Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಾನವ ಸಂಬಂಧಗಳು ಮೊಬೈಲ್ ಬಳಕೆಯಿಂದ ಮಾಯ: ಮರಿ ಕೊಟ್ಟೂರು ಸ್ವಾಮಿಗಳು


ಹೊಸಪೇಟೆ.  ( ವಿಜಯನಗರ):   ತಂತ್ರಜ್ಙಾನ ಮುಂದುವರೆದಾಗಿನ ಇಂದಿನ ಯುಗದಲ್ಲಿ ಮೊಬೈಲ್ ಕ್ರಾಂತಿಯoದಾಗಿ ಮಾನವ ಸಂಬಂಧಗಳು  ಮಾಯವಾಗುತ್ತಿವೆ ಎಂದು ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿದ ,ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನ ಮಠದ ಮರಿ ಕೊಟ್ಟೂರುಸ್ವಾಮಿ ಗಳು.


ನಗರದ ಕ್ರೈಸ್ತಾ ಸಮುದಾಯದ ಭವನ ದಲ್ಲಿ

 ನಡೆದ  ತುಂಗಭದ್ರಾ ಫೋಟೋ ಮತ್ತು ವಿಡಿಯೋಗ್ರಾಪರ್ಸ್  ಅಸೋಸಿಯೇಷನ್   ವತಿಯಿಂದ ಆಯೋಜಿಸಲಾಗಿದ್ದ 186ನೇ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಸಮಾರಂಭದ ಉದ್ಘಾಟನೆ ನೆರವೇರಿಸಿ ಆಶೀರ್ವಚನ ನೀಡಿ ಮೇಲಿನಂತೆ ನುಡಿದರು. , ಸುಂದರ ಕ್ಷಣಗಳ ಸವಿನೆನಪಿಗಾಗಿ ಛಾಯಾಗ್ರಹಣವನ್ನು ಕಂಡು ಹಿಡಿಯಲಾಯಿತು. ಛಾಯಾಗ್ರಹಣ ಎಂಬುದು ಒಂದು ಸುಂದರ ಪ್ರಪಂಚ ಇದು ಹಲವರಿಗೆ ಬದುಕು ಕಟ್ಟಕೊಟ್ಟಿದೆ. ಹಲವರಿಗೆ ಹೆಸರು ತಂದು ಕೊಟ್ಟಿದೆ. ಇದರ ಮೂಲಕ ಸುಂದರ ಬದುಕು ಕಟ್ಟಿಕೊಳ್ಳುವ ಕೆಲಸವನ್ನು ಛಾಯಾಗ್ರಾಹಕರು ಮಾಡಬೇಕು ಎಂದರು.


ಹಿಂದಿನ ಕಾಲದ ಕಪ್ಪು ಬಿಳುಪು ಫೊಟೋಗಳಿಗೆ ಒಂದು ಬೆಲೆ ಇತ್ತು. ನಂತರ ದಿನದಲ್ಲಿ ಆದು ನೀಕರಣದ ಭಾಗವಾಗಿ ಕ್ಯಾಮೆರಾ ಜಾಗದಲ್ಲಿ ಮೊಬೈಲ್ ಗಳು ಬಂದು ಕುಳಿತವು. ಈ ಮೊಬೈಲ್ ಕ್ರಾಂತಿಯಿಂದಾಗಿ ಮನುಕುಲ ಅಳಿವಿನತ್ತ ಸಾಗುತ್ತಿದೆ. ಮುನುಷ್ಯರಲ್ಲಿ ಮಾನವೀಯ ಮೌಲ್ಯಗಳು ಮಾಯವಾಗಿ, ಯಾಂತ್ರಿಕತೆ ನೆಲೆಸಿದೆ. ಮನುಷ್ಯರಿಗಿಂತ ನಾವು ಇಂದು ವಸ್ತುಗಳನ್ನು ಪ್ರೀತಿಸುತ್ತಿದ್ದೇವೆ. ಕುಟುಂಬ ವ್ಯವಸ್ಥೆ  ಅದೋಗತಿಗೆ ಇಳಿದಿದೆ ಎಂದರು.


ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಇಳಕಲ್ ನ ಜನಾಬ್ ಲಾಲ್ ಹುಸೇನ್ ಕಂದಗಲ್ ಮಾತನಾಡಿ, ಹಿಂದಿನ ಕಾಲದಲ್ಲಿ ನಾವು ಪ್ರೀತಿಸುವ ವಸ್ತುಗಳಲ್ಲಿ ಫೊಟೋ ಒಂದಾಗಿರುತ್ತಿತ್ತು. ಆಗ ಛಾಯಾಗ್ರಹಣಕ್ಕೆ ಹಾಗೂ ಛಾಯಾಗ್ರಾಹಕರಿಗೆ ಒಂದು ಬೆಲೆ ಇತ್ತು. ಆಧುನೀಕರಣದ ಫಲವಾಗಿ ಛಾಯಾಗ್ರಹಣ ಹಾಗೂ ಛಾಯಾಗ್ರಾಹಕರು ಇಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಯಾವುದೇ ಮನೆಯಲ್ಲಿ ಯಾವುದೇ ಮನೆಯಲ್ಲಿ ಶುಭ ಕಾರ್ಯವಾಗಲಿ ಇಲ್ಲವೇ ಬೇರೆ ಯಾವುದೇ ಕಾರ್ಯ ಇದ್ದರು. ಛಾಯಾಗ್ರಾಹಕರು ಇದ್ದೆ ಇರುತ್ತಾರೆ. ಆದರೆ ಆವರಿಗೆ ನಾವು ನೀಡುವ ಹಣ ಸರಿಯಾದ ಸಮಯದಲ್ಲಿ ನೀಡದೆ ನಿರ್ಲಕ್ಷ  ಮಾಡುತ್ತಿರುವುದು ಕಂಡು ಬರುತ್ತಿದೆ. ಸಂಕಷ್ಟದಲ್ಲಿರುವ ಛಾಯಾಗ್ರಾಹಕರನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸವನ್ನು ಸರ್ಕಾರ ಹಾಗೂ ಸಮಾಜ ಮಾಡಬೇಕಾಗಿದೆ ಎಂದರು.


