Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರೈತರಿಗೆ ಅನುಕೂಲಕ್ಕೆ ಹೆಸ್ಕಾಂ ವಿಭಾಗ ಕಚೇರಿ: ಮುಖ್ಯ ಸಚೇತಕ ಅಶೋಕ ಪಟ್ಟಣ

ರಾಮದುರ್ಗ: ತಾಲೂಕಿನ ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸಾಕಷ್ಟು ಶ್ರಮ ಪಟ್ಟು ಹೆಸ್ಕಾಂ ವಿಭಾಗ ಕಚೇರಿಯನ್ನು ತೆರೆಯಲಾಗಿದೆ. ಅಲ್ಲದೇ ತಾಲೂಕಿನ ಸಾಕಷ್ಟು ಭಾಗಗಳಲ್ಲಿ ವಿದ್ಯುತ್ ವಿತರಣಾ ಉಪ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದ್ದು, ಇದರಿಂದ ರೈತರಿಗೆ ಆಗುವ ವಿದ್ಯುತ್ ಸಮಸ್ಯೆ ನಿವಾರಣೆಯಾಗಲಿದೆ ಎಂದು ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.

ಪಟ್ಟಣದಲ್ಲಿ ರಾಮದುರ್ಗ ಹೆಸ್ಕಾಂ ವಿಭಾಗ ಹಾಗೂ ಉಪ ವಿಭಾಗ ಕಛೇರಿಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಟಿಸಿ ಸುಟ್ಟಾಗ ರೈತರು ಅದನ್ನು ಪಡೆದುಕೊಳ್ಳಲು ಬೈಲಹೊಂಗಲಕ್ಕೆ ಅಲೆದಾಡಬೇಕಿತ್ತು. ಅದನ್ನು ತಪ್ಪಿಸುವ ಉದ್ದೇಶದಿಂದ ಸರಕಾರದ ಮಟ್ಟದಲ್ಲಿ ಶ್ರಮಪಟ್ಟು ಇಲ್ಲಿಯೇ ಕಚೇರಿ ನಿರ್ಮಿಸಲಾಗಿದೆ ಎಂದು ಹೇಳಿದರು.

ತಾಲೂಕಿನ ಜನತೆಗೆ ವಾಹನ ನೋಂದಣಿಗೆ ಹಾಗೂ ಡಿವೈಎಸ್ಪಿ ಕಚೇರಿಗೆ ಕೆಲಸಗಳಿಗೆ ಬೈಲಹೊಂಗಲಕ್ಕೆ ಹೋಗುತ್ತಿದ್ದರು. ಈ ಎಲ್ಲಾ ಕಚೇರಿಗಳನ್ನು ಪಟ್ಟಣದಲ್ಲಿ ತಂದು ಜನರಿಗೆ ಅನುಕೂಲ ಕಲ್ಪಿಸಿದರೆ ಅದರ ಬಗ್ಗೆ ಕೃತಜ್ಞತೆಯನ್ನು ತೋರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮುಂದೆ ತಾಲೂಕಿನಲ್ಲಿ ರೈತರು ವಿದ್ಯುತ್ ಸಮಸ್ಯೆ ಎದುರಿಸಬಾರದು ಎಂಬ ಉದ್ದೇಶದಿಂದ ಬಟಕುರ್ಕಿ, ಸುರೇಬಾನ, ಹುಲಕುಂದ ಗ್ರಾಮದಲ್ಲಿರುವ ೩೩ ಕೆ.ವಿ. ವಿದ್ಯುತ್ ಪರಿವರ್ತಕ ಸ್ಟೇಶನ್‌ಗಳನ್ನು ೧೧೦ ಕೆ.ವಿ.ಗೆ ಮೇಲ್ದರ್ಜೆಗೇರಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ವಿದ್ಯುತ್‌ನ ಅಭಾವ ತಪ್ಪಿಸಲು ಸಾಲಹಳ್ಳಿಯಲ್ಲಿ ರೂ. ೧೦೬ ಕೋಟಿ ವೆಚ್ಚದ ೨೨೦ ಕೆ.ವಿ. ಸ್ಟೇಶನ್ ಕಾಮಗಾರಿ ಮುಕ್ತಾಯ ಹಂತದಲ್ಲಿದೆ.

