ರನ್ನ ಬೆಳಗಲಿ:ಜೂ.೨೯., ಕಲುಷಿತ ವಾತಾವರಣ, ಅಶುದ್ದ ನೀರು,ವಿಪರೀತ ರಾಸಾಯನಿಕ ಬಳಕೆಯ ತರಕಾರಿಗಳ ಬಳಕೆಯಿಂದಾಗಿ ಇಂದಿನ ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ಹಲವು ರೋಗಗಳಿಗೆ ತುತ್ತಾಗುತ್ತಿದ್ದಾರೆ. ಮಕ್ಕಳ ಆರೋಗ್ಯ ರಕ್ಷಣೆಗೆ ಪೌಷ್ಟಿಕ ಆಹಾರ ನೀಡುವದು ಇಂದನ ಅಗತ್ಯವಾಗಿದೆ ಎಂದು ಕೊಪ್ಪಳದ ಧರ್ಮಸ್ಥಳ ಪ್ರಾದೇಶಿಕ ಕಚೇರಿಯ ನಿರ್ದೇಶಕ ಚಂದ್ರಶೇಖರ ಜೆ.ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಬಾಗಲಕೋಟೆ ಜಿಲ್ಲಾ ಕಚೇರಿ, ಮುಧೋಳ ಯೋಜನಾ ಕಚೇರಿ, ರನ್ನ ಬೆಳಗಲಿ ವಲಯಯದ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ಷೇತ್ರ ನಾಗರಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪೌಷ್ಟಿಕ ಆಹಾರ ಮತ್ತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮನೆಯ ಆಹಾರವೇ ಆರೋಗ್ಯಕ್ಕೆ ಆಧಾರ, ಮಕ್ಕಳಿಗೆ ಆರೋಗ್ಯದ ಅರಿವು ಮೂಡಿಸಬೇಕು.ಬೇಕರಿ ಸೇರಿದಂತೆ ಹೊರಗಿನ ತಿಂಡಿತಿನಿಸುಗಳನ್ನು ಕಡಿಮೆ ಮಾಡಿ, ಮನೆಯಲ್ಲಿಯೇ ಮಕ್ಕಳಿಗೆ ಪೌಷ್ಟಿಕ ಆಹಾರಗಳನ್ನು ತಯಾರಿಸಿ ಕೊಡುವ ಮೂಲಕ ಮಕ್ಕಳ ಆರೋಗ್ಯ ರಕ್ಷಣೆಯಲ್ಲಿ ತಾಯಂದಿರ ಪಾತ್ರ ಪ್ರಮುಖವಾಗಿದೆ ಎಂದರು.
ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಶ್ರೀಶೈಲಗೌಡ ಪಾಟೀಲ,ಜಿಲ್ಲಾ ನಿರ್ದೇಶಕರಾದ ಚನ್ನಕೇಶ, ಮುಧೋಳ ಯೋಜನಾ ನಿರ್ದೇಶಕ ಎನ್. ರಾಜು ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಮಹಿಳೆಯರ ಆರ್ಥಿಕ ಅಭಿವೃದ್ಧಿ, ದೇವಸ್ಥಾನಗಳ ಜೀರ್ಣೋದ್ಧಾರ, ಕೆರೆ ಸ್ಮಶಾನಗಳ ಅಭಿವೃದ್ಧಿ, ನಿರ್ಗತಿಕರಿಗೆ ಮಾಸಾಸನ, ವಾತ್ಸಲ್ಯ ಮನೆ, ಜ್ಞಾನವಿಕಾಸ ಕಾರ್ಯಕ್ರಮ, ವಿದ್ಯಾರ್ಥಿ ಶಿಷ್ಯವೇತನ, ಮಧ್ಯ ವರ್ಜನ ಶಿಬಿರ ಸೇರಿದಂತೆ ಜನಸಾಮಾನ್ಯರ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ಅರ್ಹರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗಳ ಪ್ರಯೋಜನ ಪಡೆದುಕೊಂಡು ಸ್ವಾವಲಂಬಿಗಳಾಗಿ ಧರ್ಮ, ನ್ಯಾಯ ಸಮ್ಮತ ಬದುಕನ್ನು ಸಾಗಿಸಬೇಕು ಎಂದರು.
ಪ್ರೌಢಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಸಿದ್ದಪ್ಪ ರಡರೆಟ್ಟಿ, ನಿವೃತ್ತ ಹಿರಿಯ ನಿರೀಕ್ಷನಾಧಿಕಾರಿ ಡಿ.ವಿ.ನಾಗನೂರು, ನಾಗರಾಳ ಒಕ್ಕೂಟದ ರೇಖಾ ಪಾಟೀಲ, ಮಳಲಿ ಆರೋಗ್ಯ ಇಲಾಖೆ ಹಿರಿಯ ನಿರೀಕ್ಷಣಾಧಿಕಾರಿ ಈರಣ್ಣ ಕೋರಿಶೆಟ್ಟಿ, ಜ್ಞಾನವಿಕಾಸ ಸಮನ್ವಯಾಧಿಕಾರಿ ಸುವರ್ಣಾ ನಂದಿಕೋಲಮಠ, ಸೇವಾಪ್ರತಿನಿಧಿ ಗೋವಿಂದಪ್ಪ ಗಿರವ್ವಗೊಳ ಸೇರಿದಂತೆ ಕೇಂದ್ರದ ಸದಸ್ಯರು, ಸೇವಾಪ್ರತಿನಿಧಿಗಳು, ಗ್ರಾಮಸ್ಥರು ಇದ್ದರು.