ಇಂಡಿ,ಜು,೦೮ : ಮುಂಗಾರು ಹಂಗಾಮು ಪ್ರಾರಂಭವಾಗಿದೆ, ರೈತರು ಅಲ್ಲಲ್ಲಿ ಸಾಲ ಮಾಡಿ ಬಿತ್ತನೆ ಮಾಡಿ ಮತ್ತೆ ತೊಂದರೆಗೆ ಸಿಲುಕಿದ್ದಾರೆ, ಕಳೆದ ಬಾರಿ ಭಾರಿ ಪ್ರಮಾಣದ ಮಳೆಯಾಗಿದೆ ರೈತ ಬೆಳೆ ಕಳೆದುಕೊಂಡು ಕಣ್ಣೀರಿಟ್ಟ, ಈ ಬಾರಿ ಮಳೆಯಾಗದೆ ಬೆಳೆ ಕಳೆದುಕೊಂಡು ಕಣ್ಣೀರಿಡುತ್ತಿದ್ದಾನೆ ಕೂಡಲೆ ಸರ್ಕಾರ ಇಂಡಿ ತಾಲೂಕನ್ನು ಬರಗಾಲ ಘೋಷಣೆ ಮಾಡಲೇಬೇಕು ಎಂದು ಇಂಡಿ ತಾಲೂಕು ಕ. ರ. ವೆ ಅಧ್ಯಕ್ಷರು ಬಾಳು ಮುಳಜಿ ವಿನಂತಿಸಿಕೊಂಡರು.
ಇಂಡಿ ತಾಲೂಕಿನ ತಹಶೀಲ್ದಾರ್ ಕಚೇರಿಗೆ ತೆರಳಿ ಇಂಡಿ ತಾಲೂಕಿಗೆ ಮಳೆಯಾಗದೆ ಈಗಾಗಲೇ ಭೀಕರ ಬರ ವಾತಾವರಣ ಶೃಷ್ಟಿ ಯಾಗಿದ್ದು ಬರಗಾಲ ಘೋಷಣೆ ಮಾಡುವಂತೆ ತಹಶೀಲ್ದಾರ್ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿದರು.
ರೈತರಿಗೆ ನೀರಿನ, ವಿದ್ಯುತ್, ರಸ್ತೆಗಳ ವ್ಯವಸ್ಥೆ ಸರಿಯಾಗಿಲ್ಲ, ಇಗಿನ ಪರಿಸ್ಥಿತಿ ಅಧಿಕಾರಿಗಳು ಖುದ್ದಾಗಿ ಗ್ರಾಮಗಳಿಗೆ ತೆರಳಿ, ಅಲ್ಲಿನ ಸಮಸ್ಸೆ ಆಲಿಸಿ, ಸರ್ಕಾರಕ್ಕೆ ವಿಷಯ ತಿಳಿಸಬೇಕು, ರೈತರು ಬಿತ್ತನೆ ಮಾಡಿದ್ದು ನೀರಿನ ಸಮಸ್ಸೆ ಬಹಳಷ್ಟಿದೆ, ಕೂಡಲೆ ಕೇನಾಲಗಳಿಗೆ ನೀರು ಹರಿಸುವ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ ಕೂಡಲೆ ಮಾಡಬೇಕು ಇಲ್ಲವಾದಲ್ಲಿ ಮುಂದೆ ನಡೆಯುವ ಅನಾಹುತಗಳಿಗೆ ಸರ್ಕಾರ ಮತ್ತು ಸರ್ಕಾರಿ ಅಧಿಕಾರಿಗಳು ಉತ್ತರ ಕೊಡಲು ಸಿದ್ಧರಾಗಬೇಕು ಎಂದರು.
ಈ ಸಂದರ್ಭದಲ್ಲಿ ಮಹೇಶ ಹೂಗಾರ, ದುಂಡುಗೌಡ ಬಿರಾದಾರ, ಕೆ ವಿ ಪಾಟೀಲ, ಸುನೀಲ ಮಠ,ಸಚೀನ ನಾವಿ, ಶಿವನಂದ ಮಡಿವಾಳ,ಸಾಗರ ಬಿರಾದಾರ,ರಾಮ ಹುಬ್ಬಳ್ಳಿ ಉಪಸ್ಥಿತರಿದ್ದರು.