Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಇ-ಕೆವೈಸಿ ಮಾಡಿಸದಿದ್ದರೆ ಉದ್ಯೋಗ ಚೀಟಿ ರದ್ದು: ಬಡಿಗೇರ ಜಾಗೃತಿ






ಗಜೇಂದ್ರಗಡ: ನರೇಗಾದಲ್ಲಿ ಕೂಲಿಕಾರರು ಕೆಲಸ ಮಾಡಬೇಕಾದರೆ ಇ-ಕೆವೈಸಿ ಮಾಡಿಕೊಳ್ಳಬೇಕು. ಇ-ಕೆವೈಸಿ ಮಾಡಿಸದಿದ್ದರೆ ಕೂಲಿಕಾರರ ಉದ್ಯೋಗ ಚೀಟಿ(ಜಾಬ್ ಕಾರ್ಡ್) ರದ್ದಾಗಲಿದೆ ಎಂದು ಸ್ವತಃ ಕೂಲಿಕಾರರ ಮನೆ-ಮನೆಗೆ ತೆರಳಿ ಇ-ಕೆವೈಸಿ ಮಾಡಿ ನರೇಗಾ ಕೂಲಿಕಾರರಲ್ಲಿ ಗಜೇಂದ್ರಗಡ ತಾಲೂಕು ಪಂಚಾಯತ ಗ್ರಾಮೀಣ ಉದ್ಯೋಗದ ಸಹಾಯಕ ನಿರ್ದೇಶಕರು ಬಸವರಾಜ ಬಡಿಗೇರ ಜಾಗೃತಿ ಮೂಡಿಸಿದರು.

ತಾಲೂಕಿನ ಇಟಗಿ, ಸೂಡಿ ಮತ್ತು ಹಾಲಕೆರೆ ಗ್ರಾಪಂ ಗಳಿಗೆ ಖುದ್ದು ತಾಪಂ ಎಡಿ ಅವರೇ ಭೇಟಿ ನೀಡಿ ಇಂದು ಇ-ಕವೈಸಿ ಕಾರ್ಯದಲ್ಲಿ ತೊಡಗಿಸಿಕೊಂಡು ಕೂಲಿಕಾರರಲ್ಲಿ ತಿಳುವಳಿಕೆ ಮೂಡಿಸಿದರು.

ಇಟಗಿ ಗ್ರಾಪಂ ವ್ಯಾಪ್ತಿಯಲ್ಲಿ ಕೂಲಿಕಾರರ ಮನೆಗಳಿಗೆ ತೆರಳಿದ ಎಡಿ ಬಸವರಾಜ ಬಡಿಗೇರ ಅವರು, ನರೇಗಾ ಕೆಲಸದ ಬದುವಿನ ಕೆಲಸ ಸೇರಿದಂತೆ ಎಲ್ಲ ಕಾಮಗಾರಿಗಳಲ್ಲಿ ಕೆಲಸ ಮಾಡಲು ಇ-ಕೆವೈಸಿ ಕಡ್ಡಾಯವಾಗಿದೆ. ಇವಾಗಲೇ ಇ-ಕೆವೈಸಿ ಮಾಡಿಸಿಕೊಂಡಲ್ಲಿ ನರೇಗಾದಲ್ಲಿ ಕೆಲಸ ಮಾಡಲು ಅವಕಾಶವಿದೆ. ಇ-ಕೆವೈಸಿ ಮಾಡಿಸದಿದ್ದರೆ ನರೇಗಾದಲ್ಲಿ ಕೆಲಸ ಮಾಡಲು ಬರಲ್ಲ ಅಂತ ತಿಳಿಸಿದರು.

