Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕಂಪ್ಲಿಯಲ್ಲಿ ನೂತನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಉದ್ಘಾಟನೆ

ಜನರ ಹಿತರಕ್ಷಣೆ, ಹಕ್ಕುಗಳಿಗಾಗಿ ನ್ಯಾಯಾಲಯ: ನ್ಯಾ.ಆರ್.ನಟರಾಜ

ಬಳ್ಳಾರಿ,ಏ.27

ಜನರ ಹಿತರಕ್ಷಣೆ ಹಾಗೂ ಹಕ್ಕುಗಳನ್ನು ಒದಗಿಸಿಕೊಡುವ ಜೊತೆಗೆ ಸಕಾಲದಲ್ಲಿ ಜನತೆಗೆ ನ್ಯಾಯ ಒದಗಿಸಿಕೊಡುವುದು ನ್ಯಾಯಾಲಯದ ಮುಖ್ಯ ಉದ್ದೇಶವಾಗಿದೆ ಎಂದು ಕರ್ನಾಟಕ ಉಚ್ಛನ್ಯಾಯಾಲಯ ಮತ್ತು ಆಡಳಿತಾತ್ಮಕ ನ್ಯಾಯಾಧೀಶರಾದ ಆರ್.ನಟರಾಜ ಅವರು ಹೇಳಿದರು.

ಕಂಪ್ಲಿ ಪಟ್ಟಣದ 20ನೇ ವಾರ್ಡಿನ ಶಿಬಿರದಿನ್ನಿ (ಮಾರುತಿನಗರ)ಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ನೂತನ ಸಿವಿಎಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಉದ್ಘಾಟಿಸಿ ಅವರು ಮಾತನಾಡಿದರು.

ಜನರು ಕೇಸ್ ವಿಚಾರಣೆಗಾಗಿ ಕಂಪ್ಲಿಯಿಂದ ದೂರದ ಬಳ್ಳಾರಿ ಕೋರ್ಟ್ ಗೆ ಹೋಗಬೇಕಾಗಿತ್ತು. ಕಂಪ್ಲಿಯಲ್ಲಿ ಕೋರ್ಟ್ ಆಗದಿದ್ದರೆ, ಅಪೂರ್ಣವಾಗುತ್ತಿತ್ತು. ಕೋರ್ಟ್ ಸ್ಥಾಪನೆಯೊಂದಿಗೆ ಹೂ ಅರಳಿದಂತಾಗಿದೆ ಎಂದು ತಿಳಿಸಿದರು.

ಇಲ್ಲಿನ ಜನರು ಹಕ್ಕು ಭಾದಿತರಾಗಿದ್ದಾರೆ. ಇಲ್ಲಿನ ಜನತೆಗೆ ಕೋರ್ಟ್ ಅತ್ಯವಶ್ಯಕವಾಗಿದೆ. ಇಲ್ಲಿನ ಪುರಸಭೆಗೆ ಒಳಪಡುವ ಕಟ್ಟಡದಲ್ಲಿ ಕೋರ್ಟ್ ಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಇಲ್ಲಿನ ನಗದಿತ ಸ್ಥಳದಲ್ಲಿರುವ ಕಟ್ಟಡಕ್ಕೆ ಹೊಸ ರೂಪುರೇಷೆ ನೀಡಲಾಗುತ್ತದೆ. ಸರ್ಕಾರ ಅನುಮತಿ ನೀಡಿದರೆ, ಭವ್ಯ ಕಟ್ಟಡ ಮಾಡಲಿದ್ದೇವೆ ಎಂದರು.

