LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Dharwad

ಹುಬ್ಬಳ್ಳಿಯ ಪುಷ್ಕರಣಿ ವಿಚಾರದಲ್ಲಿ ಬೆಲ್ಲದ ರಾಜಕಾರಣ ಬಿಡಲಿ,  ದೀಪಕ ಚಿಂಚೋರೆ ವಾಗ್ದಾಳಿ


ಧಾರವಾಡ: ಹುಬ್ಬಳ್ಳಿಯ ಆಸಾರ ಓಣಿಯ ಭವಾನಿ ಶಂಕರ ದೇವಸ್ಥಾನದ ಪುಷ್ಕರಣಿ ಮುಚ್ಚಿ ರಸ್ತೆ ಮಾಡಲಾಗುತ್ತಿದೆ ಎಂದು ಆರೋಪಿಸಿ ದೇವಸ್ಥಾನದ ಉಳಿವಿಗಾಗಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು  ದೊಡ್ಡಮಟ್ಟದಲ್ಲೇ ಮೊನ್ನೆಯಷ್ಟೇ ಪ್ರತಿಭಟನೆ ಮಾಡಿದ್ದವು.
ಆದರೆ, ಆಸಾರ ಓಣಿಯ ರಸ್ತೆ ಕಾಮಗಾರಿಗೆ ಜಗದೀಶ ಶೆಟ್ಟರ್ ಹುಬ್ಬಳ್ಳಿ, ಧಾರವಾಡ ಕೇಂದ್ರ ಶಾಸಕರಿದ್ದಾಗಲೇ ಅನುದಾನ ಬಿಡುಗಡೆ ಮಾಡಿಸಿದ್ದಾರೆ ಎಂಬುದನ್ನು ಶಾಸಕ ಅರವಿಂದ ಬೆಲ್ಲದ ಅರಿತುಕೊಳ್ಳಬೇಕು ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ದೀಪಕ್ ಚಿಂಚೋರೆ ಇದೀಗ ವಾಗ್ದಾಳಿ ನಡೆಸಿದ್ದಾರೆ.
ಮಂಗಳವಾರ ಈ ಸಂಬಂಧ ಸುದ್ದಿಗೋಷ್ಠಿ ನಡೆಸಿದ ದೀಪಕ ಚಿಂಚೋರೆ, 2013ರಲ್ಲಿ ಜಗದೀಶ ಶೆಟ್ಟರ್ ಅವರು ಶಾಸಕರಿದ್ದಾಗ ಬಿಡುಗಡೆಯಾದ ಅನುದಾನದ ಬಗೆಗಿನ ದಾಖಲೆಗಳನ್ನು ಬಿಡುಗಡೆಗೊಳಿಸಿದರು. ಅವರದ್ದೇ ಶಾಸಕರಿದ್ದ ಸಂದರ್ಭದಲ್ಲಿ ಆಸಾರ ಓಣಿ ರಸ್ತೆ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿಸಲಾಗಿದೆ. ಆಗ ಯಾಕೆ ಶಾಸಕರಾದ ಬೆಲ್ಲದ ಹಾಗೂ ಟೆಂಗಿನಕಾಯಿ ಅವರು ಈ ಬಗ್ಗೆ ಧ್ವನಿ ಎತ್ತಲಿಲ್ಲ. ಧಾರವಾಡದಲ್ಲೂ ಕೇಂದ್ರ ಅರ್ಕಾಲಜಿ ಇಲಾಖೆಗೆ ಸೇರಿದ ಅನೇಕ ದೇವಸ್ಥಾನಗಳಿವೆ. ಧಾರವಾಡದ ಕಿಲ್ಲಾ ಭಾಗದಲ್ಲಿರುವ ಆಂಜನೇಯ ದೇವಸ್ಥಾನ ಇದೆ. ಅಮರಗೋಳದಲ್ಲಿ ಹಳೆಯ ಬನಶಂಕರಿ ದೇವಸ್ಥಾನ ಕೂಡ ಇದೆ ಅಲ್ಲಿಯೂ ರಸ್ತೆಗಳಾಗಿವೆ. ಇದರ ಬಗ್ಗೆ ಬೆಲ್ಲದ್ ಅವರು ಏಕೆ ಮಾತನಾಡುತ್ತಿಲ್ಲ. ಇವರು ಹುಬ್ಬಳ್ಳಿ, ಧಾರವಾಡ ಯುವಕರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಶೆಟ್ಟರ್ ಶಾಸಕರಿದ್ದಾಗ ಆ ಆಸಾರ ಓಣಿಯ ರಸ್ತೆ ಕಾಮಗಾರಿಗೆ 12.5 ಲಕ್ಷ ಅನುದಾನ ಬಿಡುಗಡೆ ಮಾಡಿದ್ದರು. ಪಾಂಡುರಂಗ ಪಾಟೀಲ ಅವರು ಮೇಯರ್ ಇದ್ದ ಸಂದರ್ಭದಲ್ಲೂ ಆ ರಸ್ತೆಗೆ 12.5 