Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹನುಮನ ಜಯಂತಿ: ಸಾಮೂಹಿಕ `ಗದಾಪೂಜೆ'

ಹುಬ್ಬಳ್ಳಿ,23 :ಶ್ರೀ ಹನುಮನ ಜಯಂತಿಯ ಸಂದರ್ಭದಲ್ಲಿ ಹಿಂದೂಗಳಲ್ಲಿ ವೀರತೆಯನ್ನು ಜಾಗೃತಗೊಳಿಸಲು ಹಾಗೂ ರಾಮರಾಜ್ಯದ ಕಾರ್ಯಕ್ಕಾಗಿ ಬಲಪ್ರಾಪ್ತಿಗಾಗಿ ಹಿಂದೂ ಜನಜಾಗೃತಿ ಸಮಿತಿ ಹಾಗೂ ಸಮವಿಚಾರಿ ಹಿಂದುತ್ವವಾದಿ ಸಂಘಟನೆಗಳಿಂದ ಜ್ ಧಾರವಾಡ ಜಿಲ್ಲೆಯಾದ್ಯಂತ 15 ಕಡೆಗಳಲ್ಲಿ ಸಾಮೂಹಿಕ `ಗದಾಪೂಜೆ'ಯನ್ನು ಆಯೋಜಿಸಲಾಗಿದೆ.

ಇದರೊಂದಿಗೆ  ಗದಗ, ಬಳ್ಳಾರಿ,ಬೆಂಗಳೂರು, ದಕ್ಷಿಣ ಕನ್ನಡ  ಮತ್ತು ಇತರ ಜಿಲ್ಲೆಯಲ್ಲಿ ಗದಾಪೂಜೆಯನ್ನು ಮಾಡಲಾಗಿದೆ. ನಗರದ ಪ್ರಮುಖ ದೇವಸ್ಥಾನಗಳಲ್ಲಿ ಹಾಗೂ ಹನುಮಂತ ದೇವರ ದೇವಸ್ಥಾನಗಳಲ್ಲಿ ಗದಾ ಪೂಜೆ ಹಾಗೂ ರಾಮರಾಜ್ಯದ ಪ್ರತಿಜ್ಞೆ ಮಾಡಿಸಲಾಯಿತು.

ಈ ಕಾರ್ಯಕ್ರಮವನ್ನು ಶಂಖನಾದದೊಂದಿಗೆ ಆರಂಭಿಸಲಾಯಿತು. ಇದರ ನಂತರ ಸಾಮೂಹಿಕ ಪ್ರಾರ್ಥನೆ, `ಗದಾಪೂಜೆ'ಯ ಅನುಷ್ಠಾನ, ಶ್ರೀ ಮಾರುತಿಯ ಆರತಿ, ಶ್ರೀ ಹನುಮಾನ ಚಾಲೀಸಾ ಪಠಣದೊಂದಿಗೆ `ಶ್ರೀ ಹನುಮತೇ ನಮಃ' ಈ ಸಮೂಹಿಕ ನಾಮಜಪ ಮಾಡಲಾಯಿತು. `ಧರ್ಮಸಂಸ್ಥಾಪನೆಗಾಗಿ ಹನುಮಂತನ ಗುಣಗಳನ್ನು ಹೇಗೆ ಮೈಗೂಡಿಸಿಕೊಳ್ಳಬೇಕು ?' ಎಂಬುದರ ಬಗ್ಗೆ ಮಾರ್ಗದರ್ಶನ ಮಾಡಲಾಯಿತು. ಕಾರ್ಯಕ್ರಮದ ಅಂತ್ಯದಲ್ಲಿ `ರಾಮರಾಜ್ಯದ ಸ್ಥಾಪನೆಗಾಗಿ ಸಾಮೂಹಿಕ ಪ್ರತಿಜ್ಞೆ' ಮಾಡಿಸಲಾಯಿತು.

ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ್ ಶಿಂದೆಯವರು ಈ ಗದಾಪೂಜೆಯ ಹಿಂದಿನ ಉದ್ದೇಶ ತಿಳಿಸುತ್ತಾ  ಯುಗಯುಗಗಳಿಂದ ಮಾರುತಿಯ ಗಧೆಯನ್ನು ಅವರ ಶೌರ್ಯದ ಪ್ರತೀಕವಾಗಿ ಗುರುತಿಸಲಾಗುತ್ತದೆ. ಅವರು ಇದೆ ದೈವೀ ಗದೆಯಿಂದ ಶಕ್ತಿಶಾಲಿ ರಾಕ್ಷಸರನ್ನು ಸಂಹರಿಸಿದ್ದರು ಹಾಗೂ ಶ್ರೀ ರಾಮಚಂದ್ರರ ರಾಮರಾಜ್ಯದಲ್ಲಿ ಮಹತ್ವದ ಕೊಡುಗೆಯನ್ನು ನೀಡಿದ್ದರು.

ಮಹಾಭಾರತದ ಯುದ್ಧದಲ್ಲಿಯೂ ಮಾರುತಿಯು ಅರ್ಜುನನ ರಥದ ಮೇಲೆ ಕುಳಿತು ಪಾಂಡವರಿಗೆ ಧರ್ಮಯುದ್ಧವನ್ನು ಗೆಲ್ಲಲು ದೈವೀ ಸಹಾಯ ಮಾಡಿದ್ದರು. ಛತ್ರಪತಿ ಶಿವಾಜಿ ಮಹಾರಾಜರ ಹಿಂದವೀ ಸ್ವರಾಜ್ಯದ ಸ್ಥಾಪನೆಗಾಗಿಯೂ ಸಮರ್ಥ ರಾಮದಾಸ ಸ್ವಾಮಿಗಳು ೧೧ ಮಾರುತಿಯ ಸ್ಥಾಪನೆ ಮಾಡಿ ಮಾವಳರಿಗೆ (ಶಿವಾಜಿ ಮಹಾರಾಜರ ಸೈನಿಕರಿಗೆ) ಬಲ ಪ್ರಾಪ್ತಿ ಮಾಡಿಕೊಟ್ಟಿದ್ದರು.

ಈಗ 500 ವರ್ಷಗಳ ನಂತರ ಪುನಃ ಇನ್ನೊಮ್ಮೆ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮರು ವಿರಾಜಮಾನರಾಗಿದ್ದಾರೆ. ಇಂತಹ ಸಮಯದಲ್ಲಿ ನಾವು ಪುನಃ ರಾಮರಾಜ್ಯವನ್ನು ಸ್ಥಾಪಿಸಲು ಮಾರುತಿಯಂತಹ ಭಕ್ತಿ ಹಾಗೂ ವೀರತೆಯು ಅತ್ಯಂತ ಅವಶ್ಯಕವಾಗಿದೆ. ಈ ಉದ್ದೇಶವನ್ನು ಗಮನದಲ್ಲಿಟ್ಟು ಇಂದು ಶ್ರೀ ಹನುಮಾನ ಜಯಂತಿಯ ಮಂಗಳ ದಿನದಂದು ವಿವಿಧ ಕಡೆಗಳಲ್ಲಿ ಗದಾಪೂಜೆಯನ್ನು ಆಯೋಜಿಸಲಾಗಿದೆ.

ಈ ಕಾರ್ಯಕ್ರಮಗಳಲ್ಲಿ  ವಿವಿಧ ಹಿಂದೂ ಸಂಘಟನೆಗಳ ಪದಾಧಿಕಾರಿಗಳು ಹಾಗೂ ದೊಡ್ಡ ಸಂಖ್ಯೆಯಲ್ಲಿ ಯುವಕರು ಉಪಸ್ಥಿತರಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