ಉತ್ತಮ ಸ್ಥಳದಲ್ಲಿ ಕೋರ್ಟ್ ಸ್ಥಾಪಿತವಾಗಬೇಕಾಗಿತ್ತು. ಆದರೆ, ಇಲ್ಲಿನ ಇಕ್ಕಟ್ಟಿನ ಸ್ಥಳದಲ್ಲಿ ಹಾಗೂ ಜನರು ಬಾರದ ಸ್ಥಳದಲ್ಲಿ ಕೋರ್ಟ್ ಕಟ್ಟಡ ನೀಡಿರುವುದು ಅಸಮಾಧಾನವಿದೆ. ಇಲ್ಲಿನ ಕೋರ್ಟ್ ಸಾಕಾಗಲ್ಲ. ಇಲ್ಲಿ 63 ಜನ ವಕೀಲರಿದ್ದು, ಒಂದು ಸಾವಿರ ಕೇಸ್ ಇರುತ್ತಿದ್ದವು. ಈಗ ಕಂಪ್ಲಿಯಲ್ಲೇ ನ್ಯಾಯಾಲಯ ಸ್ಥಾಪಿತವಾಗಿದೆ. ಇದರಿಂದ ಈ ಭಾಗದ ಜನರು ನ್ಯಾಯ ಪಡೆಯುವ ಜೊತೆಗೆ ಸೌಲಭ್ಯಗಳನ್ನು ಪಡೆದುಕೊಳ್ಳಲಿದ್ದಾರೆ. ಜನರ ಹಿತರಕ್ಷಣೆ ಹಾಗೂ ಜನರು ತಮ್ಮ ಹಕ್ಕುಗಳನ್ನು ಪಡೆದು, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಿದ್ದಾರೆ ಎಂದರು.

ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ಸದಸ್ಯ ಅನೀಲ್ ಕುಮಾರ್ ಅವರು ಮಾತನಾಡಿ, ಕಂಪ್ಲಿಯಲ್ಲಿ ಈಗ ನ್ಯಾಯಾಲಯ ಸ್ಥಾಪನೆಗೊಂಡಿದೆ. ಕಂಪ್ಲಿ ಬಳಿಯಲ್ಲಿ ಮೀಸಲಿಸಿರುವ 3.12 ಎಕರೆ ಜಾಗದಲ್ಲಿ ಸುಮಾರು 25 ಕೋಟಿ ರೂ. ಅನುದಾನ ಮಂಜೂರು ಮಾಡಿಸಿ, ಭವ್ಯ ಕಟ್ಟಡ ನಿರ್ಮಿಸಿಕೊಡುವ ಭರವಸೆಯನ್ನು ಶಾಸಕ ಜೆ.ಎನ್.ಗಣೇಶ ನೀಡಿದ್ದಾರೆ. ಸಕಾಲದಲ್ಲಿ ಕಕ್ಷಿದಾರರಿಗೆ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ವಕೀಲರು ಮುಂದಾಗಬೇಕು ಎಂದರು.

ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಜಿ.ಶಾಂತಿ, ಎಸ್.ಇಸ್ಮಾಯಿಲ್ ಜಬಿವುಲ್ಲಾ, ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸದಸ್ಯ ಜೆ.ಎಂ.ಅನಿಲ್ ಕುಮಾರ, ಲೋಕೋಪಯೋಗಿ ಇಇ ಬಿ.ವಿಜಯ ಭಾಸ್ಕರ್, ವಕೀಲರಾದ ಪ್ರಭಾಕರ, ಹರೀಶ್, ರುದ್ರಪ್ಪ, ಶಿವಪ್ಪ, ಯಂಕಪ್ಪ, ನಟರಾಜ, ಹುಲುಗಪ್ಪ, ವೀರಣ್ಣ, ಮಾರುತಿಸಿಂಗ್, ಮೋಹನ್ ಕುಮಾರ್ ದಾನಪ್ಪ, ಮುಂಖಡರಾದ ಕೆ.ಎಂ.ಹೇಮಯ್ಯಸ್ವಾಮಿ, ಹೊಸಕೋಟೆ ಜಗದೀಶ, ಜಿ.ರಾಮಣ್ಣ, ಬಿ.ಸಿದ್ದಪ್ಪ ಸೇರಿದಂತೆ

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST