Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮೇ.31 ಬಳ್ಳಾರಿ ಜಿಲ್ಲಾ ಛಲವಾದಿ ನೌಕರರ ಕಲ್ಯಾಣ ಸಂಘದ ಉದ್ಘಾಟನೆ

ಬಳ್ಳಾರಿ, ಮೇ.29:  ಛಲವಾದಿ ಸಮುದಾಯದ ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರು ಸೇರಿದ ಬಳ್ಳಾರಿ ಜಿಲ್ಲಾ ಛಲವಾದಿ ನೌಕರರ ಕಲ್ಯಾಣ ಸಂಘ  ಅಸ್ಥಿತ್ವಕ್ಕೆ ತರಲಾಗಿದೆ. ಇದರ ಉದ್ಘಾಟನೆ ಮತ್ತು ಎಸ್ ಎಸ್ ಎಲ್ ಸಿ  ಮತ್ತು ದ್ವಿತಿಯ ಪಿಯುನಲ್ಲಿ  ಶೇ 75 ಕ್ಕಿಂತ ಹೆಚ್ಚು ಅಂಕಪಡೆದ  ಸಮುದಾಯದ ವಿದ್ಯಾರ್ಥಿಗಳಿಗೆ  ಪ್ರತಿಭಾ ಪುರಸ್ಕಾರದ  ಕಾರ್ಯಕ್ರಮ ಮೇ.31 ರಂದು ಬೆಳಿಗ್ಗೆ 11 ಕ್ಕೆ  ನಗರದ ಜೋಳದರಾಶಿ ದೊಡ್ಡನಗೌಡ ರಂಗ ಮಂದಿರದಲ್ಲಿ ಹಮ್ಮಿಕೊಂಡಿದೆ ಎಂದು ಸಂಘದ ಅಧ್ಯಕ್ಷ ಗೂಳಪ್ಪ  ಹೇಳಿದ್ದಾರೆ.
ಅವರು ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಕಾರ್ಯಕ್ರಮದ ಮಾಹಿತಿ ನೀಡಿ,
ನಮ್ಮ ಸಂಘ ಹೋರಾಟ ಮಾಡುವ  ಸಂಘ ಅಲ್ಲ. ಹೋರಾಟದಿಂದ ದೂರ. ಅಂಬೇಡ್ಕರ್, ಓಬವ್ವ ಜಯಂತಿ ಆಚರಣೆ ಮಾಡಲಿದೆ. ಕಲ್ಯಾಣ ನಿಧಿ ಸ್ಥಾಪನೆ, ಶಿಕ್ಷಣಕ್ಕೆ ಒತ್ತು ನೀಡಿ ಸಮುದಾಯದ ಮಕ್ಕಳಿಗೆ ಸ್ಪರ್ಧಾತ್ಮಕ ತರಬೇತಿ ನೀಡುವುದು. ಅನ್ಯಾಯವಾದಾಗ ಅದರ ವಿರುದ್ದ
ಶಾಂತಿಯುತವಾಗಿ ಮನವಿಗಳ ಮೂಲಕ ನ್ಯಾಯ ದೊರಕಿಸುವ ಪ್ರಯತ್ನ ಮಾಡಲಿದೆ. ಸರ್ಕಾರದ ಸೌಲಭ್ಯಗಳನ್ನು ಒದಗಿಸುವ ಕೆಲಸ ಮಾಡಲಿದೆಂದರು.
ಕಾರ್ಯಕ್ರಮದಲ್ಲಿ  ಜ್ಞಾನಪ್ರಕಾಶ ಸ್ವಾಮೀಜಿ ಉರಿಲಿಂಗ, ಪೆದ್ದಿ ಮಠ ಮೈಸೂರು,  ಬಸವನಾಗಿದೇವ ಸ್ವಾಮೀಜಿ, ಛಲವಾದಿ ಮಹಾಮಠ, ಚಿತ್ರದುರ್ಗ,  ಕಮಲರತ್ನ ಭಂತೇಜಿ, ಭಾರತೀಯ ಬೌದ್ಧ ಮಹಾಸಭಾ ಇವರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ.
