Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜೀವನದಲ್ಲಿ ಮುಂದೆ ಬರಲು ಗುರುಗಳ ಮಾರ್ಗದರ್ಶನ ಮುಖ್ಯ: ಡಿ.ಎನ್.ಮಾಸ್ತಾಮ್ಮನವರ 


ಬೈಲಹೊಂಗಲ: ಜೀವನದಲ್ಲಿ ಉನ್ನತಸ್ಥಾನಮಾನ ಗಳಿಸಲು ಗುರುಗಳ ಮಾರ್ಗದರ್ಶನ ಮುಖ್ಯ, ಜೀವನದಬಗುರಿನಸಾಧನೆಗೆ ಗುರುದಾರಿದೀಪ ಎಂದು ವಿಶ್ರಾಂತ ಪ್ರಧಾನ ಶಿಕ್ಷಕ ಡಿ.ಎನ್.ಮಾಸ್ತಾಮ್ಮನವರ  ಹೇಳಿದರು.

 ಸಮೀಪದ ಹೊಸೂರ ಗ್ರಾಮದ ಎಸ್.ಎನ್.ವಿ.ವಿ.ಎಸ್.ಸಂಸ್ಥೆಯ 2004-05ನೇ ಸಾಲಿನ ಹಳೆಯ ವಿದ್ಯಾರ್ಥಿಗಳ ವತಿಯಿಂದ ಮರಡಿಬಸವೇಶ್ವರ ಸಭಾಭವನದಲ್ಲಿ ರವಿವಾರ ನಡೆದ  ಗುರುವಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ   ಮಾತನಾಡಿ, ಒಳ್ಳೆಯ ಸಮಾಜ ನಿರ್ಮಾಣ ಸಾಧ್ಯವಾಗಲು ಉತ್ತಮ ಶಿಕ್ಷಕರ ಅಗತ್ಯವಿದೆ ಎಂದರು. ಅಂಗನವಾಡಿ ಶಿಕ್ಷಕಿಯರು ಮಕ್ಕಳಲ್ಲಿರುವ ಪ್ರಾಥಮಿಕ ಹಂತದ ಭಯವನ್ನು ಹೋಗಲಾಡಿಸಿ ಶಿಕ್ಷಣಕ್ಕೆ ತಯಾರು ಮಾಡುವ ಉನ್ನತಸೇವೆ

ನೀಡುತ್ತಾರೆ. ಶಾಲಾ ಶಿಕ್ಷಕರು ಮಕ್ಕಳಿಗೆ ತಾಯಿಯ ಪ್ರೀತಿ ನೀಡಿ ಸಾಕಿಸಲಹುತ್ತಾರೆ ಎಂದರು.

ಗುರುವಂದನಾ ಕಾರ್ಯಕ್ರಮದಲ್ಲಿ 2004-05 ನೇ ಸಾಲಿನ ವಿಧ್ಯಾರ್ಥಿಗಳಿಗೆ  ಭೊದನೆ ಮಾಡಿದ್ದ ವಿಜ್ಞಾನ ಶಿಕ್ಷಕ ಎಫ್.ಎಸ್. ಸಿದ್ದನಗೌಡರ ಮಾತನಾಡಿ,ಭಾರತ ಗುರುಪರಂಪರೆಯ ದೇಶ, ಗುರುಗಳಿಗೆ ಇದ್ದಷ್ಟು ಗೌರವ ಯಾವುದೆ ಉನ್ನತವಾದ ಹುದ್ದೆಗೂ ಇಲ್ಲ.  ಗುರುಗಳು ನಮ್ಮ ಕಣ್ಣಿಗೆ ಕಾಣುವ ಮಾತೃದೇವರು. ಶಿಕ್ಷಣದ ಜೋತೆಗೆ

