Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಗ್ರಾಮೀಣ ತೋಟಗಾರಿಕೆ ಕಾರ್ಯಾನುಭವ ಶಿಬಿರದ ಉದ್ಘಾಟನಾ ಕಾರ್ಯಕ್ರಮ 

ಮೂಡಲಗಿ : ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟದ ಅಂಗವಾದ ಕಿತ್ತೂರು ರಾಣಿ ಚನ್ನಮ್ಮಾ ತೋಟಗಾರಿಕೆ ಮಹಾವಿದ್ಯಾಲಯ ಅರಭಾವಿಯಿಂದ ರಾಮದುರ್ಗ ತಾಲೂಕಿನ ಗೊಡಚಿ ಗ್ರಾಮದಲ್ಲಿ ಅಂತಿಮ ವ?ದ ಬಿ.ಎಸ್‌ಸಿ. ತೋಟಗಾರಿಕೆ ವಿದ್ಯಾರ್ಥಿಗಳ ಗ್ರಾಮೀಣ ತೋಟಗಾರಿಕೆ ಕಾರ್ಯಾನುಭವ ಶಿಬಿರದ ಉದ್ಘಾಟನಾ ಸಮಾರಂಭವನ್ನು ಮಂಗಳವಾರ ದಿ.೭.ರಂದು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮವನ್ನು ಮೊದಲಿಗೆ ತೋಟಗಾರಿಕಾ ಕಿರುಪ್ರದರ್ಶನದ ಕೃಷಿಸಿರಿ ಮೂಲಕ ಪ್ರಾರಂಭಿಸಲಾಯಿತು. ಕಾರ್ಯಕ್ರಮವನ್ನು ಯುವ ಧುರಿಣರಾದ ಶ್ರೀ. ಅನಿಕೇತನ ಪಟ್ಟಣ ರವರು ರಾಶಿಪೂಜೆ ಮಾಡುವ ಮೂಲಕ ಉದ್ಘಾಟಿಸಿ ಯುಕರನ್ನುದ್ದೇಶಿಸಿ ತೋಟಗಾರಿಕೆ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಅಂತಿಮ ವ?ದ ಬಿ.ಎಸ್‌ಸಿ. ತೋಟಗಾರಿಕೆಯ ೭೫ ವಿದ್ಯಾರ್ಥಿಗಳು  ಮೂರು ತಿಂಗಳು ಕಾಲ ಗೊಡಚಿ ಗ್ರಾಮದಲ್ಲಿ ತಂಗಲಿದ್ದು ರೈತರೊಂದಿಗೆ ಸಂಪರ್ಕಹೊಂದಿ ರೈತರಿಂದ ತೋಟಗಾರಿಕಾ ಮಾಹಿತಿ ಪಡೆದುಕೊಳ್ಳುವರು ಮತ್ತು ವಿದ್ಯಾರ್ಥಿಗಳು ರೈತರಿಗೆ ಹೊಸ ತಂತ್ರಜ್ಞಾನಗಳನ್ನು ಪರಿಚಯಿಸುವರು.

ಡಾ. ಆನಂದ ಬ. ಮಾಸ್ತಿಹೊಳಿ, ಡೀನ್ ಕಿರಾಚತೋಮ, ಅರಭಾವಿ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅಧ್ಯಕ್ಷೀಯ ಭಾ?ಣ ಮಾಡಿದರು. ಅಭಿನವ ಯಾದವ, ಜಿಲ್ಲಾ ಅಭಿವೃದ್ಧಿ ಅಧಿಕಾರಿ, ನಬಾರ್ಡ ರವರು ನಬಾರ್ಡ ಸ್ಕೀಮ್ ಮತ್ತು ತಂತ್ರಜ್ಞಾನದ ಕುರಿತು, ಪ್ರಶಾಂತ ಗೊಡಕೆ, ಲೀಡ್ ಬ್ಯಾಂಕ ವ್ಯವಸ್ಥಾಪಕರು ರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ರೈತರಿಗೆ ಲಾಭದಾಯಕ ಯೋಜನೆಗಳ ಬಗ್ಗೆ, ಶ್ರೀನಾಥ ಚಿಮ್ಮಲಗಿ, ಸಹಾಯಕ ಕೃಷಿ ನಿರ್ದೇಶಕರು, ರಾಮದುರ್ಗ ರವರು ಕೃಷಿಯನ್ನು ಉದ್ಯಮವಾಗಿ ಹೇಗೆ ಪರಿವರ್ತನೆ ಮಾಡಬಹುದು ಎನ್ನುವುದರ ಬಗ್ಗೆ ಮಾತನಾಡಿದರು. ಪ್ರಕಾಶ ಮುರಕಟನಾಳ, ಪ್ರಗತಿಪರ ರೈತರು, ಗೊಡಚಿ ರವರು ತಮ್ಮ ಕೃಷಿ ಅನುಭವದ ಬಗ್ಗೆ ಹೇಳಿಕೊಂಡರು ಮತ್ತು ಪ್ರಕಾಶ ಮುಗಳಖೋಡರವರು ಸರ್ಕಾರಿ ಸೌಲಭ್ಯಗಳ ಕುರಿತು ಹೇಳಿದರು.

ಕಾರ್ಯಕ್ರಮದಲ್ಲಿ ಮಂಜುನಾಥ ದೇವರೆಡ್ಡಿ, ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಗೊಡಚಿ, ಆರ್. ವಿ ದಾಸರ, ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ, ಚಂದರಗಿ, ಅಶೋಕ ವಾಲಿಕಾರ, ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ, ಚಂದರಗಿ ಮತ್ತು ಗ್ರಾಮದ ರೈತರು ಸೇರಿದಂತೆ ಕಿರಾಚತೋಮ ಅರಭಾವಿಯ ಡಾ. ವಿಲಾಸ ಡಿ. ಗಸ್ತಿ, ಗ್ರಾ.ತೋ.ಕಾ.ಶಿ., ಸಂಯೋಜಕರು, ಡಾ. ಎಸ್. ಜಿ. ಪ್ರವೀಣಕುಮಾರ, ಗ್ರಾ.ತೋ.ಕಾ.ಶಿ., ಸಹ ಸಂಯೋಜಕರು, ಕಿರಾಚತೋಮ, ಅರಭಾವಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ನಾಗಮಣಿ ನಿರೂಪಿಸಿದರು, ಕು. ಸ್ಪೂರ್ತಿ ಪ್ರಾರ್ಥನಾಗೀತೆ ಹಾಡಿದರು. ರೈತಗೀತೆಯನ್ನು ಪೂಜಾ ಹಾಗೂ ಸಂಗಡಿಗರು, ಸುನಿತಾ ಸ್ವಾಗತಿಸಿದರು ಪ್ರದೀಪ ವಂದಿಸಿದರು.





Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