ಬೀಳಗಿ- ತಾಲೂಕಿನ ಅನಗವಾಡಿ ಗ್ರಾಮದಲ್ಲಿ ನೂತನವಾಗಿ ಅನಗವಾಡಿ ಬಸವೇಶ್ವರ ಸೌಹಾರ್ದ ಸಹಕಾರಿ ಸಂಘ ಉದ್ಘಾಟನೆ ಸಮಾರಂಭ ನೆರವೇರಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಗಿರಿ ಸಾಗರ ಕಲ್ಯಾಣ ಹಿರೇಮಠದ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ಹಾಗೂ ಮಾತೋಶ್ರೀ ಅನಸೂಯಾ ತಾಯಿ ಪುರ್ಣಾನಂದ ಆಶ್ರಮ ಅನಗವಾಡಿ ಅವರು ವಹಿಸಿದ್ದರು. ಉದ್ಘಾಟನೆಯನ್ನು ವಿಧಾನ ಪರಿಷತ್ ಶಾಸಕ ಹನಮಂತ ನಿರಾಣಿ ನೆರವೇರಿಸಿದರು.
ಗಣಕ ಯಂತ್ರ ಸಭಾ ಭವನ ಉದ್ಘಾಟನೆಯನ್ನು ಕೆ.ಪಿ.ಸಿ.ಸಿ. ಮಾಜಿ ಕಾರ್ಯದರ್ಶಿ ಶ್ರೀಮಂತ ಬಸವಪ್ರಭು ಸರನಾಡಗೌಡ. ಮಾಜಿ ಜಿಪಂ ಸದಸ್ಯ ಬಸವರಾಜ್ ಖೋತ್ ನೆರವೇರಿಸಿದರು.
ಟಿ.ಎ.ಪಿ.ಸಿ.ಎಮ್.ಎಸ್.ಅಧ್ಯಕ್ಷ ಎಮ್.ಬಿ.ಕಂಬಿ ಸೇರಿದಂತೆ ಮಹಾಂತೇಶ ಕಂಬಿ, ನೂತನ ಆಡಳಿತ ಮಂಡಳಿ ಗೌರವಾಧ್ಯಕ್ಷ ಮಲ್ಲಪ್ಪ ರು ಅಂಗಡಿ. ಅಧ್ಯಕ್ಷ ಮಿಥುನ್ ನಾಯಕ್. ಉಪಾಧ್ಯಕ್ಷ ರುದ್ರಪ್ಪಗೌಡ ಹು ಮೇಟಿ. ನಿರ್ದೇಶಕ ಮುತ್ತಣ್ಣ ಶಿ ಅಂಗಡಿ. ಸಂಗಯ್ಯ ಹೋ ಕಂಬಿ. ನಿರಂಜನ ಚಂ ಸಿದ್ಲಿಂಗಪ್ಪನವರ್. ಮಲ್ಲಪ್ಪ ಶಂ ಕುಂಬಾರ್. ಮುತ್ತಪ್ಪ ಫ ತೆಗ್ಗಿ. ಮಲ್ಲಪ್ಪ ಹ ಹಕಾರಿ. ಶಿವಬಾಯಿ ಶಿ ಕಂಬಿ. ಕಾಸವ್ವ ಜಾನಮಟ್ಟಿ. ರೇಣುಕಾ ಛಬ್ಬಿ ರುಕ್ಮವ್ವ ಸೋ ಚೂರಿ ಇದ್ದರು.
