ಬಳ್ಳಾರಿ. ಜು01:: ತಾಲೂಕಿನ ಪರಮದೇವನಹಳ್ಳಿ (ಹಗರಿ ) ಪೊಲೀಸ್ ಠಾಣೆಯಲ್ಲಿ ಸುಮಾರು ಎಂಟು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಹೆಡ್ ಕಾನ್ಸ್‌ಟೇಬಲ್ ಹನುಮೇಶ ಅವರು ಕುರುಗೋಡು ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದಾರೆ.
2018ರಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಆಗಿ ಪಿ.ಡಿ. ಹಳ್ಳಿ ಠಾಣೆಗೆ ಬಂದ ಅವರು, 2023ರಲ್ಲಿ ಹೆಡ್ ಕಾನ್ಸ್‌ಟೇಬಲ್ ಆಗಿ ಬಡ್ತಿ ಹೊಂದಿದ ಬಳಿಕವೂ ಇದೇ ಠಾಣೆಯಲ್ಲಿ ಸೇವೆ ಮುಂದುವರಿಸಿದ್ದರು. ಕರ್ತವ್ಯದ ಅವಧಿಯಲ್ಲಿ ನಿಷ್ಠೆ, ಪ್ರಾಮಾಣಿಕತೆ ಹಾಗೂ ಶ್ರದ್ಧೆಯಿಂದ ಸೇವೆ ಸಲ್ಲಿಸಿದ್ದು, ಅಧಿಕಾರಿಗಳ ಮಾರ್ಗದರ್ಶನ ಮತ್ತು ಸಿಬ್ಬಂದಿಯ ಸಹಕಾರದಿಂದ ಉತ್ತಮ ಅನುಭವಗಳನ್ನು ಪಡೆದು ಸೇವೆ ಸಲ್ಲಿಸುವುದು ಸಾಧ್ಯವಾಗಿದೆ ಠಾಣೆಯ ಎಲ್ಲಾ ಅಧಿಕಾರಿಗಳನ್ನು ಮತ್ತು ನಮ್ಮ ವ್ಯಾಪ್ತಿಯ ಸಾರ್ವಜನಿಕರನ್ನು ನನಗೆ ಈ ಠಾಣೆಯಲ್ಲಿ ಕೆಲಸ ಮಾಡಲು ನನಗೆ ಸಹಕರಿಸಿದ ಎಲ್ಲಾ ಅಧಿಕಾರಿಗಳಿಗೂ ಹಾಗೂ ಠಾಣೆಯ ವ್ಯಾಪ್ತಿಯ ಸಾರ್ವಜನಿಕರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ ಜೊತೆಗೆ ಈ ಠಾಣೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರೊಂದಿಗೆ ಬೆಳೆಸಿಕೊಂಡಿರುವ ಆತ್ಮೀಯ ಬಾಂಧವ್ಯ ನನ್ನ ಜೀವನದ ಅಮೂಲ್ಯ ನೆನಪು. ಇಲ್ಲಿಂದ ಮರೆಯಲಾರದ ಅನುಭವಗಳನ್ನು ಹೊತ್ತು ಸಾಗುತ್ತಿದ್ದೇನೆ,” ಎಂದು ಹನುಮೇಶ ಹೇಳಿದ್ದಾರೆ.
ಪಿ.ಡಿ. ಹಳ್ಳಿ ಪೊಲೀಸ್ ಠಾಣೆ ಇನ್ನಷ್ಟು ಉತ್ತಮ ಸೇವೆ ಸಲ್ಲಿಸಿ, ಮಾದರಿ ಠಾಣೆಯಾಗಿ ಹೆಸರುವಾಸಿಯಾಗಲಿ ಹಾಗೂ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಯಶಸ್ಸು ಕಾಣಲಿ ಎಂದು ಅವರು ಶುಭ ಹಾರೈಸಿ ಬಿಳ್ಕೊಟ್ಟರು.
ಈ ಸಂಧರ್ಭದಲ್ಲಿ ಠಾಣೆಯ ಪಿಎಸ್ ಐ ತಿಮ್ಮಾರೆಡ್ಡಿ, ಎ.ಎಸ್.ಐ ರುದ್ರಮುನಿ, ಎಸ್ ಬಿ ಗಾದಿಲಿಂಗ, ಕುಮಾರಸ್ವಾಮಿ, ಹೊನ್ನೂರಸ್ವಾಮಿ, ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರು ಇದ್ದರು.