Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಆರೋಗ್ಯ ಶಿಬಿರಗಳು ಬಡವರಿಗೆ ಸಹಕಾರಿ: ಸನತ್ ಕುಮಾರ್

ಬೆಳಗಾವಿ:  ಮನುಷ್ಯನಿಗೆ ಆರೋಗ್ಯವಾಗಿರಲು ಉತ್ತಮ ಆಹಾರವನ್ನು ಸೇವಿಸಬೇಕು, ಇಂದಿನ ಆಹಾರ ಪದ್ದತಿಯಿಂದಲೇ ಮನುಷ್ಯನು ರೋಗಗಳಿಂದ ಬಲಿಯಾಗುತ್ತಿದ್ದಾನೆ. ಹಿರಿಯ ನಾಗರಿಕರು ಆದಷ್ಟೂ ವೈದ್ಯರ ಸಲಹೆ ಪಡೆದುಕೊಂಡು ಆರೋಗ್ಯದೆಡೆ ಸಾಗಬೇಕು ಎಂದು    ಗೊಮಟೇಶ ವಿದ್ಯಾಪೀಠದ ಪದಾಧಿಕಾರಿ  ಸನತ್ ಕುಮಾರ್ ಹೇಳಿದರು.

ಇಲ್ಲಿನ  ಹಿಂದವಾಡಿಯ ಗೊಮಟೇಶ ವಿದ್ಯಾಪೀಠದಲ್ಲಿ ಅ.28 ರಂದು  ಕಾಂತ್ರಿ ಮಹಿಳಾ ಮಂಡಳ ಮತ್ತು ಉಮಾ ಸಂಗೀತ ಪ್ರತಿಷ್ಠಾನ  ಹಾಗೂ ಯೂನಿಕೇರ್ ಹಾಸ್ಪಿಟಲ್ ನವರ ಸಹಯೋಗದಲ್ಲಿ  ಜಾಗತಿಕ ಹಿರಿಯ ನಾಗರಿಕ ದಿನಾಚರಣೆ ನಿಮಿತ್ಯ ಹಿರಿಯ ನಾಗರಿಕ ದಿನಾಚರಣೆ ಆಚರಿಸಿ, ಉಚಿತ ಆರೋಗ್ಯ ಶಿಬಿರ ತಪಾಸಣೆಯ ಕಾರ್ಯಕ್ರಮ ಚಾಲನೆ  ನೀಡಿ ಮಾತನಾಡಿದರು.

ರೋಗಗಳು ಬರುವ ಮನ್ನ ಎಚ್ಚರ ವಹಿಸಬೇಕು. ಮನುಷ್ಯನಿಗೆ ಕಾಯಿಲೆ, ಸಮಸ್ಯೆ ಬರುವುದು ಸಹಜ,  ಎಲ್ಲದಕ್ಕೂ ಸೂಕ್ತ ಪರಿಹಾರವಿದೆ. ರೋಗದ ಲಕ್ಷಣ ಕಾಣುವ ಮುನ್ನವೇ ಆಗ್ಗಾಗ್ಗೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವೈದ್ಯರು ನೀಡುವ ಸಲಹೆ ಪಾಲಿಸಬೇಕು  ಸಮಾಜಮುಖಿ ಕಾರ್ಯವನ್ನು ಮಾಡುತ್ತಿರುವ ಸಂಘ-ಸಂಸ್ಥೆಯ  ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಆರೋಗ್ಯ ಶಿಬಿರಗಳಿಂದ ಬಡವರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಇಂತಹ ಶಿಬಿರಗಳು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಆಯೋಜಿಸಬೇಕು ಎಂದು ತಿಳಿಸಿದರು.


ಸ್ತ್ರೀರೋಗ ತಜ್ಞರಾದ ಡಾ. ಮುಕ್ತಾ ಆಲಕುಂಟೆ  ಅವರು ಮಾತನಾಡಿ,  ಸ್ತ್ರೀಯರು ಖತುಮತಿ ವೇಳೆ ಸಮಸ್ಯೆಯಾದ ಪರಿಹಾರ ತೆಗೆದುಕೊಳ್ಳಬೇಕು. ನಿರ್ಲರ್ಕ್ಷ್ಯ ವಹಿಸಿದರೆ  ಗರ್ಭಕೋಶಕ್ಕೆ ತೊಂದರೆಯಾಗಬಹುದು ಆದಷ್ಟೂ ಸ್ತ್ರೀಯರು ಎಚ್ಚರಿಕೆಯಿಂದ ಇರಬೇಕು. ಸ್ತನ ಸಮಸ್ಯೆ  ಎದರಾದರೂ ವೈದ್ಯರ ಸಲಹೆ ಅಗತ್ಯವಿದೆ. ಮಹಿಳೆಯರು ಕೆಲವೊಂದು ಸಮಯದಲ್ಲಿ ಆರೋಗ್ಯ ಕಡೆ ಬಹಳಷ್ಟು ಕಾಳಜಿ ವಹಿಸಿಬೇಕು ಎಂದು ಹೇಳಿದರು.

