ಹುಕ್ಕೇರಿ.ರೈತರ ಬೆಳವಣಿಗೆಗೆ, ಉದ್ದಾರಕ್ಕಾಗಿ ತಾಲೂಕಿನ ಸಮಗ್ರ ನೀರಾವರಿ ಯೋಜನೆ ಜಾರಿಯಾಗಲಿ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅದ್ಯಕ್ಷ ಚೂನಪ್ಪ ಪೂಜೇರಿ ಹೇಳಿದರು.
ಹುಕ್ಕೇರಿ ನಗರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾ ಘಟಕ ಹಮ್ಮಿಕೊಂಡ ಬೃಹತ್ ಪ್ರತಿಭಟನೆಯನ್ನು ರೈತ ಗೀತೆ ಯೊಂದಿಗೆ ರಾಜ್ಯ ಗೌರವ ಅದ್ಯಕ್ಷ ಶಶಿಕಾಂತ ಪಡಸಲಗಿ ಗುರುಗಳು ಚಾಲನೆ ನೀಡಿದರು.
ನಂತರ ಮಾತನಾಡಿದ ಚೂನಪ್ಪ ಪೂಜೇರಿ ಹುಕ್ಕೇರಿ ತಾಲೂಕಿನಲ್ಲಿ ಎರಡು ಜಲಾಶಯ ಮತ್ತು ಮೂರು ನದಿಗಳು ಹರಿಯುತ್ತಿದ್ದರು ಇಲ್ಲಿಯ ಜನರಿಗೆ ಮತ್ತು ರೈತರ ಜಮಿನುಗಳಿಗೆ ನೀರು ಸಿಗುತ್ತಿಲ್ಲಾ ಇದು ಯಾವ ನ್ಯಾಯ ಹುಕ್ಕೇರಿ ತಾಲೂಕಿನಿಂದ ಪಕ್ಕದ ಎರಡು ಜಿಲ್ಲೆ ಮತ್ತು ಬೆಳಗಾವಿ ನಗರಕ್ಕೆ ನೀರು ಹೋಗುತ್ತದೆ ಆದರೆ ಇಲ್ಲಿಯ ಜನರು ನಿರಾವರಿ ಯಿಂದ ವಂಚಿತರಾಗಿದ್ದಾರೆ ಕಾರಣ ಇಂದು ಹುಕ್ಕೇರಿ ನಗರದ ಮುಖ್ಯ ರಸ್ತೆ ಮೇಲೆ ವೇದಿಕೆ ನಿರ್ಮಿಸಿ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ ಕಾರಣ ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯ ಮಂತ್ರಿ ಹಾಗೂ ನೀರಾವರಿ ಸಚಿವ ಡಿ ಕೆ ಶಿವಕುಮಾರ ಸೇರಿದಂತೆ ಈ ಭಾಗದ ಶಾಸಕರು, ಜಿಲ್ಲಾ ಉಸ್ತುವಾರಿಗಳು ಮತ್ತು ನೀರಾವರಿ ಅಧಿಕಾರಿಗಳು ಸ್ಥಳಕ್ಕೆ ಬಂದು ನಮ್ಮ ಮನವಿ ಸ್ವೀಕರಿಸಿ ಯೋಜನೆಗೆ ರೂಪ ರೇಷೆ ಯೊಂದಿಗೆ ಬಜೆಟ್ ಅನುಮೊದನೆ ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆ ಯಲ್ಲಿ ಮಾಜಿ ಸಂಸದ ರಮೇಶ ಕತ್ತಿ, ಮಹಾವೀರ ನಿಲಜಗಿ, ಯಮಕನಮರ್ಡಿ ಪೂಜ್ಯರು ಸೇರಿದಂತೆ ತಾಲೂಕಾ ರೈತ ಸಂಘಟನೆ ತಾಲೂಕಾ ಅದ್ಯಕ್ಷ ಸಂಜೀವ ಹಾವನ್ನವರ, ಉಪಾಧ್ಯಕ್ಷ ವಸುರೇಶ ಘಸ್ತಿ, ರವೀಂದ್ರ ಚಿಕ್ಕೋಡಿ, ಸಿದ್ದಪ್ಪಾ ನಾಯಿಕ, ಪ್ರದೀಪ ಮಾನೆ, ಕರವೇ ಕಾರ್ಯಕರ್ತರು ಹಾಗೂ ಹುಕ್ಕೇರಿ ತಾಲೂಕಿನ ಸಾವಿರಾರು ರೈತರು,ಮಹಿಳೆಯರು ಪಾಲ್ಗೊಂಡಿದ್ದರು.
