ಹೊಸಪೇಟೆ, ಮೇ 14: ಸನಾತನ ಧರ್ಮವನ್ನು ಸರ್ವನಾಶ ಮಾಡಬೇಕು ಎಂದು. ತಮಿಳುನಾಡು. ಶಾಸಕ ಉದಯನಿಧಿ ಸ್ಟಾಲಿನ. ತಮಿಳುನಾಡು ವಿಧಾನಸಭೆಯಲ್ಲಿ ಹೇಳಿಕೆಯನ್ನು ಖಂಡಿಸಿ ಹಿಂದೂ ಸನಾತನ ಸಂರಕ್ಷಣಾ ಸಮಿತಿ, ಹೊಸಪೇಟೆ ವಿಜಯನಗರ ಜಿಲ್ಲೆ ವತಿಯಿಂದ ದಿನಾಂಕ 15 ರಂದು ಸಾಯಂಕಾಲ ಪಂಜಿನ ಮೆರವಣಿಗೆ ಮೂಲಕ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.ಎಂದು ಇಂದು ನಡೆದ ಸುದ್ದಿ
ಗೋಷ್ಠಿಯಲ್ಲಿ. ತಿಳಿಸಿದರು. ನಗರದ ವಡಕರಾಯ ಗುಡಿಯಿಂದ ಡಾ. ಪುನೀತ್ ರಾಜ್‍ಕುಮಾರ್ ವೃತ್ತದವರೆಗೆ ಈ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಎಂದು ತಿಳಿಸಿದರು
ಈ ಪ್ರತಿಭಟನೆಯಲ್ಲಿ ಎಲ್ಲ ಸಮಾಜದ ಗುರುಗಳು ಹಾಗೂ ಮುಖಂಡರು ಭಾಗವಹಿಸಲಿದ್ದಾರೆ.. ಜೈನ ಸಮಾಜದ ಅಶೋಕ್ ಮೋದಿ, ಸವಿತಾ ಸಮಾಜದ ರೋಪೇಶ್ ಕುಮಾರ್, ಮಾದಿಗ ಸಮಾಜದ ವೀರಸ್ವಾಮಿ, ಅಶೋಕ್ ಜೀರೆ, ನಾಯಕ ಸಮಾಜದ ಶ್ರೀನಿವಾಸ್, ಕುರಬ ಸಮಾಜದ ಎಲ್.ಎಸ್. ಆನಂದ್, ಬ್ರಾಹ್ಮಣ ಸಮಾಜದ ದಿವಾಕರ್, ರೇವಣಸಿದ್ಧಪ್ಪ, ಲಂಬಾಣಿ ಸಮಾಜದ ಮುಖಂಡ ರಾಮಜೀ ನಾಯ್ಕ. ಸೇರಿದಂತೆ ವಿವಿಧ ಸಮಾಜಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.
ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಕ್ಷಣಗಳಲ್ಲಿ ಸನಾತನ ಧರ್ಮದ ವಿರುದ್ಧ ಹೇಳಿಕೆ ನೀಡಿರುವುದು ಖಂಡನೀಯ ಎಂದು ಸಮಿತಿ ತಿಳಿಸಿದೆ.