ಮುಖ್ಯ ಅತಿಥಿ ಕಾರ್ಮಿಕ ಇಲಾಖೆ ಅಧಿಕಾರಿ ಮೂರ್ಯಪ್ಪ ಐ.ಡೊಂಬರ ಮತ್ತೂರ ಮಾತನಾಡಿ, ಕಾರ್ಮಿಕ ಇಲಾಖೆಯಿಂದ ಛಾಯಾಗ್ರಾಹಕರನ್ನು ಗುರುತಿಸುವ ಕೆಲಸ ಮಾಡಲಾಗುತ್ತಿದೆ. ಡಾ.ಬಿ.ಆರ್.ಅಂಬೇಡ್ಕರ್ ಸಹಾಯ ಹಸ್ತ ಯೋಜನೆಯಡಿ, ಕಾರ್ಮಿಕ ಇಲಾಖೆಯಲ್ಲಿ ನೊಂದಣಿಯಾದ ಛಾಯಾಗ್ರಾಹಕರಿಗೆ ಇಲಾಖೆಯಿಂದ ಸ್ಮಾರ್ಟ್ ಕಾರ್ಡುಗಳನ್ನು ನೀಡಲಾಗುತ್ತದೆ. ಈ ಯೋಜನೆಯಡಿ ಅಪಘಾತದಿಂದ ಮೃತಪಟ್ಟರೆ ೧ ಲಕ್ಷ ರೂ ಪರಿಹಾರ, ಅಪಘಾತದಲ್ಲಿ ತೀವ್ರ ಗಾಯಗೊಂಡರೆ ೫೦ ಸಾವಿರದ ವರೆಗೆ ಚಿಕಿತ್ಸಾ ವೆಚ್ಚ, ಸಹಜ ಸಾವು ಸಂಭವಿಸಿದರೆ ಅವರ ಕುಟುಂಬದವರಿಗೆ ಅಂತ್ಯಕ್ರಿಯೆಗೆ ೧೦ ಸಾವಿರ ನೀಡಲಾಗುವುದು. ನೋಂದಣಿ ಉಚಿತವಾಗಿದ್ದು. ಪ್ರತಿಯೊಬ್ಬರು ಇದರ ಸೌಲಭ್ಯ ಪಡೆಯಬೇಕು ಎಂದರು.


ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಡಿವೈಎಸ್ಪಿ ಡಾ.ಟಿ.ಮಂಜುನಾಥ, ಪವಿತ್ರ ಹೃದಯ ದೇವಾಲಯದ ಫಾದರ್ ಭಗವಂತರಾಜ್, ಅಂಚೆ ಇಲಾಖೆ ಅಧಿಕಾರಿ ಬಿ.ರಾಜಪ್ಪ ಭಾಗವಹಿಸಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಅಸೋಸಿಯೇಷನ್ ಗೌರವಾಧ್ಯಕ್ಷ  ತೈಯಬ್ ಹುಸೇನ್, ಅಧ್ಯಕ್ಷ ಎ.ಎಂ.ಮಲ್ಲಿಕಾರ್ಜುನ ಗೌಡ  ಹಾಗು. ಛಾಯಾಗ್ರಾಹಕರ ಸಂಘದ ಪದಾಧಿಕಾರಿಗಳು, ಛಾಯಾಗ್ರಾಹಕರು ಭಾಗವಹಿಸಿದ್ದರು.


ಛಾಯಾಗ್ರಾಹಕರ ದಿನಾಚರಣೆ ಅಂಗವಾಗಿ ಬೆಳಿಗ್ಗೆ ಹಂಪಿಯಿಂದ ಜ್ಯೋತಿ ತರಲಾಯಿತು. ನಂತರ ಛಾಯಾಚಿತ್ರ ಪ್ರದರ್ಶನ,  ದಿವಂಗತರಾದ ಛಾಯಾಗ್ರಾಹಕ ಕುಟುಂಬದವರಿಗೆ ಸಂತಾಪ ಸನ್ಮಾನ, ಸಂಗೀತ ಕಾರ್ಯಕ್ರಮ, ಜಿಲ್ಲೆಯ ತಾಲೂಕು ಘಟಕದ ಅಧ್ಯಕ್ಷರುಗಳಿಗೆ ಸನ್ಮಾನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಿದವು. ಸಂಜಯ್ ಕುಮಾರ್ ಸ್ವಾಗತಿಸಿದರು. ಸಂದೀಪ್ ನಾಯ್ಡು ಪ್ರಾಸ್ತಾವಿಕ ಮಾತುಗಳನ್ನಾಡಿದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