ರಾಷ್ಟ್ರನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ಶಿಕ್ಷಕರಿಗೆ ತಾವು ಮಾಡುವ ಕೈಂಕರ್ಯವೇ ದೊಡ್ಡ ಪುರಸ್ಕಾರ. ವಿದ್ಯಾರ್ಜನೆ ಮಾಡಿ 20ವರ್ಷಗಳ ನಂತರ ಕಲಿಸಿದ ಗುರುಗಳನ್ನು ನೆನಪಿಸಿ ಸತ್ಕರಿಸಿದ ವಿದ್ಯಾರ್ಥಿಗಳ ಕಾರ್ಯ ಉತ್ತಮ ಶಿಕ್ಷಕರಿಗೆ ಸಂದ ಗೌರವವಾಗಿದೆ. ಶಿಕ್ಷಣದ ಜೊತೆಗೆ ಸಂಸ್ಕಾರ ಇಂದಿನ ಕಾಲದ ವಿದ್ಯಾರ್ಥಿಗಳಿಗೆ ಅತ್ಯಂತ ಅವಶ್ಯಕವಾಗಿದ್ದು ಸಮಾನತೆಯ ಸಹಬಾಳ್ವೆಯ ಕಳಂಕ ರಹಿತ ಸಮಾಜ ನಿರ್ಮಾಣಕ್ಕೆ ಅನಿಯಾಗಲಿದೆ ಎಂದರು.

 ಕಾರ್ಯಕ್ರಮದ ಮುಂಚೆ ಎಲ್ಲಾ ಶಿಕ್ಷಕರು ವರ್ಗಭೊದನೆ ಮಾಡುವ ಮೂಲಕ ವಿದ್ಯಾರ್ಥಿಗಳು ತಮ್ಮ 20ವರ್ಷದ ಹಿಂದಿನ ವಿದ್ಯಾರ್ಥಿ ಜೀವನ ನೆನೆದು ಕಲಿತ ಶಾಲೆಯ ಹಳೆಯ ನೆನಪು ಮೆಲಕು ಹಾಕಿದರು.

ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕರಾದ ಡಿ.ಎನ್.ಉಪಾಧ್ಯಾಯ, ಜಿ.ಎಸ್.ಬೋಳೆತ್ತಿನ,ಈರಣ್ಣ ಬೆಂಡಿಗೇರಿ, ರವಿ ವಕ್ಕುಂದ, ರವಿ ಕೊಲಕಾರ, ಶಿಕ್ಷಕಿಯರಾದ ರತ್ನಾ ಮುಗಬಸವ ರೇಖಾ ಹಿರೆಮಠ, ಹೊಂಗಲಮಠ, ಕಂಬಾರ ಸತ್ಕರಿಸಲಾಯಿತು.

ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳಾದ  ಉಮೇಶ ಮೆಳವೆಂಕಿ, ಮೂಗಪ್ಪ ಹುದಲಿ, ವಿನಯ ಬೆಂಡಿಗೇರಿ,  ಸೋಮು ವಿವೇಕಿ, ಸೋಮಪ್ಪ ಸಂಗೋಳ್ಳಿ, ಮಹಾಂತೇಶ ಪೆಂಟೆದ, ರವಿ ಬ್ಯಾಳಿ, ಉಮಾ ಹುದಲಿ, ಸವಿತಾ ಮಸಗುಪ್ಪಿ, ರೇಣುಕಾ ಮತ್ತಿಕೊಪ್ಪ, ರಾಧಾ ಹುಡೇದ, ಶ್ರೀದೇವಿ ಹುಂಬಿ, ಲಕ್ಷ್ಮೀ ಸಂಗೋಳ್ಳಿ, ಶಕುಂತಲಾ ಪಾಟೀಲ, ಶೋಭಾ ಇಂಗಳಗಿ ಶೈಲಾ ಇಂಗಳಗಿ, ಯಲ್ಲವ್ವ ಗುಳನ್ನವರ ಸೇರಿದಂತೆ ನುರಾರು ವಿದ್ಯಾರ್ಥಿಗಳು ಇದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