Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಹಿಳಾ ಉದ್ಯಮಶೀಲರಿಗೆ ಸಹಾಯ


ಹುಬ್ಬಳ್ಳಿ,ಜೂ,೦೫ :  : ಬೆಲ್‌ಸ್ಟಾರ್ ಮೈಕ್ರೋಫೈನಾನ್ಸ್ ಲಿಮಿಟೆಡ್ ಸುಸ್ಥಿರ ಜೀವನೋಪಾಯ ನಿರ್ಮಿಸುವಲ್ಲಿ ಮಹಿಳಾ ಉದ್ಯಮಶೀಲರಿಗೆ ಬೆಂಬಲ ನೀಡುವುದನ್ನು ಮುಂದುವರೆಸಿದೆ, ಇದು ಆರ್ಥಿಕ ಸೇರ್ಪಡೆ ಮತ್ತು ತಳಮಟ್ಟದ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದೆ.

ಹುಬ್ಬಳ್ಳಿಯ ಶ್ರೀಮತಿ ಖೈರುನಾಬಿ ಅವರು ಕೋವಿಡ್-೧೯ ಸಾಂಕ್ರಾಮಿಕ ಸೋಂಕು ಕಾಣಿಸಿಕೊಂಡ ಸಮಯದಲ್ಲಿ ಬೆಲ್‌ಸ್ಟಾರ್ ಮೈಕ್ರೋಫೈನಾನ್ಸ್ ಲಿಮಿಟೆಡ್ ಕಂಪನಿಯಿಂದ ೫೦,೦೦೦ ರೂ. ಕಿರುಸಾಲ ಪಡೆದು ಸಣ್ಣ ಉಡುಪು ವ್ಯವಹಾರ ಆರಂಭಿಸಿದರು.

ತನ್ನ ಮನೆಯಲ್ಲೇ ಕೇವಲ ೧೦೦ ಉಡುಪುಗಳು ಮತ್ತು ಸೀರೆಗಳ ಆರಂಭಿಕ ದಾಸ್ತಾನಿನೊಂದಿಗೆ ಉದ್ದಿಮೆ ಆರಂಭಿಸಿದ ಖೈರುನಾಬಿ, ಸಾಲದ ವಿವೇಚನಾಯುಕ್ತ ಬಳಕೆಯ ಮೂಲಕ ಕ್ರಮೇಣ ತನ್ನ ವ್ಯವಹಾರ ವಿಸ್ತರಿಸಿದರು. ಹೆಚ್ಚುತ್ತಿರುವ ಗ್ರಾಹಕರ ಬೇಡಿಕೆಯೊಂದಿಗೆ, ಅವರು ೪೦೦ ಚದರ ಅಡಿಯಲ್ಲಿ ಕೆಲಸದ ಸ್ಥಳ ವಿಸ್ತರಿಸಿ, ತಮ್ಮ ವ್ಯವಹಾರ ಕಾರ್ಯಾಚರಣೆಗಳನ್ನು ಸ್ಥಿರವಾಗಿ ಹೆಚ್ಚಿಸುತ್ತಾ ಬಂದರು. ಕಾಲಾನಂತರದಲ್ಲಿ, ಇದೇ ಉದ್ಯಮವು ಅವರಿಗೆ ಇಬ್ಬರು ಮಕ್ಕಳ ವಿವಾಹ ಸೇರಿದಂತೆ ಕುಟುಂಬದ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಲು ಅನುವು ಮಾಡಿಕೊಟ್ಟಿತು. ಅಂತಿಮವಾಗಿ ಅವರು ಹೆಚ್ಚುವರಿ ಉಡುಪು ಮಳಿಗೆಗಳನ್ನು ತೆರೆದರು.

Advertisement

ಇದೀಗ ಖೈರುನಾಬಿ ೨ ಗಾರ್ಮೆಂಟ್(ಸಿದ್ಧ ಉಡುಪುಗಳು) ಮಳಿಗೆಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದು, ಒಟ್ಟಾರೆ ಮಾಸಿಕ ೪೦,೦೦೦ ರೂ. ಲಾಭ ಗಳಿಸುತ್ತಿದ್ದಾರೆ. ಸಕಾಲಿಕ ಹಣಕಾಸಿನ ಲಭ್ಯತೆಯಿಂದಾಗಿ, ಮಹಿಳೆಯರು ಕುಟುಂಬದ ಆದಾಯ ಬಲಪಡಿಸಲು ಮತ್ತು ಸ್ಥಳೀಯ ಆರ್ಥಿಕ ಚಟುವಟಿಕೆಗೆ ಕೊಡುಗೆ ನೀಡಲು ಹೇಗೆ ಅನುವು ಮಾಡಿಕೊಡುತ್ತಿದೆ ಎಂಬುದನ್ನು ಅವರ ವ್ಯವಹಾರ ಪ್ರಯಾಣವೇ ಪ್ರತಿಬಿಂಬಿಸುತ್ತಿದೆ.

