ಬಳ್ಳಾರಿ,ಜೂ.15:: ನಗರದ ತಾಳೂರು ರಸ್ತೆಯಲ್ಲಿರುವ ಕೆ.ಟಿ.ಎಂ ಇಂಟರ್ನ್ಯಾಷನಲ್ ಶಾಲೆಯ ೯ನೇ ತರಗತಿ ವಿದ್ಯಾರ್ಥಿನಿ ಕೊರ್ಲಗುಂದಿ ಗ್ರಾಮದ ರಾಮಾಂಜಿನಿರೆಡ್ಡಿ ಹಾಗೂ ಕವಿತಾ ದಂಪತಿಗಳ ಹಿರಿಯ ಪುತ್ರಿ ಹಿಮ ಬಿಂದು ಗಾಂಧಾರಿ ವಿದ್ಯೆ ಪ್ರವೀಣೆಯಾಗಿದ್ದು, ಕಳೆದ ಕೆಲವು ವರ್ಷಗಳಿಂದ ತಮ್ಮ ಪ್ರತಿಭೆಯಿಂದ ಪ್ರಸಿದ್ಧರಾಗಿದ್ದಾರೆ.
ಕಳೆದ ಸಲ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಪರೀಕ್ಷೆ ಬರೆದು ಹೆಸರಾಗಿದ್ದು ಇತ್ತೀಚಿಗೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೇವಲ ೫೭ ಸೆಕೆಂಡ್ ನಲ್ಲಿ ೧೭ ಸಲ ಸೂಜಿ ದಾರ ಸೇರಿಸಿ ಭಾರತ ರಾಷ್ಟಿçÃಯ ದಾಖಲೆಗೆ ಪಾತ್ರರಾಗಿ ಆ ಪುಸ್ತಕದಲ್ಲಿ ಹೆಸರು ಪಡೆದಿದ್ದಾಳೆ ಹಾಗೂ ಸರ್ಕಾರದಿಂದ ಪದಕ ಪ್ರಶಸ್ತಿ ಪತ್ರ ಪಡೆದು ಶಾಲೆಗೆ ಹಾಗೂ ಊರಿಗೆ ತಂದೆ ತಾಯಿಗೆ ಕೀರ್ತಿ ತಂದಿದ್ದಾಳೆ.
ಈ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳಾದ ಮಂಜುನಾಥ್ ಸ್ವಾಮಿ ಅವರು ಹಿಮ ಬಿಂದು ಅವರಿಗೆ ಪ್ರಶಸ್ತಿ ಪತ್ರ ಹಾಗೂ ಪದಕ ನೀಡಿ ಗೌರವಿಸಿದರು ಹಾಗೂ ಅವರ ಸಾಧನೆ ಬಗ್ಗೆ ಪ್ರಶಂಸೆ ಮಾತುಗಳನ್ನು ಹೇಳಿದರು.
ಕಾರ್ಯಕ್ರಮ ದಲ್ಲಿ ಶಾಲೆಯ ಶಿಕ್ಷಕರು ಮಕ್ಕಳು ಪಾಲ್ಗೊಂಡಿದ್ದರು.