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದರು. ಇದರ ಬಗ್ಗೆ ಬೆಲ್ಲದ ಏಕೆ ಮಾತನಾಡುವುದಿಲ್ಲ. ಏನು ನೈತಿಕತೆ ಇಟ್ಟುಕೊಂಡು ಇವರು ಪುಷ್ಕರಣಿ ಮುಚ್ಚಲಾಗಿದೆ ಎಂದು ಹೋರಾಟ ಮಾಡುತ್ತಿದ್ದಾರೆ? ಅಲ್ಲದೇ ಧಾರವಾಡದ ತಮ್ಮ ಮನೆಯ ಹತ್ತಿರ ಇದ್ದ ಬಾವಿಯನ್ನೂ ಬೆಲ್ಲದ ಮುಚ್ಚಿದ್ದಾರೆ. ಆ ಬಾವಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು ನೀರು ಕುಡಿದಿದ್ದ ಇತಿಹಾಸ ಇದೆ. ಇದನ್ನು ಅವರು ಯಾಕೆ ಮುಚ್ಚಿದರು ಎಂಬುದನ್ನು ಮೊದಲು ಹೇಳಲಿ. ಬೆಲ್ಲದ ಮೊದಲು ತಾವು ಸುಧಾರಣೆಯಾಗಲಿ. ಜನರ ದಿಕ್ಕು ತಪ್ಪಿಸಿ ರಾಜಕಾರಣ ಮಾಡುವುದು ಬೇಡ ಎಂದು ಚಿಂಚೋರೆ ಹೇಳಿದರು. 
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ನ ಮುಖಂಡ ದೀಪಕ್ ಚಿಂಚೋರೆ.ನಾಗರಾಜ ಗುರಿಕಾರ .ಎಚ್ ಎಮ್ ರಾಜು. ಮೆಹಬೂಬ್ ಪಠಾಣ್.ಇತರರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹುಬ್ಬಳ್ಳಿಯ ಪುಷ್ಕರಣಿ ವಿಚಾರದಲ್ಲಿ ಬೆಲ್ಲದ ರಾಜಕಾರಣ ಬಿಡಲಿ,  ದೀಪಕ ಚಿಂಚೋರೆ ವಾಗ್ದಾಳಿಭತ್ತದಲ್ಲಿ ಸಮಗ್ರ ಬೆಳೆ ನಿರ್ವಹಣೆ ಕುರಿತು ತರಬೇತಿ ಕಾರ್ಯಕ್ರಮಮೃತರ ಕುಟುಂಬಗಳಿಗೆ ಲಕ್ಷ್ಮೀ ಹೆಬ್ಬಾಳಕರ್ ಸಾಂತ್ವನಅಳ್ನಾವರ ತಾಲೂಕಿನ ಬೆಣಚಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಡೋರಿ ಗ್ರಾಮಕ್ಕೆ ಜಿಲ್ಲಾಧಿಕಾರಿ- ಸ್ನೇಹಲ್ ಆರ್. ಭೇಟಿ  ಮಹಿಳೆಯರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸದ್ಬಳಕೆ ಮಾಡಿಕೊಳ್ಳಿ: ಪಿಎಸ್‌ಐ  ಎ. ರುಕ್ಮಿಣಿತಾಯಿ-ಶಿಶು ಆರೋಗ್ಯ ರಕ್ಷಣೆಗೆ ವಿಶೇಷ ಆದ್ಯತೆ ನೀಡಿ: ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ್ಮಾತು ಮನೆ ಕಟ್ಟುತ್ತದೆ, ಮಾತೇ ಮನೆಯನ್ನು ಕೆಡಿಸುತ್ತದೆ - ಶಿದ್ದಲಿಂಗಶ್ರೀ*ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಎರಡನೇ ಬಾರಿಗೆ ದತ್ತಾ ವಾಸ್ಟರ್ ಅವಿರೋಧವಾಗಿ ಆಯ್ಕೆ*ಪ್ರಾಮಾಣಿಕತೆ ಇದ್ದಲ್ಲಿ ಲಾಭ ಹೆಚ್ಚಿರುತ್ತದೆ - ಗುರುಪಾದ ಶ್ರೀಭಾಜಪ ಜಿಲ್ಲಾಧ್ಯಕ್ಷ ಶ್ರೀ ಖಾಸ್ಗತೇಶ್ವರ ಮಠಕ್ಕೆ ಭೇಟಿ