ಉದ್ಘಾಟನೆಯನ್ನು ಛಲವಾದಿ ಸಮುದಾಯದ  ಮುಖಂಡರು,   ಸಚಿವರಾದ  ಡಾ.ಜಿ. ಪರಮೇಶ್ವರ, ಡಾ. ಹೆಚ್.ಸಿ. ಮಹಾದೇವಪ್ಪ,  ಪ್ರಿಯಾಂಕ್ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವ ಡಾ. ಬಿ.ಝಡ್. ಜಮೀರ್ ಅಹಮದ್ ಖಾನ್,ಕರ್ನಾಟಕ ರಾಜ್ಯ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ
ಅಬ್ಬಯ್ಯ ಪ್ರಸಾದ್, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ  ಪಿ.ಎಂ. ನರೇಂದ್ರಸ್ವಾಮಿ ನೆರವೇರಿಸಲಿದ್ದಾರೆ.ಜೊತೆಗೆ ಜಿಲ್ಲೆಯ ಜನಪ್ರತಿನಿಧಿಗಳು, ಸಮುದಾಯದ ಶಾಸಕರು ಸಂಸದರು ಪಾಲ್ಗೊಳ್ಳಲಿದ್ದಾರೆ.
ಪ್ರತಿಭಾ ಪುರಸ್ಕಾರ ಪ್ರದಾನವನ್ನು  ಹೆಚ್. ಸಿದ್ದಯ್ಯ,  ರಾಜ್ಯಾಧ್ಯಕ್ಷರು, ಕರ್ನಾಟಕ ಛಲವಾದಿ ಮಹಾಸಭಾ, ಡಿಸಿ  ನಾಗೇಂದ್ರ ಪ್ರಸಾದ್, ವಾಣಿ ಕೆ. ಶಿವರಾಮು, ರಾಜ್ಯಾಧ್ಯಕ್ಷರು, ಛಲವಾದಿ ಮಹಾಸಭಾ, ಡಾ. ಮೂರ್ತಿ .ಎಲ್, ಅಧ್ಯಕ್ಷರು, ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಯೋಗ,  ಕೆ.ಎಸ್. ಗಂಗಾಧರಯ್ಯ, ಕಾರ್ಯನಿರ್ವಾಹಕ ನಿರ್ದೇಶಕರು,  ಸಿ.ಎನ್. ಜ್ಯೋತಿಲಕ್ಷ್ಮಿ ಚೀಫ್ ಇಂಜಿನಿಯರ್,   ರಮೇಶ್,  ಎ.ಜಿ.ಎಂ., ಕ.ವಿ.ನಿ.ನಿ. ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರ, ಕುಡತಿನಿ ಅವರು ನಡೆಸಿಕೊಡಲಿದ್ದಾರೆ.
:ನಿವೃತ್ತ ನೌಕರರಿಗೆ ಗೌರವ ಪುರಸ್ಕಾರ :
ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ, ಮಾನಯ್ಯ, ಮಾಜಿ ಅಧ್ಯಕ್ಷರು, ಕೇಂದ್ರ ಪರಿಹಾರ ಸಮಿತಿ,  ಹೆಚ್.ಕೆ. ಬಸವರಾಜು, ಮಾಜಿ ರಾಜ್ಯಾಧ್ಯಕ್ಷರು ಛಲವಾದಿ ಮಹಾಸಭಾ ಇವರು ಸಮುದಾಯದ ನಿವೃತ್ತ ನೌಕರರಿಗೆ ಗೌರವ ಪುರಸ್ಕಾರ ನೀಡಿ ಸನ್ಮಾನಿಸಲಿದ್ದಾರೆಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ  ಸಂಘದ ಗೌರವ ಅಧ್ಯಕ್ಷ ಸೋಮನಾಥ, ಸಮುದಾಯದ ಮುಖಂಡರುಗಳಾದ ಸಿ..ನರಸಪ್ಪ, ಸಿ.ಮಂಜುನಾಥ, ಹನುಮಪ್ಪ, ಶಂಕರ್ ನಂದಿಹಾಳ್, ವಿಲಾಶ್ ಮಾನ್ಕರ್, ಹನುಮೇಶ್, ಜೆ.ಎಸ್.ಶ್ರೀನಿವಾಸುಲು. ಮೊದಲಾದವರು ಇದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