ಇಂಡಿ: ನಗರದ ಯೋಜನಾಬದ್ದ ಅಭಿವೃದ್ದಿಗಾಗಿ ಕಾಮಗಾರಿಗಳ ಕೆಲಸವನ್ನು ನಗರಾಭಿವೃದ್ದಿ ಪ್ರಾಧಿಕಾರ ಮೂಲಕ ಮಾಡಲಾಗುತ್ತದೆ. ಇದರ ಪ್ರಯೋಜನ ಪಡೆದುಕೊಂಡು ನಗರದ ಅಭಿವೃದ್ದಿ ಕಾರ್ಯಕ್ರಮಗಳನ್ನು ರೂಪಿಸಿ ನಗರ ಸರ್ವಾಂಗಿಣ ಅಭಿವೃದ್ದಿ ಪಡಿಸುವ ನೀಟ್ಟಿನಲ್ಲಿ ಗುರಿಯಾಗಿಸಿಕೊಂಡು ಕಾರ್ಯಪ್ರವತ್ತರಾಗಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಅವರು ಬುಧವಾರರಂದು ನಗರದ ಆಡಳಿತ ಸೌಧದ ಮೂರನೇಯ ಮಹಡಿಯಲ್ಲಿ ಇಂಡಿ ನಗರಾಭಿವೃದ್ದಿ ಪ್ರಾಧಿಕಾರದ ನೂತನ ಕಛೇರಿ ಉದ್ಘಾಟಿಸಿ ಮಾತನಾಡಿದರು.
ರಾಜ್ಯದ ಗಡಿ ಭಾಗದ ಇಂಡಿ ನಗರ ಕೂಡಾ ಒಂದು ಮಾದರಿ ನಗರವನ್ನಾಗಿ ಮಾಡಬೇಕು ಎಂಬ ಪರಿಕಲ್ಪನೆಯಾಗಿದೆ. ಹಾಗಾಗಿ ಜಿಲ್ಲಾ ಮಟ್ಟದ ಹಲವು ಇಲಾಖೆಗಳು ಕಾರ್ಯ ನಿರ್ವಹಿಸುತ್ತಿವೆ. ಇದರ ಸದುಪಯೋಗವನ್ನು ಜನ ಪಡೆದುಕೊಳ್ಳಬೇಕು ಎಂಬ ಸದಾಶಯ ನನ್ನದು. ಸಾರ್ವಜನಿಕರ ಕೇಲಸ ಕಾರ್ಯಗಳು ತ್ವರಿತವಾಗಿ ಆಗಬೇಕು ಅಭಿವೃದ್ದಿ ಪುರಕವಾಗಿ ಇಂಡಿ ಅಭಿವೃದ್ದಿ ಪ್ರಾಧಿಕಾರ ಮತ್ತು ಇಂಡಿ ನಗರಸಭೆ ಕಾರ್ಯನಿರ್ವಹಿಸುತ್ತವೆ ಎಂದರು.
ಇದೇ ವೇಳೆ ನೂತನ ಅಧ್ಯಕ್ಷರಾಗಿ ಅಜೀತ ಧನಶೆಟ್ಟಿ, ಸದಸ್ಯರಾಗಿ ಚನ್ನಪ್ಪ ಮಲ್ಲಪ್ಪ ಬೋಡಿ, ರವೀಂದ್ರ ನಿಗಡಿ, ದತ್ತಾತ್ರೇಯ ಜೋಶಿ ಅಧಿಕಾರ ಸ್ವೀಕರಿಸಿ ಮಾತನಾಡಿದರು.
ಜಿಲ್ಲಾಧಿಕಾರಿ ಕೆ.ಆನಂದ, ಪೌರಾಯುಕ್ತ ಶಿವಾನಂದ ಪೂಜಾರಿ, ಕಂದಾಯ ಉಪವಿಬಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ತಹಸೀಲ್ದಾರ ಬಿ.ಎಸ್.ಕಡಕಬಾವಿ, ಕೃಷಿ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ, ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷ ಇಲಿಯಾಸ ಬೋರಾಮಣಿ, ವಕೀಲರ ಸಂಘದ ಅಧ್ಯಕ್ಷ ಸಿದ್ದಣ್ಣ ಬೂದಿಹಾಳ, ಅಶೋಕ ಗಜಾಕೋಶ, ಸಂದೀಪ ಧನಶೆಟ್ಟಿ, ಶಾಂತುಗೌಡ ಬಿರಾದಾರ ಶ್ರೀಕಾಂತ ಕುಡಿಗನೂರ, ಸತೀಶ ಕುಂಬಾರ ಮತ್ತಿತರಿದ್ದರು.