡಾ.ಎಸ್.ಎಲ್.ಚಿತ್ರಗಾರ, ಪ್ರಾಚಾಯ೯ ಡಾ.ಎಮ್ .ಕೆ. ಕಂಕಣವಾಡಿ, ಕ್ರೀಡಾ ವಿಭಾಗದ  ಅಧ್ಯಕ್ಷರುಗಳಾದ ಪ್ರೂ ಎಲ್. ಬಿ.ಮಣ್ಣಾಪುರೆ, ಪ್ರೊ ಪಿ.ಬಿ.ಚೌಡಕಿ, ಪ್ರೊ ಬಿ ಎಸ್. ಕಂಬಾರ, ಪ್ರೊ ಯಲ್ಲಪ್ಪ ಭರಮಣ್ಣವರ, ಮಲ್ಲು ಮಳಲಿ, ಪೂಜಾ  ಗಲಗಲಿ, ಗಿರೆಪ್ಪ ಮುಂತಾದವರು ಉಪಸ್ಥಿತರಿದ್ದರು. ಪ್ರೊ ಭೀಮಶಿ ಬಡಗಣ್ಣವರ ಸ್ವಾಗತಿಸಿದರು, ಪ್ರೊ ಸಂತೋಷ ಮುಗಳಿ ನಿರೂಪಿಸಿ, ಪ್ರೊ ವೇದಾ ದೇಶಪಾಂಡೆ ವಂದಿಸಿದರು.

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST