Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕಾನೂನು ಬಾಹಿರವಾಗಿ ಮಲಪ್ರಭಾ ಸಕ್ಕರೆ ಕಾರಖಾನೆ ನಿರ್ದೇಶಕರ ನೇಮಕ!







ಬೆಳಗಾವಿ:  ಜಿಲ್ಲೆಯ ಕಿತ್ತೂರು ತಾಲೂಕಿನ ಮಲಪ್ರಭಾ ಸಹಕಾರಿ ಸಕ್ಕರೆ ಕಾರಖಾನೆ ನಿ, ಮು.ಖಾ. ಹುಬ್ಬಳ್ಳಿ, ಈ ಕಾರ್ಖಾನೆಯಲ್ಲಿ ಆಡಳಿತ ಮಂಡಳಿಯ ನಿರ್ದೆಶಕನಾಗಿ ಅಶೋಕ ಯಮಕನಮರಡಿ ಇವರು ಆಯ್ಕೆಯಾದ ಕೆಲವೇ ತಿಂಗಳುಗಳಲ್ಲಿ ರಾಜಿನಾಮೆ ನೀಡಿರುತ್ತಾರೆ. ಆದರೆ ಆಡಳಿತ ಮಂಡಳಿಯ ಎಲ್ಲ ನಿರ್ದೇಶಕರು ಸೇರಿ ಸಹಕಾರ ಸಂಘದ ನಿಯಮಾವಳಿ ಪ್ರಕಾರ ಚುನಾವಣೆ ನಡೆಸದೇ  ಮೋಹನ ಸಂಬರಗಿ ಇವರನ್ನು ಕೋ-ಅಪ್ಪ ಮಾಡಿ ನಿರ್ದೇಶಕರನ್ನಾಗಿ ನೇಮಕ ಮಾಡಿರುತ್ತಾರೆ.


ಅದು ಅಲ್ಲದೇ ಅವರನ್ನೇ ಅಧ್ಯಕ್ಷರನ್ನಾಗಿ ನೇಮಕ ಮಾಡಿರುತ್ತಾರೆ. ಆದರೆ ಸಹಕಾರಿ ಸಂಘದ ಚುನಾವಣೆ ನಿಯಮಾವಳಿ ಪ್ರಕಾರ " ಒಂದು ಆಡಳಿತ ನಿರ್ದೇಶಕನ ಪದದಲ್ಲಿನ ಯಾವುದೇ ಸ್ಥಾನವು ಖಾಲಿ ಉಂಟಾದಲ್ಲಿ ನಿರ್ದೇಶಕನ ಉಳಿದ ಪದಾವಧಿಯು ಅವರ ಮೂಲ  ಅವಧಿಯ ಅರ್ಧಕ್ಕಿಂತ ಕಡಿಮೆ ಇದ್ದರೆ ಮಂಡಳಿಯ ಯಾವ ಗುಂಪಿನ ನಿರ್ದೇಶಕರ ಸ್ಥಾನ ಖಾಲಿಯಾಯಿತೋ ಅದೇ ಗುಂಪಿನ ಅರ್ಹರಾದ ಒಬ್ಬರನ್ನು ಉಳಿದ ಅವಧಿಗೆ * ಕೋಆಫ್ಟ್ ಮಾಡಿಕೊಳ್ಳತಕ್ಕದ್ದು. ಆದರೆ ಅದರ ಮೂಲ ಅವಧಿಯು ಅರ್ಧಕ್ಕಿಂತ ಹೆಚ್ಚು ಇದ್ದರೆ ಸಹಕಾರ ಚುನಾವಣೆ ಪ್ರಾಧಿಕಾರವು ಚುನಾವಣೆಯನ್ನು ಜರುಗಿಸಿ ಆ ಸ್ಥಾನವನ್ನು ಭರ್ತಿ ಮಾಡತಕ್ಕದ್ದು " ಎಂಬ ನಿಯಮಾವಳಿ ಇರುತ್ತದೆ.


ಆದರೆ ಈ ಮೇಲಿನ ನಿಯಮಾವಳಿಯನ್ನು ಗಾಳಿಗೆ ತೂರಿ ಸದರಿ ಕಾರ್ಖಾನೆಯ ನಿರ್ದೇಶಕ ಸ್ಥಾನಕ್ಕೆ  ಮೋಹನ ಸಂಬರಗಿ ಇವರನ್ನು ಕೋ-ಅಪ್ಪ ಮಾಡಿ ನಿರ್ದೇಶಕರನ್ನಾಗಿ ನೇಮಕ ಮಾಡಿರುತ್ತಾರೆ. ಹೀಗಾಗಿ ಈ ಹಿಂದೆಯೂ ಸಹ ಸದರಿಯವರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವುದರಿಂದ ಆಡಳಿತ ಮಂಡಳಿ ಜೊತೆಗೂಡಿ ಭ್ರಷ್ಟಾಚಾರ ಮಾಡುತ್ತಾರೆಂದು ಮೇಲ್ನೋಟಕ್ಕೆ ಕಂಡು ಬರುತ್ತದೆ.




ಆದ ಕಾರಣ ಮಾನ್ಯರವರು ಈ ವಿಷಯವನ್ನು ಗಂಭಿರವಾಗಿ ಪರಿಗಣಿಸಿ ರೈತರಿಗೆ ಹಾಗೂ ಸಹಕಾರ ಕ್ಷೇತ್ರದ ಹಿತದೃಷ್ಟಿಯಿಂದ ತನಿಖೆ ಮಾಡಿ ತಪ್ಪಿತಸ್ಥರ ಮೇಲೆ ಸಹಕಾರ ಕ್ಷೇತ್ರದ ಕಾಯ್ದೆಯಡಿ ಕಾನೂನು ಕ್ರಮ ಜರುಗಿಸಬೇಕೆಂದು ಸಮಾಜ ಸೇವಕ ವಿವೇಕ ತಡಕೊಡ ಮುಖ್ಯಮಂತ್ರಿ ಹಾಗೂ ಸಹಕಾರ ಸಚಿವರಿಗೆ ದೂರು ಸಲ್ಲಿಸಿದ್ದಾರೆ.















Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