ಕರ್ನಾಟಕವು ದೇಶದ ಅತಿದೊಡ್ಡ ಸಣ್ಣ ಹಣಕಾಸು ಅಥವಾ ಕಿರುಬಂಡವಾಳ ಮಾರುಕಟ್ಟೆಗಳಲ್ಲಿ ಒಂದಾಗಿದ್ದು, ೫೦.೩೫ ಲಕ್ಷಕ್ಕೂ ಹೆಚ್ಚು ಅನನ್ಯ ಸಾಲಗಾರರು ಮತ್ತು ೨೮,೧೧೯ ಕೋಟಿ ರೂ. ಮೊತ್ತದ ಒಟ್ಟು ಸಾಲ ಬಂಡವಾಳ ಹೊಂದಿದೆ. ಖೈರುನಾಬಿ ಅವರಂತಹ ಯಶೋಗಾಥೆಗಳು ಕರ್ನಾಟಕ ರಾಜ್ಯಾದ್ಯಂತ ಉದ್ಯಮಶೀಲತೆಯನ್ನು ಬೆಂಬಲಿಸುವಲ್ಲಿ ಮತ್ತು ಸಮಗ್ರ ಆರ್ಥಿಕ ಬೆಳವಣಿಗೆ ಹೆಚ್ಚಿಸುವಲ್ಲಿ ಕಿರುಬಂಡವಾಳದ ಪಾತ್ರವನ್ನು ಎತ್ತಿ ತೋರಿಸುತ್ತಿದೆ.

ಬೆಲ್‌ಸ್ಟಾರ್ ಮೈಕ್ರೋಫೈನಾನ್ಸ್ ಲಿಮಿಟೆಡ್ ಮಹಿಳೆಯರೇ ಮುನ್ನಡೆಸುವ  ಉದ್ಯಮಗಳಿಗೆ ಅಗತ್ಯ-ಆಧಾರಿತ ಹಣಕಾಸು ಸೇವೆಗಳಿಗೆ ಪ್ರವೇಶ ವಿಸ್ತರಿಸಲು, ದೀರ್ಘಕಾಲೀನ ಆರ್ಥಿಕ ಸ್ಥಿರತೆ ಬೆಳೆಸಲು ಮತ್ತು ತನ್ನ ಗ್ರಾಹಕರಿಗೆ ಸುಧಾರಿತ ಜೀವನ ಮಟ್ಟವನ್ನು ಸಾಧಿಸಲು ಸಂಪೂರ್ಣ ಬದ್ಧವಾಗಿದೆ.

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರತಿಯೊಂದು ಜೀವ ಸಂಕುಲ ಪರಿಸರವನ್ನು ಅವಲಂಬಿಸಿದೆ : ಜೈವರ್ಧನ ಶಾಸಕ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಮಾತಂಗಿ ಸಮಾಜದಿಂದ ವಿಶೇಷ ಪೂಜೆ, ಸರ್ಕಾರಕ್ಕೆ ಮನವಿಬಸವೇಶ್ವರ ಸೌಹಾರ್ದ ಸಹಕಾರಿ ಸಂಘ ಉದ್ಘಾಟನೆಮುಂದಿನ ಬಾರಿ ಮಹಿಳೆಗೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎನ್ನುವ ವಿಶ್ವಾಸ ಇದೆ ; ಲಕ್ಷ್ಮೀ ಹೆಬ್ಬಾಳ್ಕರ್ ಅರಣ್ಯ ನಾಶದಿಂದ ಪ್ರಕೃತಿಯ ಸಮತೋಲನ ಹಾಳಾಗುತ್ತಿದೆ : ಶ್ರೀಶೈಲ ಗುಡಮೆ ಪ್ರಕಾಶ ಕೆಳಗೇರಿ ವೇಯ್ಟ ಲಿಫ್ಟಿoಗ ಸ್ಪರ್ಧೆಯಲ್ಲಿ ದ್ವೀತಿಯ ಸ್ಥಾನ. ವಿಶ್ವ ಪರಿಸರ ದಿನಾಚರಣೆ: ಬಳ್ಳಾರಿಯಲ್ಲಿ 5,000 ಸಸಿ ನೆಡುವ ಕಾರ್ಯಕ್ರಮಕ್ಕೆ ಡಿಸಿ ನಾಗೇಂದ್ರ ಪ್ರಸಾದ್.ಕೆ ಚಾಲನೆಪ್ಲಾಸ್ಟಿಕ ಮುಕ್ತ ಜೀವನ ಶೈಲಿ ಅಲವಡಿಸಕೊಳ್ಳಿ: ಸದಾಶಿವ ಮಕ್ಕೋಜಿವಿಕ್ರಮಪೂರ ಶಾಲೆಯಲ್ಲಿ ಸಡಗರದ ವಿಶ್ವ ಪರಿಸರ ದಿನಾಚರಣೆ:*ಡಿಸಿಎಂ ಸ್ಥಾನಕ್ಕಾಗಿ ಮಸೀದಿ ದರ್ಗಾದಲ್ಲಿ ಪ್ರಾರ್ಥನೆ; ಕಾಂಗ್ರೆಸ್ ಹೈಕಮಾಂಡ್‌ಗೆ ಮುಸ್ಲಿಂ ಸಮುದಾಯದ ಸಂದೇಶ*