ಎಲುಬು ಹಾಗೂ ಕೀಲು ತಜ್ಞರಾದ ಡಾ. ಪವನ ಆಲ ಕುಂಟೆ ಅವರುಮಾತನಾಡಿ,  ಮುಪ್ಪಿನ ವಯಸ್ಸನಲ್ಲಿ ಬಿದ್ದಾಗ ಅಥವಾ ಕುಳಿತು ಏಳುವಾಗ  ಎಲುಬುಗಳು  ಬೇಗನೆ ಮುರಿಯುವ ಸಾಧ್ಯತೆ ಇರುತ್ತದೆ.  ಅದಕ್ಕೆ ಬೇಗನೆ ಬಂದು ಪರಿಹಾರವನ್ನು ಕಂಡುಕೊಳ್ಳಬೇಕು ಅವಶ್ಯಕತೆ ಇದ್ದರೆ ಹೆದರದೇ ಶಸ್ತ್ರಚಿಕಿತ್ಸೆ ಮಾಡಿಕೊಂಡು ಆರೋಗ್ಯಯುತ್ತವಾಗಿರಬೇಕು ಎಂದು ಹೇಳಿದರು.

ಇಳಿ ವಯಸ್ಸನಲ್ಲಿಎಲುಬು ,  ಕೀಲು ಸಮಸ್ಯೆ ಸರ್ವೇ ಸಾಮಾನ್ಯ ಹೀಗಾಗಿ ಹಿರಿಯರು ಗುಣಮಟ್ಟದ ಆಹಾರವನ್ನು ಸೇವಿಸಿ,  ದೇಹಕ್ಕೆ ವ್ಯಾಯಾಮ ಅಗತ್ಯವಿದೆ ಮತ್ತು ವೈದ್ಯರ ಸಲಹೆ ಪಡೆಯಬೇಕು ಎಂದು ಹೇಳಿದರು.

ಯೂನಿಕೇರ ಆಸ್ಪತ್ರೆಯ ಎಲುಬು ಕೀಲುಗಳ ತಜ್ಞರಾದ ಡಾ. ಅರವಿಂದ ಹಂಪಣ್ಣವರ ಮಾತನಾಡಿ,   ಸಮಾಜಕ್ಕೆ ಒಂದಿಷ್ಟೂ ಅಳಿಲು ಸೇವೆಯನ್ನು ಪ್ರತಿಯೊಬ್ಬರ ಮಾಡಬೇಕು. ಆ ಕಾರ್ಯವನ್ನು ಯೂನಿಕೇರ್ ಆಸ್ಪತ್ರೆ ವತಿಯಿಂದ ಸಮಾಜಕ್ಕೆ ಸಹಾಯ ಸಹಕಾರ ನೀಡುವ ಮಹತ್ವದ ಕೆಲಸವಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಕೆಲಸ ನಿರಂತರವಾಗಿ ಸಾಗಲಿದೆ ಎನ್ನುತ್ತ,  ಕ್ರಾಂತಿ ಮಹಿಳಾ ಮಂಡಳ ಹಾಗೂ ಉಮಾ ಸಂಗೀತ ಪ್ರತಿಷ್ಠಾನ ಮಾಡುತ್ತಿರುವ ಹಲವಾರು ಸಮಾಜಮುಖಿ ಕಾರ್ಯಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಈ ವೇಳೆ ಸುಮಾರು 200 ಕ್ಕೂ ಅಧಿಕ ನಾಗರಿಕರಿಗೆ  ಶುಗರ್ ,  ಬಿಪಿ ಹಾಗೂ ಎಲುಬು ಕೀಲು  ವೈದ್ಯಕೀಯ  ತಪಾಸಣೆ ನಡೆಸಲಾಯಿತು.

ಈ ವೇಳೆ  ಹಿರಿಯ ನಾಗರಿಕರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.  ಹಿರಿಯ ನಾಗರಿಕರು ಹಾಗೂ ನಿವೃತ್ತ ಸೈನಿಕರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ವಿ.ಎಂ.ಬನೋಸಿ ,  ಪ್ರಸಾದ್ ಆರ್ . ಹಿರೇಮಠ, ಡಾ.ಬಸವರಾಜ ಮಲ್ಲೇಶಪ್ಪ ಗೋಮಾಡಿ , ರುದ್ರಪ್ಪ ಚೌಳಿಗೇರ ,  ವಿಶ್ವಾಸ ರಾವ್ ನಾರಾಯಣ ದುರಾಜಿ, ಸುರೇಂದ್ರ ದಿಗಂಬರ್ ದೇಸಾಯಿ,  ಮಂಡಳದ ಅಧ್ಯಕ್ಷೇ  ಮಂಗಲ ಮಠದ ಅವರು ಸ್ವಾಗತಿಸಿದರು.  ಕಾರ್ಯದರ್ಶಿ ಭಾರತಿ ರತ್ನಪಗೊಳ ಪ್ರಾಸ್ತಾವಿಕವಾಗಿ ಮಾತನಾಡಿದರು.  ಅಶ್ವಿನಿ ನವಲೆ  ಪ್ರಾರ್ಥಿಸಿದರು.   ಶೈಲಾ ದೇಶಪಾಂಡೆ ಅತಿಥಿ ಪರಿಚಯಿಸಿದರು. ಹೇಮಾ ಬರಬರೆ ವಂದಿಸಿದರು. ಜ್ಯೋತಿ ಬಾನೆ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸಾವಿರಾರು  ಹಿರಿಯ ನಾಗರಿಕರು ಹಾಗೂ ಮಂಡಳದ ಮಹಿಳೆಯರು ಹಾಗೂ ಇತರರಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