ಕಟಕೋಳ. ದಿ. 17.,ಇಲ್ಲಿಗೆ ಸಮೀಪದ ಗೊಡಚಿ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶನಿವಾರ ದಿ. 18-07-2026 ರಂದು ಬೆಳಿಗ್ಗೆ 10 ಘಂಟೆಗೆ ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸೇವಾ ಸಮಿತಿ ವತಿಯಿಂದ ಗುರುಕುಲ ಕಟ್ಟಡ ವ್ಯವಸ್ಥೆ ಸಲುವಾಗಿ ಸಮಿತಿಯ ಅಧ್ಯಕ್ಷರು ಹಾಗೂ ಬಿಡಿಸಿಸಿ ಬ್ಯಾಂಕ ನಿರ್ದೇಶಕರಾದ ಮಲ್ಲಣ್ಣ ಯಾದವಾಡ ಇವರ ಅಧ್ಯಕ್ಷತೆಯಲ್ಲಿ ಹಾಗೂ ಬೆಳಗಾವಿ ಜಿಲ್ಲೆಯ ಶಿವಾಚಾರ್ಯ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಮಹಾಸಭೆಯನ್ನು ಕಳೆಯಲಾಗಿದ್ದು, ಕಾರಣ ಸದ್ಭಕ್ತರು, ಸದಸ್ಯರು ಈ ಮಹತ್ವಪೂರ್ಣ ಸಭೆಯಲ್ಲಿ ಪಾಲ್ಗೊಳ್ಳಬೇಕೆಂದು ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ರಾಜೇಶ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.