ಬೀಳಗಿ- ಮುಂದುವರಿದ ಇಂದಿನ ದಿನಮಾನದಲ್ಲಿ ತಂತ್ರಜ್ಞಾನವೇ ಮುಖ್ಯವಾಗಿದ್ದು ಯಾವ ಕ್ಷೇತ್ರದಲ್ಲಿ ಪ್ರಾಮಾಣಿಕತೆ ಇರುತ್ತದೆ ಅಂತಹ ಕ್ಷೇತ್ರ ಲಾಭದಾಯಕವಾಗಿ ರುತ್ತದೆ ಎಂದು ಕಲ್ಮಠದ ಗುರುಪಾದ ಶಿವಾಚಾರ್ಯ ಮಹಾಸ್ವಾಮಿಗಳ ತಿಳಿಸಿದರು.ಪಟ್ಟಣದ ಪ್ರತಿಷ್ಠಿತ ಕ್ರಷ್ಣಾ ಕೊ- ಆಪರೇಟಿವ್ ಕ್ರೆಡಿಟ್ ಸೊಸಾಯಿಟಿ ನಿಯಮಿತದ 24ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಸಾನಿಧ್ಯವನ್ನು ವಹಿಸಿ ಅವರು ಮಾತನಾಡಿದರು.ಯಾವುದೇ ಕೆಲಸವಾದರು ಅಲ್ಲಿ ಹಣದ ಅವಶ್ಯಕತೆ ಇರುತ್ತದೆ,ಅಂತಹ ಹಣದ ಅವಶ್ಯಕತೆ ಪೂರೈಸಲು ಸಹಕಾರಿ ಸಂಘಗಳು ಮುಖ್ಯವಾಗಿರುತ್ತವೆ, ಠೇವಣಿದಾರರು,ಸಾಲಗಾರರು ಸಹಕಾರಿ ಕ್ಷೇತ್ರದ ಬಳಕೆ ಮಾಡಿಕೊಂಡು ತಮ್ಮ ಆರ್ಥಿಕ ವ್ಯವಹಾರ ಮಾಡುತ್ತಾರೆ ಇದರಿಂದ ಸಂಘಕ್ಕೂ ಮತ್ತು ಗ್ರಾಹಕರಿಗೂ ಅನುಕೂಲವಾಗುವುದು ಜೊತೆಗೆ ಎಲ್ಲರಲ್ಲೂ ಆರ್ಥಿಕ ಭದ್ರತೆ ಬೆಳೆಯಲಿದೆ,ಸಂಘದಿಂದ ಪಡೆದ ಸಾಲವನ್ನು ಸಕಾಲಕ್ಕೆ ಮರು ಪಾವತಿ ಮಾಡಿದಾಗ ಮಾತ್ರ ಸುಗಮ ವ್ಯವಹಾರ ನೆಡೆಯುತ್ತದೆ, ಪಟ್ಟಣದ ಕ್ರಷ್ಣಾ ಕೊ-ಆಪರೇಟಿವ್ ಕ್ರೆಡಿಟ್ ಸೊಸಾಯಿಟಿ ಕಳೆದ 24 ವರ್ಷಗಳಿಂದ ಎಲ್ಲಾ ವರ್ಗದ ಜನರಿಗೂ ಆರ್ಥಿಕ ನೆರವು ನೀಡುತ್ತಿದೆ ಜೊತೆಗೆ ತನ್ನದೆ ಎರಡು ಹೊಸ ಶಾಖೆಗಳನ್ನು ಆರಂಭಿಸಿ ತನ್ನ ವ್ಯವಹಾರದ ಲಕ್ಷವನ್ನು ಹೆಚ್ಚಿಸಿದ್ದು,ಜನರ ವಿಶ್ವಾಸ ಗೆಲ್ಲುವ ಹೆಮ್ಮೆಯ ಸಂಸ್ಥೆಯಾಗಿ ಬೆಳೆಯುತ್ತಿದೆ,ಕಾರಣ ಸಂಘದ ಅಧ್ಯಕ್ಷ ಉಪಾಧ್ಯಕ್ಷ ಸೇರಿದಂತೆ ನಿರ್ದೇಶಕ ಮಂಡಳಿ ಮತ್ತು ಸಿಬ್ಬಂದಿ ವರ್ಗದ ಪ್ರಾಮಾಣಿಕ ಸೇವೆಯೇ ಕಾರಣವಾಗಿದ್ದು ಬರುವ ವರ್ಷ ಈ ಸಂಘವು ತನ್ನ 25 ನೇ ವರ್ಷದ ಬೆಳ್ಳಿ ಹಬ್ಬವನ್ನು ಆಚರಿಸಿ ಇನ್ನು ಹೆಚ್ಚಿನ ಲಾಭ ಗಳಿಸಿ ಬಡ ಜನರಿಗೆ, ವ್ಯಾಪಾರಸ್ಥರು,ರೈತರಿಗೆ ಹೆಚ್ಚಿನ ಆರ್ಥಿಕ ನೆರವು ನೀಡುವಂತಾಗಲಿ ಎಂದರು.ಸಮಾರಂಭದಲ್ಲಿ ಸಂಘದ ಅಧ್ಯಕ್ಷ ಅಶೋಕ್ ಚೂರಿ ಮಾತನಾಡಿ ಎಲ್ಲರ ನಿರಂತರ ಶ್ರಮದಿಂದ ಸಂಘವು ಪ್ರಸಕ್ತ ಸಾಲಿನಲ್ಲಿ 73.25 ಲಕ್ಷ ರೂ ಲಾಭಗಳಿಸಿದೆ,ಬರುವ ದಿನಮಾನಗಳಲ್ಲಿ ಸಂಘವು ಇನ್ನು ತನ್ನ ಹೊಸ ಶಾಖೆಗಳನ್ನು ಆರಂಭಿಸಿ ಜನರಿಗೆ ಅನುಕೂಲ ಮಾಡಲಾಗುವುದು ಎಂದರು,ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ಎಸ್ ಆರ್ ಬಟಕುಕಿ೯ ವಾರ್ಷಿಕ ವರದಿ ವಾಚನ ಮಾಡಿದರು, ನಿರ್ದೇಶಕರಾದ ಎಸ್ ಎನ್ ಚೂರಿ ಮಾತನಾಡಿ ಸಂಘ ಬೆಳೆದು ಬಂದ ದಾರಿ ಕುರಿತು ಮಾತನಾಡಿದರು,ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಜಿ ಆರ್ ಸಿಂಗರಡ್ಡಿ, ನಿರ್ದೇಶಕರಾದ ಎ ಪಿ ಜಕರಡ್ಡಿ,ಎಂ ಎಂ ಶಂಬೋಜಿ,ವಿ ಎಸ್ ದೇಸಾಯಿ,ಎಸ್ ಎ ನಾಯ್ಕರ,ಆರ್ ಪಿ ಸೊನ್ನದ,ವಾಯ್ ಆರ್ ಗಾಮಾ,ಎ ಡಿ ಕೋಲಾರ,ಆರ್ ಆರ್ ಹೆಗಡೆ,ವಿ ಆರ್ ದಾಸರ, ಸಿಬ್ಬಂದಿಳಾದ ಎಂ ಎಸ್ ಕೋಟಿ,ಕೆ ಎ ಕೋಲಾರ,ಆನಂದ ಕುಂಬಾರ,ರಮೇಶ್ ಕುರಿ,ಎಸ್ ಎಂ ಚೂರಿ,ಎಸ್ ಬಿ ಸಣ್ಣಕ್ಕಿ ಸೇರಿದಂತೆ ಲೋಕಾಪೂರ,ಕೋಲಾರ ಶಾಖೆಯ ಸದಸ್ಯರು ಇದ್ದರು.