ತಾಲೂಕಿನ ಪದಮಂಡಿ, ಸಾಲಾಪೂರ, ಮುದೇನೂರ, ಬುದ್ನಿಖುರ್ದ, ಮಾಗನೂರ, ತೋರಣಗಟ್ಟಿ, ಚಿಲಮೂರ ಗ್ರಾಮದಲ್ಲಿ ಸುಮಾರು ೨೦ ಕೋಟಿ ರೂ. ವೆಚ್ಚದ ಹೊಸ ವಿದ್ಯುತ್ತ ೧೧೦ ಕೆವಿ ಸ್ಟೇಷನ್ ಮಂಜೂರಾತಿ ದೊರೆತಿದೆ. ಪಿ.ಎಂ. ಕುಸಮ್ ಯೋಜನೆಡಿಯಲ್ಲಿ ರಾಮದುರ್ಗ, ಮೂದೇನೂರ, ಬಟಕುರ್ಕಿ ಗ್ರಾಮದಲ್ಲಿ ಸೋಲಾರ್ ಪಾರ್ಕ್ ನಿರ್ಮಾಣ ಮಾಡಲಾಗಿದೆ ಎಂದರು.

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಗಮದ ಅಧ್ಯಕ್ಷ ಸೈಯದ್ ಅಜೀಮ್ ಪೀರ ಎಸ್ ಖಾದ್ರಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಯನ್ನು ರಾಜ್ಯದ ಪ್ರತಿಶತ ೯೮ ರಷ್ಟು ರಾಜ್ಯದ ಜನತೆ ಉಪಯೋಗಿಸುತ್ತಿದೆ. ಅಲ್ಲದೇ ರಾಜ್ಯ ಕಾಂಗ್ರೆಸ್ ಸರಕಾರ ಬಡವರ ಮತ್ತು ರೈತರ ಪರವಾಗಿ ಸಾಕಷ್ಟು ಕೆಲಸ ಮಾಡುತ್ತಿದೆ. ಅಲ್ಲದೇ ತಾಲೂಕಿನ ಅಭಿವೃದ್ದಿಗಾಗಿ ಶಾಸಕ ಅಶೋಕ ಪಟ್ಟಣ ಅವರು ಸಾಕಷ್ಟು ಅನುದಾನ ತಂದಿದ್ದು, ಅವರನ್ನು ಪಡೆದ ನಿವೇ ಧನ್ಯರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯ ವ್ಯವಸ್ಥಾಪಕಿ ನಿರ್ದೇಶಕಿ ವೈಶಾಲಿ ಎಂ.ಎನ್, ಪುರಸಭೆ ಅಧ್ಯಕ್ಷೆ ಲಕ್ಷ್ಮೀ ಕಡಕೋಳ, ಪಂಚ ಗ್ಯಾರಂಟಿಗಳ ಸಮಿತಿ ಅಧ್ಯಕ್ಷ ಜಿ.ಬಿ. ರಂಗನಗೌಡ್ರ, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯ ನಿರ್ದೆಶಕ ಎಸ್. ಜಗದೀಶ, ಬೆಳಗಾವಿ ವಲಯದ ಮುಖ್ಯ ಇಂಜಿನೀಯರ್ ಪ್ರವೀಣಕುಮಾರ ಚಿಕಡೆ ಮಾತನಾಡಿದರು.

ಇಲಾಖೆ ಅಧೀಕ್ಷಕ ಇಂಜಿನೀಯರ್ ರಾಜೇಂದ್ರ ಕೋರೆ, ಬೆಳಗಾವಿ ವಲಯ ಕಾರ್ಯನಿರ್ವಾಹಕ ಇಂಜಿನೀಯರ್ ಬಿ.ವೈ. ಹೊಳೆಗಾರ, ಗುತ್ತಿಗೆದಾರ ಗೋಪಾಲರಡ್ಡಿ ಸಂಶಿ ಸೇರಿದಂತೆ ಇಲಾಖೆಯ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

ಹೆಸ್ಕಾಂ ವಿಭಾಗದ ಇಇ ಕಿರಣ ಸಣ್ಣಕ್ಕಿ ಸ್ವಾಗತಿಸಿದರು. ಲಕ್ಷ್ಮಣ ಅಣ್ಣಿಗೇರಿ ನಿರೂಪಿಸಿದರು. ಹೆಸ್ಕಾಂ ಉಪ ವಿಭಾಗದ ಎಇಇ ಶಿವಪ್ರಕಾಶ ಕರಡಿ ವಂದಿಸಿದರು.ಪೋಟೋ ಶೀರ್ಷಿಕೆ: ೨೫ಆರ್‌ಎಂಡಿ.೧ & ೧-ಎ
ರಾಮದುರ್ಗ: ರಾಮದುರ್ಗದ ಹೆಸ್ಕಾಂ ವಿಭಾಗ ಹಾಗೂ ಉಪ ವಿಭಾಗ ಕಛೇರಿಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ಶಾಸಕ ಅಶೋಕ ಪಟ್ಟಣ ಉದ್ಘಾಟಿಸಿದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