ನಂತರ ಶಶಿಕಾಂತ ಗುರುಜಿ ಮಾತನಾಡಿದರು.
ಆದರೆ ರೈತರ ಹೋರಾಟಕ್ಕೆ ವಿವಿಧ ರೈತ ಸಂಘಟನೆಯಲ್ಲಿ ಅಪಸ್ವರ ಕೇಳಿ ಬಂದಿದೆ
ಹುಕ್ಕೇರಿ ತಾಲೂಕಿನಲ್ಲಿ ಸಮಗ್ರ ನೀರಾವರಿ ಯೋಜನೆ ಜಾರಿ ಕುರಿತು ಕರ್ನಾಟಕ ರಾಜ್ಯ ರೈತ ಸಂಘದ ಹೋರಾಟಕ್ಕೆ ಭಾರತೀಯ ಕೃಷಿಕ ಸಮಾಜದ ಚಿಕ್ಕೋಡಿ ಜಿಲ್ಲಾ ಅದ್ಯಕ್ಷ ದುಂಡನಗೌಡಾ ಪಾಟೀಲ ಅಸಮಾದಾನ ವ್ಯಕ್ತ ಪಡಿಸಿ ಮಾದ್ಯಮಗಳೊಂದಿಗೆ ಮಾತನಾಡುತ್ತಾ ಈಗಾಗಲೇ 2015 - 16 ನೇ ಸಾಲಿನಲ್ಲಿ ಹುಕ್ಕೇರಿ ತಾಲೂಕಿನ ರೈತ ಸಂಘಟನೆಗಳ ಮುಖಂಡರಾದ ಡಿ ಟಿ ಪಾಟೀಲ,ದಿವಂಗತ ಬಿ ಆರ್ ಸಂಗಪ್ಪಗೋಳ, ಗುಂಡು ಪಾಟೀಲ,ರಾಮಚಂದ್ರ ಜೋಶಿ ಸೇರಿದಂತೆ ಹಲವಾರು ಮುಖಂಡರು ಹುಕ್ಕೇರಿ ತಾಲೂಕು ಸಮಗ್ರ ನೀರಾವರಿ ಯೋಜನೆಗೆ ಆಗ್ರಹಿಸಿ ತಹಸಿಲ್ದಾರ ಕಾರ್ಯಾಲಯ ಎದುರು ಬೃಹತ್ ಸಮಾವೇಶ ಜರುಗಿಸಿ ಹೋರಾಟಕ್ಕೆ ಚಾಲನೆ ನೀಡಲಾಗಿತ್ತು ಅಂದಿನಿಂದ ವಿವಿಧ ರೈತಪರ ಸಂಘಟನೆಗಳು ಮೆಲಿಂದ ಮೇಲೆ ಹೋರಾಟ ಮಾಡುತ್ತಾ ಬಂದಿದ್ದೇವೆ ಅಲ್ಲದೆ ಇತ್ತೀಚಿಗೆ ನಮ್ಮ ನೀರು ನಮ್ಮ ಹಕ್ಕು ಹೋರಾಟದ ಮೂಲಕ ಪುನರ್ ಚಾಲನೆ ನೀಡಲಾಗಿದೆ ಆದರೆ ಇಂದು ಹುಕ್ಕೇರಿ ನಗರದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಯಾವದೆ ಸಂಘಟನೆಗಳಿಗೆ ಅವ್ಹಾನ ನೀಡದೆ ನಮ್ಮನ್ನು ದೂರು ಇಟ್ಟು ಹೋರಾಟ ಮಾಡುವದು ಎಷ್ಟು ಸಮಂಜಸ ಎಂದು ಅಸಮಾದಾನ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಅರುಣ ಶಂಕರ ರಾವಣ, ಆನಂದ ಬೇಟೆಗಾರ ಸೇರಿದಂತೆ ಹಲವಾರು ರೈತರು ಉಪಸ್ಥಿತರಿದ್ದರು.