ಸೂಡಿ ಗ್ರಾಪಂ ಗೆ ಭೇಟಿ ನೀಡಿದ ಬಸವರಾಜ ಬಡಿಗೇರ ಅವರು, ಇ-ಕೆವೈಸಿ ಕಾರ್ಯದಲ್ಲಿ ತೊಡಿಗಿರುವ ಸಿಬ್ಬಂದಿಗಳ ಕಾರ್ಯವನ್ನು ಪರಿಶೀಲಿಸಿದರು. ಸರ್ವರ್ ಸಮಸ್ಯೆಯಿರುವ ಬಗ್ಗೆ ಸಿಬ್ಬಂದಿ ಬಡಿಗೇರ ಅವರ ಗಮನಕ್ಕೆ ತಂದರು. ಬೆಳಿಗ್ಗೆ ೬ ರಿಂದ ೮ ಗಂಟೆ ಒಳಗಾಗಿ ಹೆಚ್ಚಿನ ಇ-ಕೆವೈಸಿ ಮಾಡಿ ಈ ಸಂದರ್ಭದಲ್ಲಿ ಸರ್ವರ್ ಸಮಸ್ಯೆ ಇರಲ್ಲ ಅಂತ ತಿಳಿಸಿದರು.

ಹಾಲಕೆರೆ ಗ್ರಾಪಂ ಗೆ ಭೇಟಿ ನೀಡಿದ ಬಡಿಗೇರ ಅವರು, ತಾಲೂಕಿನಲೇ ಕಡಿಮೆ ಪ್ರಗತಿ ಸಾಧಿಸಿರುವುದಕ್ಕೆ ಅಸಮಧಾನ ವ್ಯಕ್ತಪಡಿಸಿದರು. ಮುಂದಿನ ಎರಡು ದಿನಗಳಲ್ಲಿ ಪ್ರಗತಿ ಸಾಧಿಸುವಂತೆ ತಾಕೀತು ಮಾಡಿದರು.

ಈ ಸಂದರ್ಭದಲ್ಲಿ ತಾಂತ್ರಿಕ ಸಂಯೋಜಕ ಪ್ರಕಾಶ ಮ್ಯಾಕಲ್, ಇಟಗಿ, ಸೂಡಿ, ಹಾಲಕೆರೆ ಗ್ರಾಪಂ ಗಳ ಪಿಡಿಒ ಮತ್ತು ಸಿಬ್ಬಂದಿ ವರ್ಗ ಹಾಜರಿದ್ದರು.








Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ನದಾಫ್-ಪಿಂಜಾರ ಸಂಘ ತಾಲೂಕ ಘಟಕದ ಕಚೇರಿ ಉದ್ಘಾಟನೆ ಟ್ರಕ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಅಕ್ಕ-ತಮ್ಮ ದಾರುಣ ಸಾವುತಾಲೂಕಾ ಅಧಿಕಾರಿಗಳ ಸಾಮಾನ್ಯ ಸಭೆ; ರೈತರಿಗೆ ಬೀಜ, ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಿ: ಬಸವರಾಜ್ ಅಡವಿಮಠ್ ಸೂಚನೆಕೊಪ್ಪಳ ಕಾರ್ಯನಿರತ ಪತ್ರಕರ್ತರ ಸಂಘದ ಸಭೆನೂತನ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಅಭಿನಂದಿಸಿದ ಲಕ್ಷ್ಮೀ  ಹೆಬ್ಬಾಳಕರ.ಸಿದ್ದರಾಮಯ್ಯ ಭೇಟಿ ಮಾಡಿ ಧನ್ಯವಾದ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಸತ್ಕರಿಸಿದ ಯುವ ಮುಖಂಡ  ರಾಹುಲ  ಜಾರಕಿಹೊಳಿ.ಸಚಿವ ಸತೀಶ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ ಬೇಟಿ ಪರಸ್ಪರ ಶುಭ ಕೋರಿಕೆಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್‌ಗಳ ಬೆಳವಣಿಗೆಗೆ ಉತ್ತೇಜನ*ಶರಣು ಕಾರ್ಯಾಲಯ ಆರಂಭಿಸುವ ಮೂಲಕ ಬಡವರ ಕಣ್ಣಿರು ಒರೆಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ : ಬಳಗಾನೂರು ಶ್ರೀಗಳು,,*